ಕಲ್ಲಿನ ಮೇಲೆ ಪ್ರಜ್ಞಾಹೀನವಾಗಿ ಬಿದ್ದ ಮೀನಿನ ಜೀವ ಉಳಿಸಿದ ಪುಟ್ಟ ಆಮೆ! ಜನರಂತಿದ್ದಾರೆ ‘ಮನುಷ್ಯರಿಗಿಂತ ಪ್ರಾಣಿಗಳೇ ಗ್ರೇಟ್!’ ನೋಡಿ ಈ Viral Video!
ಸಾಮಾಜಿಕ ಜಾಲತಾಣಗಳಲ್ಲಿ ದಿನವೊಂದಕ್ಕೆ ಅದೆಷ್ಟೋ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಒಂದೊಂದು ವೀಡಿಯೋ ಒಂದೊಂದು ರೀತಿ ಯಲ್ಲಿ ವಿಶೇಷ, ವಿಶಿಷ್ಟ ಹಾಗೂ ಅದ್ಭುತ ಎನಿಸಿದರೆ, ಕೆಲವು ವೀಡಿಯೋಗಳು ಅದರಲ್ಲಿ ಅದ್ಭುತ ಎನಿಸುವುದು ಏನೂ ಇಲ್ಲದಿದ್ದರೂ ಕೂಡಾ ವೈರಲ್ ಆಗಿಬಿಡುತ್ತವೆ. ಹೀಗೆ ವೈರಲ್ ಆದ ವೀಡಿಯೋಗಳನ್ನು ನಾವು ಕೂಡಾ ನೋಡಿಯೇ ಇರುತ್ತೇವೆ.ಆದರೆ ಇವುಗಳಲ್ಲಿ ನಮ್ಮ ನೆನಪಲ್ಲಿ ಎಲ್ಲಾ ವೀಡಿಯೋಗಳು ಉಳಿಯುವುದಿಲ್ಲ. ಕೆಲವು ವೀಡಿಯೋಗಳು ಮಾತ್ರ ನೆನಪಿನಿಂದ ಮರೆಯಾಗುವುದೂ ಇಲ್ಲ. ಕಾರಣ ಆ ವೀಡಿಯೋಗಳಲ್ಲಿ ಸೆರೆಯಾಗಿರುವಂತಹ ಅದ್ಭುತ ಕ್ಷಣಗಳು.
ಟ್ವಿಟರ್ ನಲ್ಲಿ ಇಂತಹುದೇ ಒಂದು ವೀಡಿಯೋ ವೈರಲ್ ಆಗಿ ಇದು ಜನರನ್ನು ರಂಜಿಸುತ್ತಿರುವುದು ಮಾತ್ರವೇ ಅಲ್ಲದೇ ಜೀವಿ ಜೀವಿಗಳ ನಡುವಿನ ಸಹಬಾಳ್ವೆಯ ಪಾಠವನ್ನು ನೀಡುವಂತೆ ಕಾಣುತ್ತಿದೆ. ಸಾಮಾನ್ಯವಾಗಿಯೇ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಾಣಿಗಳ ವೀಡಿಯೋ ವೈರಲ್ ಆಗುತ್ತದೆ. ಅದರಲ್ಲೂ ಪ್ರಾಣಿಗಳ ಕೆಲವು ಚಟುವಟಿಕೆಗಳು ಮಾನವ ಸಮಾಜಕ್ಕೆ ಸಂದೇಶ ನೀಡುವಂತೆ ಕಂಡಾಗಲಂತೂ ಅಂತಹ ವೀಡಿಯೋಗಳು ಕೆಲವೇ ದಿನಗಳಲ್ಲಿ ಲಕ್ಷ ಲಕ್ಷ ಜನರ ಮೆಚ್ಚುಗೆಯನ್ನು ಪಡೆದು, ಎಲ್ಲೆಡೆ ಶೇರ್ ಆಗುತ್ತದೆ.
ಈಗ ನಾವು ಹೇಳಲು ಹೊರಟಿರುವುದು ಕೂಡಾ ಅಂತಹುದೇ ಒಂದು ವೀಡಿಯೋ ಬಗ್ಗೆ. ಇದರಲ್ಲಿ
ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ಸಹಾಯ ಮಾಡುತ್ತಿದ್ದು, ಪ್ರಾಣಿಗಳಲ್ಲಿ ಕೂಡಾ ಕಾಳಜಿ, ಸಹಾನುಭೂತಿ ಇರುವುದನ್ನು ನಾವು ಕಾಣಬಹುದು.
ಈ ವೀಡಿಯೋವನ್ನು ನೋಡಿದ ಜನರು ಕೂಡಾ ಈ ವೀಡಿಯೊ ಬಗ್ಗೆ ತಮ್ಮದೇ ಆದಂತಹ ಭಿನ್ನ, ವಿಭಿನ್ನವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಆಗಿರುವ ಈ ವೀಡಿಯೋದಲ್ಲಿ ಆಮೆಯೊಂದು ಮೀನಿನ ಜೀವವನ್ನು ಉಳಿಸಿರುವುದು ನಮಗೆ ಕಂಡು ಬರುತ್ತದೆ.
turtle saves his fish friend pic.twitter.com/Sr91VW7T2J
— 🌿imagine Nature🍁 (@classicsnature) August 19, 2020
ಈ ವೈರಲ್ ವೀಡಿಯೊದಲ್ಲಿ, ಕಲ್ಲಿನ ಮೇಲೆ ಮೀನು ಪ್ರಜ್ಞಾಹೀನವಾಗಿರುವುದನ್ನು ನಾವು ನೋಡಬಹುದು. ಅದೇ ಸಮಯದಲ್ಲಿ, ಅಲ್ಲಿಗೆ ಬಂದ ಒಂದು ಸಣ್ಣ ಆಮೆ ಬಂದು ಅದನ್ನು ಎಳೆಯುತ್ತದೆ. ಅದು ಹಾಗೆ ಮೀನನ್ನು ಕದಲಿಸಿದಾಗ ಅದು ನೀರೊಳಗೆ ಬಿದ್ದು ಜೀವಂತವಾಗುತ್ತದೆ. ಕೇವಲ 10 ಸೆಕೆಂಡುಗಳ ಈ ವೀಡಿಯೊ ನೋಡಲು ಮಾತ್ರ ತುಂಬಾ ಸುಂದರವಾಗಿದೆ. ಇದನ್ನು ನೋಡಿದ ನೆಟ್ಟಿಗರು ಹೀರೋ ಇನ್ ಹಾಫ್ ಶೆಲ್, ರಿಯಲ್ ಬೇಬಿ ಟರ್ಟಲ್ ಹೀರೋ, ಮನುಷ್ಯರಿಗಿಲ್ಲದ ಗುಣ ಪ್ರಾಣಿಗಳಲ್ಲಿ ಇದೆ, ಬೇಬಿ ಟರ್ಟಲ್ ಮೀನಿನ ಪ್ರಾಣ ಉಳಿಸಿದೆ ಎಂದೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ಒಂದಿಬ್ಬರು ಆಮೆ ಬೇಟೆಯಾಡಲು ಬಂದಿದೆ,ಪಾಪ ಅದರ ಫುಡ್ ಮಿಸ್ ಆಯ್ತು ಎಂದು ಹಾಸ್ಯ ಮಾಡಿದ್ದಾರೆ. ಈ ವೀಡಿಯೋವನ್ನು ನೇಚರ್ಸ್ ಲಿಟ್ ಎನ್ನುವ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದು, ಆಮೆಯು ತನ್ನ ಗೆಳೆಯ ಮೀನನ್ನು ರಕ್ಷಣೆ ಮಾಡಿದ ಎಂದು ಬರೆದುಕೊಂಡಿದ್ದಾರೆ. ವೀಡಿಯೊ ಮಾತ್ರ ಭರ್ಜರಿ ವೀವ್ಸ್ ಪಡೆಯುತ್ತಾ, ಸಹಸ್ರಾರು ಸಂಖ್ಯೆಯಲ್ಲಿ ಶೇರ್ ಆಗುತ್ತಿದೆ.