‘ಕಚ್ಚಾ ಬದಾಮ್’ ಹಾಡಿಗೆ ಮಂಗಳಮುಖಿ ಸೆಲೆಬ್ರಿಟಿ ಪೂಜಾ ಮಾಡಿದ ಸೂಪರ್ ಡಾನ್ಸ್ ಆಯಿತು ವೈರಲ್! ಬಟ್ಟಲುಗಣ್ಣುಗಳಿಂದ ನೋಡಿದ ನೇಟಿಜನ್ಸ್ !
ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ‘ಕಚ್ಚಾ ಬದಾಮ್’ ಹಾಡಿಗೆ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳು ಹೆಜ್ಜೆ ಹಾಕಿಯೇ ಹಾಕುತ್ತಿದ್ದಾರೆ. ಈ ಹಾಡಿನ ಕ್ರೇಜ್ ದಿನದಿಂದ ದಿನಕ್ಕೆ ಕಡಿಮೆಯಾಗುವ ಬದಲು ಹೆಚ್ಚೇ ಆಗುತ್ತಿದೆ. ವಿವಿಧ ಸೆಲೆಬ್ರಿಟಿಗಳು ಈ ಹಾಡಿಗೆ ತಮ್ಮ ಪರ್ಫಾರ್ಮನ್ಸ್ ತೋರಿಸುತ್ತಿದ್ದಾರೆ. ಈಗ ಮಂಗಳಮುಖಿಯರಲ್ಲಿ ಸೆಲೆಬ್ರಿಟಿಯಾದ ಪೂಜ ಶರ್ಮ ಮುಂಬೈ ಲೋಕಲ್ ನಲ್ಲಿ ಇದೇ ಹಾಡಿಗೆ ಹೆಜ್ಜೆಗಳನ್ನು ಹಾಕಿದ್ದಾರೆ. ಇವರ ಡ್ಯಾನ್ಸ್ ನೋಡಿದ ನೇಟಿಜನ್ಸ್ ಗಳು ತುಂಬಾ ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ. ಒಟ್ಟಿನಲ್ಲಿ ಅವರ ಈ ಡಾನ್ಸ್ ಎಲ್ಲರಿಗೂ ತುಂಬಾ ಇಷ್ಟವಾಗಿದೆ.
ಇವರ ಹೆಸರು ಪೂಜಾ ಶರ್ಮ ಇದ್ದು ಮಂಗಳಮುಖಿಯರ ಸೆಲೆಬ್ರಿಟಿ ಎಂದು ಗುರುತಿಸಲಾಗುತ್ತದೆ. ಇವರು ಬಾಲಿವುಡ್ ನಟಿ ರೇಖಾ ಅವರನ್ನು ಫಾಲೋ ಮಾಡುತ್ತಾರೆ. ಇವರು ಕಾಣಲು ಹಾಗೂ ಅವರಂತೆ ಬಾಡಿ ಲ್ಯಾಂಗ್ವೇಜ್ ಹೊಂದಿರುವದರಿಂದ ಇವರಿಗೆ ರೇಖಾ ಅಂತಲೂ ಕರೆಯುತ್ತಾರೆ. ಇತ್ತೀಚೆಗೆ ಮುಂಬೈಯ ಲೋಕಲ್ ಟ್ರೈನ್ ನಲ್ಲಿ ಪೂಜಾ ಶರ್ಮ ಕಚ್ಚಾ ಬದಾಮ ಹಾಡಿಗೆ ಸಕತ್ತಾಗಿ ನೃತ್ಯ ಮಾಡಿದ್ದಾರೆ.
ವಿಶೇಷವೆಂದರೆ ಇವರು ಡಾನ್ಸ್ ನ ಕಾಪಿ ಮಾಡದೆ ತಮ್ಮದೇಯಾದ ವಿನೂತನ ಸ್ಟೈಲ್ ನಲ್ಲಿ ತುಂಬ ಸಿಂಪಲ್ಲಾಗಿ ಅಷ್ಟೇ ಸಹಜವಾಗಿ ಡಾನ್ಸ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಮಂಗಳಮುಖಿ ಪೂಜಾ ಶರ್ಮ ಕೇಸರಿ ಬಣ್ಣದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅವರ ಡ್ಯಾನ್ಸ್ ಸ್ಟೆಪ್ ಗಳು ನೋಡಲು ಸರಳ ಮತ್ತು ಸಹಜವಾಗಿದ್ದರೂ ನೇಟಿಜನ್ಸ್ ಗಳಿಗೆ ಮಾತ್ರ ತುಂಬಾ ವಿಶೇಷವೆನಿಸಿದೆ. ಪೂಜಾ ಡ್ಯಾನ್ಸ್ ಮಾಡುವಾಗ ಎಷ್ಟೋ ಜನರು ತಮ್ಮ ಮೊಬೈಲ್ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದ ವಿವಿಧ ಪ್ಲಾಟ್ ಫಾರ್ಮ್ ಗಳಲ್ಲಿ ಶೇರ್ ಮಾಡಲಾಗಿದ್ದು ಅಲ್ಲಿ ವೈರಲ್ ಆಗುತ್ತಿದೆ. ಇಲ್ಲಿಯವರೆಗೆ ಕಚ್ಚಾ ಬಾದಾಮ್ ಹಾಡಿಗೆ ಎಲ್ಲರೂ ಮಾಡಿದ ಒಂದೇ ರೀತಿಯ ಡಾನ್ಸ್ ನೋಡಿ ತುಂಬಾ ಬೇಸರಿಕೆ ಉಂಟಾಗಿತ್ತು. ಆದರೆ ಪೂಜಾ ಶರ್ಮ ಮಾಡಿದ ಡಾನ್ಸ್ ತುಂಬಾನೇ ವಿಶೇಷ ಮತ್ತು ಯೂನಿಕ್ ಆಗಿತ್ತು ಎಂದು ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ‘poojasharmaoficial’ ಹೆಸರಿನಿಂದ ಶೇರ್ ಮಾಡಲಾಗಿದೆ. ಪ್ರತಿಕ್ರಿಯೆಗಳಲ್ಲಿ ಎಲ್ಲರೂ ಹೆಚ್ಚಾಗಿ ಪೂಜಾ ಶರ್ಮ ಅವರಿಗೆ ಶ್ಲಾಘಿಸಿದ್ದಾರೆ. ಒಬ್ಬ ನೇಟಿಜನ್ ‘ಮೇಡಂ ನೀವು ತುಂಬಾ ಅದ್ಭುತವಾಗಿ ಡಾನ್ಸ್ ಮಾಡಿದ್ದೀರಾ’ ಎಂದು ಹೇಳಿದ್ದಾನೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ. ಪ್ರಸ್ತುತ ವಿಡಿಯೋಗೆ ಇಲ್ಲಿಯವರೆಗೆ 14 ಸಾವಿರ ಲೈಕ್ಸ್ ಗಳು ಬಂದಿವೆ.
ವಿಡಿಯೋ ನೋಡಿ
View this post on Instagram