ಕಚ್ಚಾ ಬಾದಾಮ್ ಸೂಪರ್ ಡ್ಯಾನ್ಸ್ ನ ನಂತರ, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ತಮಿಳ್ ಹಾಡು ‘ಮಯಾಕಿರ್ರಿಯೆ’ ಹಾಡಿಗೆ ಕುಣಿದರು ಮತ್ತೊಮ್ಮೆ… ನೋಡಿ ಈ ವೈರಲ್ ವಿಡಿಯೋ.

ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಇತ್ತೀಚೆಗೆ ಟ್ರೆಂಡಿಂಗ್ ಸಾಂಗ್ ಆದ ಕಚ್ಚಾ ಬಾದಾಮ್ ಹಾಡಿನ ಮೇಲೆ ನೃತ್ಯ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ನೇಟಿಜನ್ಸ್ ಗಳಿಗೆ ಅವರ ಈ ಡ್ಯಾನ್ಸ್ ಭರ್ಜರಿಯಾಗಿಯೇ ಇಷ್ಟವಾಯಿತು. ಮತ್ತು ಇದು ಸೋಶಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸಿತ್ತು. ಈಗ ಇದೇ ಪಿವಿ ಸಿಂಧು ಅವರು ತಮಿಳಿನ ಸೂಪರ್ ಸಾಂಗ್ ಅನಿರುದ್ಧ್ ರವಿಚಂದರ್ ಅವರು ಹಾಡಿದ ‘ಮಯಕಿರ್ರಿಯೆ ಫಿರ್ಕಿರ್ರಿಯೇ’ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ.

ಶೇರ್ ಮಾಡಿದ ಈ ವಿಡಿಯೋದಲ್ಲಿ ಪಿವಿ ಸಿಂಧು ಅವರು ತಮಿಳಿನ ‘ಮಯಾಕಿರ್ರಿಯೆ’ ಹಾಡಿಗೆ ಹುಕ್ ಸ್ಟೆಪ್ ಹಾಕಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಎಲ್ಲ ಕಡೆಗೆ ಸದ್ದು ಮಾಡುತ್ತಿದೆ. ಪಿವಿ ಸಿಂಧು ಅವರು ಈ ಹಾಡಿಗೆ ಬ್ಲೂ ಡೆನಿಮ್, ಮೇಲೆ ಪಿಂಕ್ ಬಣ್ಣದ ಜಾಕೆಟ್ ಜೊತೆಗೆ ಕ್ಯಾಪ್ ತೊಟ್ಟುಕೊಂಡಿದ್ದಾರೆ. ವಿಡಿಯೋ ಶೇರ್ ಮಾಡುವಾಗ ಅದರ ಜೊತೆಗೆ “Dance is the joy of movement,” ಎಂದು ಬರೆದಿದ್ದಾರೆ. ಕೆಲವು ಹ್ಯಾಶ್ ಟ್ಯಾಗ್ ಗಳನ್ನು ಸಹಿತ ನೀಡಿದ್ದಾರೆ. #livelifetothefullest, #lovethelifeyoulive, and #reelitfeelit.

ವಿಡಿಯೋ ನೋಡಿ

 

View this post on Instagram

 

A post shared by Sindhu Pv (@pvsindhu1)

ಅವರು ಶೇರ್ ಮಾಡಿದ ಡ್ಯಾನ್ಸ್ ನ ಈ ವಿಡಿಯೋ ಇಲ್ಲಿಯವರೆಗೆ ಒಂದು ಮಿಲಿಯನ್ ಜನ ವೀಕ್ಷಿಸಿದ್ದಾರೆ ಮತ್ತು ಸುಮಾರು ಎರಡು ಲಕ್ಷ ಜನರು ಲೈಕ್ ನೀಡಿದ್ದಾರೆ. ಪಿವಿ ಸಿಂಧು ಅವರ ಅಭಿಮಾನಿಗಳು ಅವರ ಈ ಡ್ಯಾನ್ಸ್ ನ್ನು ತುಂಬಾ ಇಷ್ಟ ಪಟ್ಟಿದ್ದಾರೆ. ಮತ್ತು ಕಮೆಂಟ್ ಗಳಲ್ಲಿ ಪಿವಿ ಸಿಂಧು ಅವರ ಡ್ಯಾನ್ಸಿಗೆ ಹೊಗಳಿದ್ದಾರೆ.