ಕಳ್ಳತನ ಮಾಡಲು ಮನೆಗೆ ನುಗ್ಗಿದ ಕಳ್ಳ, ಎಸಿ ಆನ್ ಮಾಡಿ ಮಲಗಿದ. ಮಾರನೇ ದಿನ ಕಣ್ಣು ಬಿಟ್ಟಾಗ ನಡೆದ ಘಟನೆ ತಿಳಿದರೆ ಆಶ್ಚರ್ಯ ಆಗೋದು ಖಚಿತ!
ಯಾವುದೇ ವ್ಯಕ್ತಿ ಆಗಿರಲಿ, ಅವನು ಬಳಲಿರುವಾಗ, ಮೈ ಮುರಿದು ಕೆಲಸ ಮಾಡಿ ಆಯಾಸ ಆಗಿರುವಾಗ ಅಥವಾ ಇನ್ನಾವುದೇ ಕಾರಣದಿಂದಲಾದರೂ ವಿಶ್ರಾಂತಿಯನ್ನು ಬಯಸಿರುವಾಗ ಒಂದು ಆರಾಮದಾಯಕ ಎನಿಸುವ ತಣ್ಣನೆಯ ವಾತಾವರಣ ಸಿಕ್ಕರೆ ಸಹಜವಾಗಿಯೇ ಅವನು ನಿದ್ದೆಗೆ ಜಾರಿ ಕೊಳ್ಳುತ್ತಾನೆ. ಇಂತಹ ಆರಾಮದಾಯಕವಾದ, ಹಿತವಾದ ವಾತಾವರಣವು ಬೇಡ ಬೇಡ ಎಂದರೂ ಕೂಡಾ ಮೈಮರೆಯುವಂತಹ ನಿದ್ರೆಯನ್ನು ನಮಗೆ ತರಿಸಿಬಿಡುತ್ತದೆ. ಇಂತಹದೇ ಒಂದು ಹಿತವಾದ ಪರಿಸ್ಥಿತಿಯಲ್ಲಿ ವಿಶ್ರಾಂತಿಯನ್ನು ಬಯಸಿ ಮಲಗಿದವನು ಕೊನೆಗೆ ಜೈಲನ್ನು ತಲುಪಿದ ವಿಲಕ್ಷಣ ಘಟನೆಯೊಂದು ನಡೆದಿದೆ. ವಾಸ್ತವವಾಗಿ ಆಶ್ಚರ್ಯವನ್ನು ಹುಟ್ಟಿಸುವಂತಹ ಇಂತಹುದೊಂದು ಘಟನೆಯಲ್ಲಿ ಕಳ್ಳನೊಬ್ಬನು ರಾತ್ರಿಯ ವೇಳೆಯಲ್ಲಿ ಮನೆಯೊಂದಕ್ಕೆ ಕಳ್ಳತನ ಮಾಡಲು ನುಗ್ಗಿದ್ದಾನೆ. ಆದರೆ ಕಳ್ಳತನ ಮಾಡಿದ ಮೇಲೆ ಅದೇ ಮನೆಯಲ್ಲಿ ಮೇಲೆ ಮಲಗಿ ಆರಾಮವಾಗಿ ನಿದ್ದೆ ಮಾಡಿದ್ದಾನೆ.
ಆತನ ನಿದ್ದೆ ಯಾವ ಮಟ್ಟಕ್ಕೆ ಇತ್ತೆಂದರೆ ಮಾರನೆಯ ದಿನ ಬೆಳಗ್ಗೆ ಪೊಲೀಸರು ಆಗಮಿಸಿ ಆತನನ್ನು ನಿದ್ದೆಯಿಂದ ಎಬ್ಬಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇಂತಹದ್ದೊಂದು ವಿಲಕ್ಷಣ ಘಟನೆ ನಡೆದಿರುವುದು ಥೈಲ್ಯಾಂಡಿನಲ್ಲಿ ಇಲ್ಲಿನ. ಪೆಚಾಬುನ್
ಪ್ರಾಂತ್ಯದ ವಿಚಿಯಾನ್ ಬುರಿ ಇಲಾಖೆಯಲ್ಲಿ 22 ವರ್ಷ ವಯಸ್ಸಿನ ಕಳ್ಳನೊಬ್ಬ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಕಳ್ಳತನವನ್ನು ಮಾಡುವ ಉದ್ದೇಶದಿಂದ ರಾತ್ರಿ 2 ಗಂಟೆ ವೇಳೆಯಲ್ಲಿ ಅವರ ಮನೆಯೊಳಕ್ಕೆ ಬಹಳ ಚಾಕಚಕ್ಯತೆಯಿಂದ ನುಗ್ಗಿದ್ದಾನೆ. ಈ ವೇಳೆ ಆತನು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ತಾನು ತೆಗೆದುಕೊಂಡು ಹೋಗಿದ್ದ ಚೀಲದಲ್ಲಿ ತುಂಬಿಸಿಕೊಂಡಿದ್ದಾನೆ.
ಕದ್ದ ಎಲ್ಲ ವಸ್ತುಗಳನ್ನು ಮೂಟೆ ಕಟ್ಟಿಕೊಂಡು ತಾನು ಬಂದ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದ ಮೇಲೆ, ಇನ್ನು ಕಳ್ಳತನದ ವಸ್ತುಗಳನ್ನು ತುಂಬಿಸಿದ್ದ ಚೀಲವನ್ನು ಹೊತ್ತುಕೊಂಡು ಹೋಗುವುದೊಂದು ಬಾಕಿಯಿತ್ತು. ಆದರೆ ಆ ವೇಳೆಗೆ ಬಹಳ ತಡವಾಗಿತ್ತು, ಅವನಿಗೂ ಕಳ್ಳತನ ಮಾಡಿ ಆಯಾಸವಾಗಿತ್ತು. ಆಗಲೇ ಅವನ ತಲೆಯಲ್ಲಿ ಮೂಡಿತೊಂದು ಹೊಸ ಆಲೋಚನೆ. ಅದೇನೆಂದರೆ ಅಲ್ಲೇ ಕೋಣೆಯಲ್ಲಿ ಎಸಿ ಆನ್ ಮಾಡಿ , ಬೆಡ್ ಮೇಲೆ ಆರಾಮವಾಗಿ ಸ್ವಲ್ಪ ಹೊತ್ತು ನಿದ್ರೆಯನ್ನು ಮಾಡಿ ಎದ್ದು ಹೋಗೋಣವೆಂದು ಅವನು ತೀರ್ಮಾನಿಸಿದ. ತನ್ನ ಆಲೋಚನೆಯಂತೆ ಆತ ಅದರಂತೆ ಕೋಣೆಯಲ್ಲಿ ಇದ್ದ ಹಾಸಿಗೆಯ ಮೇಲೆ ಆರಾಮವಾಗಿ ಮಲಗಿಕೊಂಡಿದ್ದಾನೆ.
ಸ್ವಲ್ಪ ಹೊತ್ತು ನಿದ್ದೆ ಮಾಡಿ ಇದು ಹೋಗೋಣವೆಂದು ಮಲಗಿದ ಅವನು, ಆ ಹಿತವಾದ ವಾತಾವರಣದಲ್ಲಿ ಗಾಢವಾದ ನಿದ್ರೆಗೆ ಜಾರಿ ಕೊಂಡಿದ್ದಾನೆ. ಅಲ್ಲದೇ ಮರು ದಿನ ಬೆಳಿಗ್ಗೆ ಅವನನ್ನು ಬೇರೆಯವರು ಎಬ್ಬಿಸುವ ವರೆಗೆ ಎಚ್ಚರವಿಲ್ಲದೆ ನಿದ್ರೆ ಮಾಡಿದ್ದಾನೆ. ರಾತ್ರಿ ಕಳೆದು ಹಗಲಾದಾಗ ಪೊಲೀಸ್ ಅಧಿಕಾರಿಯು ಕೋಣೆಗೆ ಬಂದಿದ್ದಾರೆ. ಅಲ್ಲಿ ಕಳ್ಳತನಕ್ಕೆ ಬಂದವನು ಆರಾಮವಾಗಿ ಮಲಗಿ ನಿದ್ರೆ ಮಾಡುತ್ತಿರುವುದನ್ನು ನೋಡಿದ ಕೂಡಲೇ ಅವರು ಅನ್ಯ ಪೋಲಿಸರಿಗೆ ಕರೆ ಮಾಡಿ ವಿಷಯವನ್ನು ಮುಟ್ಟಿಸಿದ್ದಾರೆ. ಆಗ ಮನೆಗೆ ಆಗಮಿಸಿದ ಪೊಲೀಸರು ಗಾಢ ನಿದ್ರೆಯಲ್ಲಿದ್ದ ಕಳ್ಳನನ್ನು ಎಬ್ಬಿಸಿದ್ದಾರೆ. ಪೊಲೀಸರು ಎಬ್ಬಿಸಿದಾಗ ಆತ ಯಾವುದೇ ಆ ತಂ ಕ ಅಥವಾ ಭ ಯ ಇಲ್ಲದೇ, ತಾನು ಏನು ಮಾಡಿದ್ದೇನೆ ಎನ್ನುವುದನ್ನು ಮರೆತು ನಿದ್ದೆಯಿಂದ ಎದ್ದಿದ್ದಾನೆ.
ಹೀಗೆ ನಿದ್ರೆಯಿಂದ ಇದ್ದವನಿಗೆ ಶಾ ಕ್ ಎದುರಲ್ಲೇ ಕಾದಿತ್ತು. ಪೋಲೀಸರು ಆತನನ್ನು ಬಂ ಧಿ ಸಿ ಜೈಲಿಗೆ ಕಳುಹಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಈ ಘಟನೆಯ ಕುರಿತಾಗಿ ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕಳ್ಳ ಈ ರೀತಿ ಕಳ್ಳತನಕ್ಕೆ ಹೋಗಿದ್ದ ಕಡೆ ಮಲಗಿ ನಿದ್ರಿಸಿ ಪೊಲೀಸರ ಅತಿಥಿಯಾದ ಘಟನೆ ಇದೇ ಮೊದಲಲ್ಲ. ಕಳೆದ ವರ್ಷ ನಮ್ಮ ದೇಶದಲ್ಲೇ, ಆಂಧ್ರಪ್ರದೇಶದಲ್ಲಿ ಇಂತಹದೊಂದು ಘಟನೆ ವರದಿಯಾಗಿತ್ತು. ಆಗ ಮನೆಯೊಂದರಲ್ಲಿ ಕಳ್ಳತನಕ್ಕೆ ಹೋದವನು ಅದೇ ಮನೆಯಲ್ಲಿ ಮಲಗಿ ನಿದ್ರಿಸಿದ್ದ, ಆತನ ಗೊರಕೆಯ ಶಬ್ದವನ್ನು ಕೇಳಿ ಮನೆಯ ಮಾಲೀಕ ಪೊಲೀಸರನ್ನು ಕರೆಸಿದಾಗ ಆತ ಬಂ ಧ ನಕ್ಕೆ ಒಳಗಾಗಿದ್ದ.