ಕಲ್ಯಾಣ ಮಂಟಪದಲ್ಲಿಯೇ ಪ್ರಿಯಕರ ಮದುಮಗಳಿಗೆ ತಬ್ಬಿಕೊಂಡನು! ಮದುಮಗ ನೋಡುತ್ತಲೇ ನಿಂತ….ಮುಂದೆ?
ಮದುವೆಯಲ್ಲಿ ಸೆರೆಯಾದ ಅನೇಕ ವಿಶೇಷ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈಗ ಉತ್ತರ ಪ್ರದೇಶದ ಗೊರಖಪೂರ್ ದಲ್ಲಿಯ ವಿಡಿಯೋ ಒಂದು ಬೇರೆಯೇ ಕಾರಣಕ್ಕಾಗಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನಿಮಗೆ ನಗಬೇಕೋ ಇಲ್ಲ ಆಶ್ಚರ್ಯ ವ್ಯಕ್ತ ಮಾಡಬೇಕೋ ಎಂಬುದೇ ತಿಳಿಯುವುದಿಲ್ಲ.
ಯಾಕೆಂದರೆ ಇಲ್ಲಿ ನಡೆದ ಘಟನೆ ಯಾವುದೇ ಹುಡುಗಿಯ ಜೀವನದಲ್ಲಿ ನಡೆಯಲಿಕ್ಕಿಲ್ಲ. ವಧು-ವರ ಸ್ಟೇಜ್ ಮೇಲೆ ಮದುವೆಯ ವಿಧಿ ವಿಧಾನಗಳನ್ನು ಮಾಡುವಾಗ ಒಬ್ಬ ಹುಚ್ಚ ಪ್ರಿಯಕರ ಸ್ಟೇಜ್ ಮೇಲೆ ಬಂದು ಮದುಮಗಳ ಹಣೆಯಲ್ಲಿ ಬಲವಂತವಾಗಿ ಕುಂಕುಮದ ತಿಲಕವನ್ನಿಟ್ಟನು. ನಡೆದ ಈ ಪ್ರಕಾರವನ್ನು ನೋಡಿ ನೆರೆದವರು ಮೂಕವಿಸ್ಮಿತರಾದರೆ, ವಧುವಿನ ಮನೆಯ ಸದಸ್ಯರ ಕೋಪ ಗಗನಕ್ಕೆ ಮುಟ್ಟಿತ್ತು.
ನಡೆದ ಈ ಘಟನೆಯಿಂದ ಹುಡುಗಿಯ ಮನೆಯ ಸದಸ್ಯರು ಪೊಲೀಸರಿಗೆ ಫೋನ್ ಮಾಡಿ ಕರೆಯಿಸಿಕೊಂಡರು. ಪೊಲೀಸರು ಬಂದ ನಂತರ ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ಸಮಸ್ಯೆ ನಿವಾರಣವಾಯಿತು.
ಇದಕ್ಕಾಗಿ ಊರಲ್ಲಿಯ ಮುಖಂಡರ ಮತ್ತು ಪ್ರಮುಖರ ಸಹಾಯ ತೆಗೆದುಕೊಳ್ಳಲಾಯಿತು. ನಂತರ ವರನ ಜೊತೆಗೆ ವಧುಗೆ ಬೀಳ್ಕೊಡಲಾಯಿತು. ಆದರೆ ಆಕೆಯ ಪ್ರಿಯಕರನ ಈ ಕೃತ್ಯ ಮಾತ್ರ ಊರಲ್ಲಿ ಚರ್ಚೆಯ ವಿಷಯವಾಗಿತ್ತು.
ದೊರೆತ ಮಾಹಿತಿಯ ಪ್ರಕಾರ, ಪ್ರಿಯಕರ ಊರಲ್ಲಿ ಇಲ್ಲದಾಗ ಹುಡುಗಿಯ ಮದುವೆ ನಿಶ್ಚಿತವಾಗಿತ್ತು. ಈ ಹುಡುಗಿಯನ್ನು ಮೊದಲಿನಿಂದಲೂ ಹುಡುಗ ಪ್ರೀತಿಸುತ್ತಿದ್ದ. ಆದರೆ ಯಾವುದೋ ಕಾರಣಕ್ಕಾಗಿ ಆತ ಬೇರೆ ಊರಿಗೆ ಹೋದಾಗ ಹುಡುಗಿಯ ಮದುವೆಯನ್ನು ಕುಟುಂಬದವರು ನಿಶ್ಚಿತ ಮಾಡಿದ್ದರು. ಮದುವೆ ಡಿಸೆಂಬರ್ 1 ರಂದು ಇದ್ದದ್ದು ಹೇಗೋ ಪ್ರಿಯಕರನಿಗೆ ಗೊತ್ತಾಗಿ ಆತ ನವೆಂಬರ್ 28 ಕ್ಕೆ ಊರಿಗೆ ಆಗಮಿಸಿದ್ದನು.
ಸ್ಟೇಜ್ ಮೇಲೆಯೇ ಗದ್ದಲ ಶುರು..
ಮದುವೆಯ ದಿನ ಪ್ರಿಯಕರ ಸ್ಟೇಜ್ ಮೇಲೆ ಏರಿ ಯಾರಿಗೂ ಹೇಳದೆ, ಕೇಳದೆ, ಅಂಜದೆ ನೇರ ಜೇಬಿನಿಂದ ಕುಂಕುಮವನ್ನು ತೆಗೆದು ವಧುವಿನ ಹಣೆಯಲ್ಲಿ ತಿಲಕ ಇಟ್ಟೆ ಬಿಟ್ಟನು. ಇಷ್ಟಕ್ಕೆ ಬಿಡದೆ ವಧುವಿಗೆ ಅಪ್ಪಿಯೂ ಬಿಟ್ಟನು. ಇದನ್ನು ನೋಡಿದ ಹುಡುಗಿಯ ಕಡೆಯವರು ಆತನನ್ನು ಸ್ಟೇಜ್ ದಿಂದ ಕೆಳಗೆ ಇಳಿಸಿ ಬಿಟ್ಟರು.
ಪೊಲೀಸರು ಬಂದ ನಂತರ ಪ್ರಿಯಕರ ಹೋದನು ಮನೆಗೆ….
ಪೊಲೀಸರು ಬರುತ್ತಲೇ ಪ್ರೀತಿಯ ಭೂತ ಕೆಳಗಿಳಿದು ಹೊರಟು ಹೋಯಿತು. ತದ ನಂತರ ಹುಡುಗನ ಕಡೆಯವರು ಸ್ವಲ್ಪ ಪ್ರಮಾಣದಲ್ಲಿ ವಾದ ಸೃಷ್ಟಿಸಿದರು. ಈ ವಾದವನ್ನು ಬಗೆ ಹರಿಸಲು ಊರಿನ ಗಣ್ಯರು, ಮುಖಂಡರು ಮತ್ತು ಪ್ರಮುಖರು ಹುಡುಗಿಯ ಕಡೆಯವರಿಗೆ ಸಹಾಯ ಮಾಡಿದರು. ಕೊನೆಗೆ ಹುಡುಗನ ಕಡೆಯವರು ಒಪ್ಪಿಕೊಂಡರು. ಆಮೇಲೆ ಉಳಿದ ವಿಧಿವಿಧಾನಗಳು ಮುಗಿಸಿಕೊಂಡು ಮದುವೆ ಮಾಡಿಕೊಂಡು ಮದುಮಕ್ಕಳನ್ನು ಅವರ ಊರ ಕಡೆಗೆ ಕಳುಹಿಸಿ ಕೊಟ್ಟರು.