ಕರೀನಾ ಮಗನನ್ನು ನೋಡಲು ತನಗಿಂತ 12 ವರ್ಷ ಚಿಕ್ಕ ಪ್ರಿಯಕರನೊಂದಿಗೆ ಹೋದ ಮಲೈಕಾ ಅರೋರಾ; ಮೀಡಿಯಾದವರೊಂದಿಗೆ ವಾದ..

ಬಾಲಿವುಡ್ ನಲ್ಲಿ ತುಂಬಾ ಚರ್ಚೆಯಲ್ಲಿರುವ ಜೋಡಿ ಸೈಫ್ ಮತ್ತು ಕರೀನಾ ಮತ್ತೊಮ್ಮೆ ತಮ್ಮ ಎರಡನೆಯ ಗಂಡುಮಗುವಿಗೆ ತಂದೆ ತಾಯಿ ಆಗಿದ್ದಾರೆ. ಎರಡನೇ ಮಗುವಿನ ಹುಟ್ಟಿಗೆ ಪೂರ್ತಿ ಬಾಲಿವುಡ್ ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ ಅವರ ಫ್ಯಾನ್ಸ್ ಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದೆ. ಇದೇ ಕಾರಣಕ್ಕಾಗಿ ಕರೀನಾಳ ಗೆಳತಿ ಮತ್ತು ಬಾಲಿವುಡ್ ಸಹವರ್ತಿಯಾದ ಮಲೈಕಾಳು ಸಹ ತನ್ನ ಪ್ರಿಯಕರ ಅರ್ಜುನ್ ಕಪೂರ್ ಜೊತೆಯಲಿ ಕರೀನಾಳ ಮನೆಗೆ ಪ್ರವೇಶಿಸಿದ್ದಾಳೆ.

ಸರಿಯಾಗಿ ಇದೇ ಸಮಯಕ್ಕೆ ಒಬ್ಬ ವ್ಯಕ್ತಿಯು ಕರೀನಾಳ ಮನೆಯ ಹೊರಗೆ ವಾಲ್ ಕಂಪೌಂಡ್ ಹತ್ತುವುದನ್ನು ನೋಡಿ ಅರ್ಜುನ್ ಕಪೂರ್ ಆತನ ಮೇಲೆ ಸಿಟ್ಟಾಗಿದ್ದಾರೆ. ಅರ್ಜುನ್ ಕಪೂರ್ ಸಿಟ್ಟಾಗಿ ಅಷ್ಟಕ್ಕೆ ನಿಲ್ಲದೆ ಗೋಡೆಯ ಮೇಲೆ ಏರಿ ಹೋಗಲು ಯತ್ನಿಸುವ ಆ ವ್ಯಕ್ತಿಗೆ ಏಟು ಕೊಡಲು ಮುಂದಾಗಿದ್ದಾರೆ. ಆನಂತರ ಇಬ್ಬರೂ ಕರೀನಾಳ ಮನೆಯ ದಿಕ್ಕಿಗೆ ಹೋಗಿದ್ದಾರೆ.

ಆತನಿಗೆ ಪೆಟ್ಟುಕೊಡುವ ಮೊದಲು ಅರ್ಜುನ್ ಕಪೂರ್ ಮೊದಲು ಆತನನ್ನು ವಿನಂತಿಸಿದ್ದಾರೆ. ಕಾರಣ ಮೇಲಿಂದ ಬಿದ್ದು ಆ ವ್ಯಕ್ತಿಗೆ ಪೆಟ್ಟು ತಗುಲುವ ಸಂಭವವಿತ್ತು. ಆದರೆ ಆ ವ್ಯಕ್ತಿ ಅರ್ಜುನ್ ಕಪೂರ್ ಅವರ ವಿನಂತಿಗೆ ಬೆಲೆ ಕೊಡದೆ ಹಾಗೆ ವಾಲ್ ಕಾಂಪೌಂಡ್ ಹತ್ತಲು ಪ್ರಯತ್ನಿಸಿದ್ದಾನೆ. ಆಗ ಅರ್ಜುನ್ ಕಪೂರ್ ಅವರು ಸಿಟ್ಟಿಗೆ ಬಂದು ಆತನ ಕಡೆಗೆ ಹೋಗುತ್ತಿರುವಾಗ ಗೋಡೆ ಏರುವ ವ್ಯಕ್ತಿ ಅಲ್ಲಿಂದ ಪಲಾಯನ ಮಾಡಿದ್ದಾನೆ.

ಮಲೈಕಾ ಹೋಗುವ ಮೊದಲು ಸಾರಾ ಅಲಿಖಾನ್ ಸಹಿತ ಕರೀನಾಳ ಮನೆಗೆ ಹೋಗಿ ಮಗುವನ್ನು ನೋಡಿ ಬಂದಿದ್ದಾಳೆ. ಬಾಲಿವುಡ್ ನಟಿಯಾದ ಸಾರಾ ಅಲಿಖಾನ್ ಅವಳು ತನ್ನ ಅಣ್ಣ ಸೈಫ್ ಅಲಿ ಖಾನ್ ಅವರಿಗೆ ಶುಭಾಶಯಗಳನ್ನು ಕೋರಿದ್ದಾಳೆ. ಮತ್ತು ಮಗುವಿಗೆ ನೋಡಲು ಹೋಗುವಾಗ ಜೊತೆಯಲ್ಲಿ ಸಾಕಷ್ಟು ಆಟಿಕೆ ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದಾಳೆ.