ಕಬ್ಬು ತಿನ್ನಲು ಟ್ರಕ್ ನಿಲ್ಲಿಸಿದ ಆನೆ! ಟ್ರಕ್ ಚಾಲಕನನ್ನು ಹೊಗಳಿದ ಜನ! ನೋಡಿ ಈ Viral Video!

ಜೀವ ಜಂತುಗಳಲ್ಲಿ ವನ್ಯ ಪ್ರಾಣಿಗಳು ಅಂದರೆ ಇಂದಿನ ದಿನಗಳಲ್ಲಿ ಜನರಿಗೆ ವಿಶೇಷವಾದ ಆಸಕ್ತಿ. ಏಕೆಂದರೆ ದಿನ ಕಳೆದಂತೆ ಕಾಡಿನ ಪ್ರಮಾಣ ಕಡಿಮೆಯಾಗುತ್ತಿದ್ದು, ವನ್ಯ ಜೀವಿಗಳು ಕೂಡಾ ಕಣ್ಮರೆಯಾಗುತ್ತಿವೆ‌.‌ ನಾವೇನಿದ್ದರೂ ಅವುಗಳನ್ನು ಪ್ರಾಣಿ ಸಂಗ್ರಹಾಲಯಗಳಲ್ಲಿ, ಅಭಯಾರಣ್ಯಗಳಲ್ಲಿ ಅಥವಾ ರಾಷ್ಟ್ರೀಯ ಉದ್ಯಾನಗಳಲ್ಲಿ ಮಾತ್ರ ಅವುಗಳನ್ನು ನೋಡಲು ಸಾಧ್ಯ. ಆದ್ದರಿಂದಲೇ ಈ ಜೀವಿಗಳ ಕುರಿತಾದ ಸಂಗತಿಗಳ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದಾಗ ಸಹಜವಾಗಿಯೇ ಅವು ಜನರ ಗಮನವನ್ನು ಸೆಳೆಯುತ್ತವೆ‌. ಆ ಜೀವಿಗಳ ಸಾಹಸಮಯ ಜೀವನವನ್ನು ನೋಡಿದಾಗ ಅದ್ಭುತ ಎನಿಸುವ ಜೊತೆಗೆ ಅವುಗಳ ನಮಗೆ ತಿಳಿಯದ ಅದೆಷ್ಟೋ ವಿಷಯಗಳು ಕೂಡಾ ತಿಳಿದು ಬರುತ್ತವೆ.

ವನ್ಯ ಜೀವಿಗಳಲ್ಲಿ ಆನೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ನಮ್ಮಲ್ಲಿ ಆನೆಗೆ ಪೂಜನೀಯ ಸ್ಥಾನವನ್ನು ಕೂಡಾ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ದೊಡ್ಡ ದೊಡ್ಡ ದೇವಾಲಯಗಳಲ್ಲಿ ಆನೆಗಳನ್ನು ಕೂಡಾ ಸಾಕಿರುವುದನ್ನು ನಾವು ನೋಡಿದ್ದೇವೆ. ದೇಗುಲಕ್ಕೆ ಹೋಗುವ ಭಕ್ತರು ಆನೆಗೆ ಹಣ್ಣನ್ನು ಅಥವಾ ಹಣವನ್ನು ನೀಡಿ ಅದರ ಆಶೀರ್ವಾದ ಕೂಡಾ ಪಡೆಯುತ್ತಾರೆ‌. ಆನೆಗಳು ಗಾತ್ರದಲ್ಲಿ ದೊಡ್ಡದಾಗಿದ್ದರೂ ಕೂಡಾ ಒಂದು ರೀತಿಯಲ್ಲಿ ಮುಗ್ಧ ಪ್ರಾಣಿಗಳೇ ಅವು ಎನ್ನಬಹುದು‌. ಇಲ್ಲದೇ ಹೋಗಿದ್ದರೆ ಅಷ್ಟು ಬಲಶಾಲಿ ಆನೆಯನ್ನು ಮನುಷ್ಯ ಹೇಗೆ ತಾನೇ ತನ್ನ ನಿಯಂತ್ರಣಕ್ಕೆ ತರಲು ಸಾಧ್ಯ ಇತ್ತು ಅಲ್ಲವೇ?

ಇಂತಹ ಆನೆಗಳಿಗೆ ಇಷ್ಟವಾದ ತಿನಿಸುಗಳಲ್ಲಿ ಕಬ್ಬು ಕೂಡಾ ಒಂದು‌. ಆಗಾಗ ಕಬ್ಬಿನ ತೋಟಕ್ಕೆ ಅರಣ್ಯಗಳ ಬಳಿ ಆನೆಗಳು ಧಾ ಳಿ ಇಟ್ಟಿದ್ದವೆಂಬ ಸುದ್ದಿಗಳು ಕೂಡಾ‌ ಮಾದ್ಯಮಗಳಲ್ಲಿ ಬರುತ್ತಿರುತ್ತವೆ. ಕೆಲವೇ ದಿನಗಳ ಹಿಂದೆ ಸಿಟಿ ಒಂದರ ಸಿಗ್ನಲ್ ನಲ್ಲಿ ನಿಂತ ವಾಹನದಲ್ಲಿ ಇದ್ದ ಆನೆಯೊಂದು ಪಕ್ಕದ ಲಾರಿಯಲ್ಲಿದ್ದ ಕಬ್ಬಿನ ಜಲ್ಲೆಗಳನ್ನು ಎಳೆದುಕೊಂಡ ವೀಡಿಯೋ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿತ್ತು. ಈಗ ಅಂತಹುದೇ ಇನ್ನೊಂದು ವೀಡಿಯೋ ಕೂಡಾ ವೈರಲ್ ಆಗಿದೆ‌. ವೀಡಿಯೋದಲ್ಲಿ ಆನೆಯೊಂದು ಕಬ್ಬಿಗಾಗಿ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸಿರುವ ವೀಡಿಯೋ ಇದಾಗಿದೆ‌.

ಸುತ್ತ ಕಾಡಿನಂತಹ ವಾತಾವರಣ ಇರುವ ರಸ್ತೆಯಲ್ಲಿ ಒಂದು ಕಡೆಯಿಂದ ವಾಹನಗಳು ಬರುತ್ತಿವೆ‌. ಎದುರು ದಿಕ್ಕಿನಿಂದ ರಸ್ತೆಯಲ್ಲಿ ನಡೆದು ಬಂದ ಆನೆಯೊಂದು ಕಬ್ಬಿನ ವಾಹನವನ್ನು ಗಮನಿಸಿದೆ‌. ಅದು ಗಲಾಟೆ, ಗದ್ದಲ ಏನೂ ಮಾಡದೇ ಬಹಳ ಸಾವಧಾನವಾಗಿ ವಾಹನದ ಮುಂದೆ ಹೋಗಿದೆ. ವಾಹನದ ಚಾಲಕನಿಗೆ ಕೂಡಾ ಆನೆ ಕಬ್ಬಿಗಾಗಿಯೇ ಹಾಗೆ ಮಾಡಿರುವುದು ಎಂದು ಅರಿವಾಗಿ ಆತ ವಾಹನವನ್ನು ನಿಲ್ಲಿಸಿದ್ದಾನೆ. ಆನೆ ಕೂಡಾ ಎಷ್ಟು ಸೌಜನ್ಯ ತೋರಿದೆಯೆಂದರೆ ಒಂದೆರಡು ಕಬ್ಬಿನ ಜಲ್ಲೆಗಳನ್ನು ಮಾತ್ರ ಸೊಂಡಿಲಿನಿಂದ ಎಳೆದುಕೊಂಡು, ಅಲ್ಲಿಂದ ಯಾರಿಗೂ ತೊಂದರೆ ಕೊಡದೆ ಮುಂದೆ ಸಾಗಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ‌.

ವಿಡಿಯೋ ನೋಡಿ..

ಆನೆಯ ಈ ವೀಡಿಯೋ ವನ್ನು 3.9 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. 84 ಸಾವಿರ ಜನರು ಇಷ್ಟ ಪಟ್ಟಿದ್ದಾರೆ. ಸುಮಾರು ಐದು ಸಾವಿರಕ್ಕಿಂತ ಅಧಿಕ ಜನರು ಕಾಮೆಂಟ್ ಮಾಡಿದ್ದು ಕೆಲವರು ವಾಹನವನ್ನು ಆನೆಗಾಗಿ ನಿಲ್ಲಿಸಿದ ಚಾಲಕನ ಗುಣವನ್ನು ಮೆಚ್ಚಿ ಹೊಗಳಿಕೆಯನ್ನು ನೀಡಿದ್ದಾರೆ. ಒಬ್ಬರು ಅದು ಆನೆಯ ಕಾಡು ಅದು ವಾಹನ ನಿಲ್ಲಿಸಿ ತನ್ನ ಟ್ಯಾಕ್ಸ್ ವಸೂಲಿ ಮಾಡಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಪ್ರಾಮಾಣಿಕ ಕಸ್ಟಮ್ ಆಫೀಸರ್ ಆನೆ ಎಂದೂ, ಈ ಆನೆಗೆ ಮನುಷ್ಯನಂತೆ ದುರಾಸೆ ಇಲ್ಲವೆಂದೂ, ಮನಿಷ್ಯನಾದರೆ ಪೂರ್ತಿ ಟ್ರಕ್ ಕದಿಯುತ್ತಿದ್ದ, ಆದರೆ ಆನೆ ಹಾಗೆ ಮಾಡಿಲ್ಲ ಎಂದು ವಿಧ ವಿಧವಾಗಿ ನೆಟ್ಟಿಗರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.‌