ಕಲಿಯುವದಕ್ಕೆ ವಯಸ್ಸಿನ ಮಿತಿಯಿಲ್ಲ! ಪರೀಕ್ಷೆಯಲ್ಲಿ 100 ರ ಪೈಕಿ 89 ಗುಣ ಪಡೆದುಕೊಂಡ 104 ವರ್ಷದ ಅಜ್ಜಿ!

ಕಲಿಕೆಕೆ ಯಾವುದೇ ವಯಸ್ಸು ಇರುವದಿಲ್ಲ ಎಂಬುದು ನಾವು ಎಷ್ಟೋ ಸಲ ಕೇಳಿರುತ್ತವೇ ಆದರೆ ಈಗ ಆ ಮಾತನ್ನು ನಿಜವಾಗಿ ಮಾಡಿದ 104 ವರ್ಷದ ಈ ಅಜ್ಜಿ. ಕೇರಳದ ಕೊಟ್ಟಾಯಂ ನಲ್ಲಿಯ 104 ವರ್ಷದ ಅಜ್ಜಿ ಕೇರಳ ರಾಜ್ಯ ಸಾಕ್ಷರತಾ ಅಭಿಯಾನ (Kerala State Literacy Mission) ಪರೀಕ್ಷೆಯಲ್ಲಿ 100 ರ ಪೈಕಿ 89 ಗುಣಗಳನ್ನು ಪಡೆದುಕೊಂಡು ಅಸಾಧ್ಯವಾದದನ್ನು ಸಾಧ್ಯ ಮಾಡಿಸಿ ತೋರಿಸಿದ್ದಾರೆ. ಈ ಘಟನೆಯ ಮಾಹಿತಿ ಕೇರಳ ಸರಕರದಲ್ಲಿಯ ಶಿಕ್ಷಣ ಮತ್ತು ಕಾಮಗಾರ ಮಂತ್ರಿ ವ್ಹಿ. ಶಿವನಕುಟ್ಟಿಯವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾಗಿನಿಂದಲೂ ಈ ಅಜ್ಜಿಯ ಕುರಿತು ಎಲ್ಲೆಡೆಗೆ ಮೆಚ್ಚುಗೆ ವ್ಯಕ್ತ ಪಡೆಸುತ್ತಿದ್ದಾರೆ.

ಏನಿದೆ ಈ ಟ್ವೀಟ್?

ಶಿಕ್ಷಣ ಮತ್ತು ಕಾರ್ಮಿಕ ಸಚಿವರಾದ ವ್ಹಿ ಶಿವನಕುಟ್ಟಿ ಯವರು ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಒಬ್ಬ ಅಜ್ಜಿಯ ಫೋಟೊ ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡುವಾಗ, ” ಕೇರಳ ರಾಜ್ಯ ಸಾಕ್ಷರತಾ ಅಭಿಯಾನದ ಪರೀಕ್ಷೆಯಲ್ಲಿ ಕೊಟ್ಟಾಯಂ ನಲ್ಲಿಯ 104 ವರ್ಷ ಪ್ರಾಯದ ಕುಟ್ಟಿ ಅಮ್ಮಾ ಇವರಿಗೆ 89/100 ಗುಣ ದೊರಕಿವೆ. ಜ್ಞಾನದ ಜಗತ್ತಿನಲ್ಲಿ ಪ್ರವೇಶ ಮಾಡುವ ಸಲುವಾಗಿ ವಯಸ್ಸಿನ ಅಡಚಣೆ ಇರುವದಿಲ್ಲ. ತುಂಬಾ ಗೌರವ ಮತ್ತು ಪ್ರೀತಿಯಿಂದ ನಾನು ಕುಟ್ಟಿ ಅಮ್ಮಾ ಮತ್ತು ಇತರ ಎಲ್ಲ ಹೊಸ ಕಲಿಯುವವರಿಗೆ ಶುಭಾಶಯಗಳು ಕೋರುತ್ತೇನೆ” ಎಂದು ಕ್ಯಾಪ್ಶನ್ ಬರೆದಿದ್ದಾರೆ. ಕುಟ್ಟಿ ಅಮ್ಮಾ ಅವರ ಫೋಟೋ ಸಹ ಶೇರ್ ಮಾಡಿದ್ದಾರೆ.

ನೆಟಿಜನ್‌ಗಳ ಪ್ರತಿಕ್ರಿಯೆಗಳು

ನಿನ್ನೆಯಷ್ಟೇ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಈ ಪೋಸ್ಟಿಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅನೇಕರು ಕಾಮೆಂಟ್ ಸಹ ಮಾಡಿದ್ದಾರೆ. ಅಜ್ಜಿಯ ಈ ಸಾಧನೆಯ ಕುರಿತು ಮೆಚ್ಚುಗೆ ನೀಡಿ ಮುಂದಿನ ಶೈಕ್ಷಣಿಕ ಪ್ರವಾಸದ ಸಲುವಾಗಿ ಶುಭಾಶಯ ಸಹ ಕೋರಿದ್ದಾರೆ.

ಕುಟ್ಟಿ ಅಮ್ಮಾ ರವರು ಮಾಡಿರುವ ಸಾಹಸ ಇಂದಿನ ಪೀಳಿಗಿಗೆ ಶಿಕ್ಷಣ ಪಡೆದುಕೊಳ್ಳಲು ಮಾದರಿಯಾಗಲಿದೆ. ಈ ಸಾಧನೆಯ ನಂತರ ಅನೇಕರು ತಮಗೆ ಬೇಕಾದ ಶಿಕ್ಷಣ ಪಡೆಯುತ್ತಾರೆ ಎಂದು ಹೇಳಿದರೆ ತಪ್ಪಾಗದು. ಏಕೆಂದರೆ ಇಂದಿನ ಮಕ್ಕಳು ಶಿಕ್ಷಣದ ಕಡೆಗೆ ಅಷ್ಟೊಂದು ಲಕ್ಷ್ಯ ಕೊಡುತ್ತಿಲ್ಲ ಆದರೆ 104 ವಯಸ್ಸಾದರೂ ಸಹ ನಿಷ್ಠೆಯಿಂದ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ 100 ಪೈಕಿ 89 ಪಡೆದುಕೊಂಡ ಕುಟ್ಟಿ ಅಮ್ಮಾ ರವರ ಪ್ರಯತ್ನ ಮೆಚ್ಚಬೇಕಾದ್ದುದು.