ಕಳ್ಳತನಕ್ಕೆ ನುಗ್ಗಿದ ಕಳ್ಳ ಮನೆಯಲ್ಲಿ ಕಂಡ ಸುಂದರ ಸ್ತ್ರೀಗೆ ಮರುಳಾಗಿ ಧ್ಯೇಯ ಬದಲಿಸಿದ್ದು ಕಳ್ಳನಿಗೆ ಬಿತ್ತು ತುಂಬಾ ದುಬಾರಿ…ಮುಂದೇನಾಯಿತು ನೋಡಿ.
ಮನಸ್ಸಿದ್ದಲ್ಲಿ ಮಾರ್ಗ ಎಂಬ ಗಾದೆ ಮಾತು ತುಂಬಾ ಸ್ಪಷ್ಟವಾದ ಸಂದೇಶವನ್ನು ನೀಡುತ್ತದೆ. ನೀವು ಮಾಡುವ ಕೆಲಸ ಯಾವುದೇ ಇರಲಿ ಅದು ಶ್ರದ್ಧೆಯಿಂದ ಮಾಡಿದಾಗ ಯಶಸ್ಸು ಸಾಧಿಸುತ್ತದೆ.
ಬಿಹಾರದ ರಾಜಧಾನಿಯಾದ ಪಟ್ನಾದಿಂದ ಕಳ್ಳತನದ ಒಂದು ಘಟನೆ ವರದಿಯಾಗಿದೆ. ಮುಖ್ಯವಾಗಿ ಕಳ್ಳತನ ಮಾಡುವುದು ದೊಡ್ಡ ಅಪರಾಧ. ಅದರಲ್ಲೂ ಇಲ್ಲಿ ಕಳ್ಳನೊಬ್ಬ ತನ್ನ ಕಳ್ಳತನದ ಕಸಬನ್ನು ಬಿಟ್ಟು ಬೇರೆ ಕೆಲಸಕ್ಕೆ ಪ್ರಯತ್ನ ಮಾಡಿದಾಗ ಅದು ಆತನಿಗೆ ತುಂಬಾ ದುಬಾರಿಯಾಗಿ ಪರಿಣಮಿಸಿದೆ.
ಬಿಹಾರದ ಪಾಟ್ನಾ ಏರ್ಪೋರ್ಟ್ ಹತ್ತಿರ ಕಳ್ಳನೊಬ್ಬ ಕಳ್ಳತನ ಮಾಡುವ ಸಲುವಾಗಿ ಒಂದು ಮನೆಯಲ್ಲಿ ನುಗ್ಗಿದ್ದಾನೆ. ಮನೆಯಲ್ಲಿ ನುಗ್ಗಿದ ನಂತರ ಕಳ್ಳನಿಗೆ ಆ ಮನೆಯಲ್ಲಿ ಒಬ್ಬಳೇ ಸುಂದರವಾದ ಮಹಿಳೆ ಇದ್ದದ್ದು ಕಂಡುಬಂದಿದೆ. ಸುಂದರ ಸ್ತ್ರೀ ಒಬ್ಬಳೇ ಇದ್ದದ್ದನ್ನು ನೋಡಿ ಕಳ್ಳನ ಮನಸ್ಸು ಬದಲಾಯಿಸಿದೆ. ತಾನು ಮಾಡಬೇಕಾದ ಕುಕರ್ಮವನ್ನು ಬಿಟ್ಟು ಮಹಿಳೆಗೆ ನೋಡಿ ಮತ್ತೊಂದು ದುಷ್ಕೃತ್ಯದ ಬಗ್ಗೆ ಯೋಚಿಸಿ ಆಕೆಗೆ ಬಲವಂತ ಮಾಡಲು ಹೋಗಿದ್ದಾನೆ.
ಆದರೆ ಮಹಿಳೆಯು ಮಾತ್ರ ತನ್ನ ರಕ್ಷಣೆಯ ಸಲುವಾಗಿ ಧೈರ್ಯದಿಂದ ಆತನಿಗೆ ಫೇಸ್ ಮಾಡಿದ್ದಾಳೆ. ಅದರ ಜೊತೆಗೆ ನೆರೆಹೊರೆಯವರಿಗೆ ಕೇಳುವ ಹಾಗೆ ಜೋರಾಗಿ ಕಿರಿಚಾಟ ಮಾಡಿದ್ದಾಳೆ. ತಾನು ಮಾಡುತ್ತಿರುವ ಈ ದುಷ್ಕೃತ್ಯ ತನಗೆ ತಿರುಗುಬಾಣ ವಾಗುತ್ತಿರುವುದುನ್ನು ಕಂಡು ಕಳ್ಳನು ತಬ್ಬಿಬ್ಬಾಗಿ ಅಲ್ಲಿಂದ ಜಾರುವುದೆ ಒಳ್ಳೆಯದು ಎಂದು ತಿಳಿದು ಮೊದಲು ಪರಾರಿಯಾಗಲು ಮುಂದಾಗಿದ್ದಾನೆ.
ಕಳ್ಳನ ದುರದೃಷ್ಟ ನೋಡಿ ಹೇಗಿತ್ತು, ಆತ ಓಡಿ ಹೋಗುತ್ತಿರುವಾಗ ರಾತ್ರಿ ಪೆಟ್ರೋಲಿಂಗ್ ಮಾಡುವ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಪೊಲೀಸರು ಮಹಿಳೆಯ ತಕರಾರನ್ನು ಕೇಳಿ ಕಳ್ಳನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಸೌರವ್ ಹೆಸರಿನ ಈ ಕಳ್ಳನನ್ನು ಸದ್ಯ ಪೊಲೀಸ್ ಕೊಠಡಿಯಲ್ಲಿ ಇರಿಸಲಾಗಿದೆ.
ಪೊಲೀಸರು ನೀಡಿದ ವರದಿಯ ಪ್ರಕಾರ, ಕಳ್ಳನು ತನ್ನದೇ ಪರಿಸರದಲ್ಲಿದ್ದ ಒಂದು ಮನೆಯಲ್ಲಿ ಕಳ್ಳತನ ಮಾಡುವ ಸಲುವಾಗಿ ನುಗ್ಗಿದ್ದಾನೆ. ಆ ಮನೆಯಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿನ ಜೊತೆಗೆ ಮಲಗಿದ್ದಳು. ಆಗ ಕಳ್ಳನು ಆಕೆಯ ತಲೆದಿಂಬಿನ ಕೆಳಗೆ ಇಟ್ಟ ಬೀಗದ ಕೈ ತೆಗೆದುಕೊಳ್ಳಲು ಯತ್ನಿಸಿ ಯಶಸ್ವಿಯಾಗಿದ್ದಾನೆ. ಆತನ ಕೈಗೆ ಬೀರುವಿನಲ್ಲಿಟ್ಟದ್ದ 10 ಸಾವಿರ ರೂಪಾಯಿಗಳ ಬಂಡಲ್ ತಾಗಿದೆ.
ಕಳ್ಳ ತನ್ನ ಕೆಲಸವಾಗಿದೆ ಎಂದು ಅಷ್ಟಕ್ಕೆ ಬಿಟ್ಟು ಅಲ್ಲಿಂದ ಕಾಲ್ಕಿತ್ತಬಹುದಾಗಿತ್ತು. ಆದರೆ ಮನೆಯಲ್ಲಿ ಆಕೆ ಒಬ್ಬಳೇ ಮಲಗಿರುವುದನ್ನು ನೋಡಿ ಕಳ್ಳನು ತನ್ನ ಧ್ಯೆಯದಿಂದ ಪರಾವೃತ್ತನಾಗಿ ಆಕೆಗೆ ಬಲವಂತ ಮಾಡಲು ಪ್ರಯತ್ನಿಸಿದ್ದೆ ಕಳ್ಳನಿಗೆ ದೊಡ್ಡ ತಪ್ಪಾಗಿ ಪರಿಣಮಿಸಿತು. ನಿದ್ರೆಯಿಂದ ಎಚ್ಚೆತ್ತ ಮಹಿಳೆ ಧೈರ್ಯದಿಂದ ಆತನನ್ನು ಹಿಡಿಯಲು ಹೋಗಿದ್ದಲ್ಲದೆ ಜೋರು ಜೋರಾಗಿ ಕಿರುಚಿ ನೆರೆಹೊರೆಯವರಿಗೆ ಏಳುವಂತೆ ಮಾಡಿದ್ದಾಳೆ. ಈ ಗದ್ದಲದಲ್ಲಿ ಕಳ್ಳನು ಜೀವಭಯದಿಂದ ಪಲಾಯನ ಮಾಡಿದ್ದಾನೆ. ಹೇಗಾದರೂ ಮಾಡಿ ಪರಾರಿಯಾಗಬೇಕೆಂದು ಓಡಿ ಹೋಗುತ್ತಿರುವಾಗ ರಾತ್ರಿ ಗಸ್ತು ನೀಡುವ ಪೊಲೀಸರ ದೃಷ್ಟಿ ಕಳ್ಳನ ಮೇಲೆ ಬಿದ್ದಿದೆ. ಆಮೇಲೆ ಪೊಲೀಸರು ಕಳ್ಳನಿಗೆ ಹಿಡಿದಾಗ ಮಹಿಳೆಯು ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾಳೆ. ತದನಂತರ ಪೊಲೀಸರು ಚೆನ್ನಾಗಿ ಥಳಿಸಿ ಆತನ ವಿರುದ್ಧ ಕೇಸು ದಾಖಲಿಸಿದ್ದಾರೆ.