ಕಳ್ಳತನ ಮಾಡಲು ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳನಿಗೆ, ತಾನು ಬಯಸಿದ್ದಕ್ಕಿಂತ ಹೆಚ್ಚು ಹಣ ನೋಡಿದಾಗ ಆಯ್ತು ಹಾರ್ಟ್ ಅಟ್ಯಾಕ್
ಉತ್ತರ ಪ್ರದೇಶದ ಬಿಜ್ನೋರ್ ನಿಂದ ವರದಿಯಾಗಿರುವ ಒಂದು ವಿಲಕ್ಷಣ ಘಟನೆ ಇದೀಗ ಇಡೀ ದೇಶದ ಗಮನವನ್ನು ಸೆಳೆದಿದೆ. ಈ ಘಟನೆಯ ಬಗ್ಗೆ ತಿಳಿದ ಮೇಲೆ ಬಹುಶಃ ನಿಮಗೂ ಕೂಡಾ ಕಳ್ಳರ ಬಗ್ಗೆ ಮನಸ್ಸಿನಲ್ಲಿ ಒಂದು ಅನುಕಂಪ ಮೂಡಬಹುದು. ಈ ಘಟನೆಯ ವಿವರಗಳಿಗೆ ಹೋದಾಗ ನಿಜಕ್ಕೂ ಕೂಡಾ ಊಹೆಗೂ ಮೀರಿದ ಅಥವಾ ನಿರೀಕ್ಷೆಗೂ ಮೀರಿದ ಪ್ರತಿಫಲ ಸಿಕ್ಕರೆ ಕೆಲವೊಮ್ಮೆ ಮನುಷ್ಯನ ಹೃದಯಕ್ಕೆ ಅದು ಕೂಡ ತಡೆದುಕೊಳ್ಳಲಾಗುವುದಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇಲ್ಲೊಬ್ಬ ಕಳ್ಳನು ಸಾವಿರಗಳ ಆಸೆಯಿಂದ ಆ ಹಣವನ್ನು ಕದಿಯಲು ಒಂದು ಮನೆಗೆ ಕನ್ನ ಹಾಕಿದ್ದಾನೆ, ಆದರೆ ಸಾವಿರಗಳ ಆಸೆಯಿಂದ ಕಳ್ಳತನಕ್ಕೆ ಹೋಗಿದ್ದವನಿಗೆ ಆ ಮನೆಯಿಂದ ಲಕ್ಷಗಳ ಲೆಕ್ಕದಲ್ಲಿ ಹಣವನ್ನು ಕದ್ದು ತಂದಿರುವುದನ್ನು ನೋಡಿ, ಅಷ್ಟು ದೊಡ್ಡ ಮೊತ್ತದ ಹಣವನ್ನು ನಿರೀಕ್ಷೆ ಮಾಡದಿದ್ದ ಕಾರಣ, ಕೂಡಲೇ ಕಳ್ಳನಿಗೆ ಹೃದಯಾಘಾತವಾಗಿದೆ. ಈ ಕಳ್ಳನ ಜೊತೆಗಾರ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ ಹಾಗೂ ಚಿಕಿತ್ಸೆಗಾಗಿ ಲಕ್ಷ ಲಕ್ಷ ರೂಪಾಯಿಗಳು ಖರ್ಚಾಗಿದೆ.
ಇಂತಹದೊಂದು ವಿಚಿತ್ರ ಪ್ರಕರಣವು ಉತ್ತರಪ್ರದೇಶದ ಬಿಜ್ನೂರಿನ ದೆಹಾತ್ ಕೊತ್ವಾಲಿ ಎನ್ನುವ ಪ್ರದೇಶದಲ್ಲಿ ನಡೆದಿದೆ. ಮನೆಯಲ್ಲಿ ಕಳ್ಳತನ ಮಾಡಲೆಂದು ಕನ್ನ ಹಾಕಿದ ಇಬ್ಬರು ಕಳ್ಳರಲ್ಲಿ ಒಬ್ಬ ಕಳ್ಳನಿಗೆ ತಾವು ನಿರೀಕ್ಷೆಗೂ ಮೀರಿ ದೊಡ್ಡ ಸಂಪತ್ತನ್ನು ಕದ್ದು ತಂದಿರುವುದು ನೋಡಿ ಅಲ್ಲೇ ಕುಸಿದು ಬಿದ್ದಿದ್ದಾನೆ. ಆಗ ಜೊತೆಯಲ್ಲಿದ್ದ ಮತ್ತೊಬ್ಬ ಕಳ್ಳ ಈತನನ್ನು ಆಸ್ಪತ್ರೆಗೆ ಸಾಗಿಸಿದಾಗ, ತನ್ನ ಜೊತೆಗಾರನಿಗೆ ಹೃ ದ ಯಾ ಘಾತ ಆಗಿದೆ ಎಂದು ತಿಳಿದು ಬಂದಿದೆ. ಆಸ್ಪತ್ರೆಗೆ ದಾಖಲು ಮಾಡಿದ ಮೇಲೆ ತಾವು ಕದ್ದ ಹಣದಲ್ಲೇ ಎರಡು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕಳ್ಳ ಪಡೆದುಕೊಂಡಿದ್ದಾನೆ.

ಪಿತ್ತನ್ ಹೇಡಿ ಜಿಯಾ ದ ನಿವಾಸಿಯಾಗಿರುವ ಉರೂಜ್ ಹೈದರ್ ಎನ್ನುವ ವ್ಯಕ್ತಿಯು ತಮ್ಮ ಮನೆಯಲ್ಲೇ ಒಂದು ಜನಹಿತ ಕೇಂದ್ರವನ್ನು ನಡೆಸುತ್ತಾರೆ. ಕಳೆದ ಫೆಬ್ರವರಿಯಲ್ಲಿ ಕಳ್ಳರು ಈ ಜನಹಿತ ಕೇಂದ್ರದಿಂದ ಸುಮಾರು 13 ಲಕ್ಷ ರೂಪಾಯಿಗಳ ನಗದು ಹಾಗೂ ಅನೇಕ ಆಧಾರ್ ಕಾರ್ಡುಗಳನ್ನು ಕಳ್ಳತನ ಮಾಡಿದ್ದರು. ಆಗ ಉರುಜ್ ಹೈದರ್ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರನ್ನು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಆರಂಭಿಸಿ ಕಳ್ಳರ ಹುಡುಕಾಟ ನಡೆಸಿದ್ದರು. ಆದರೆ ಪೊಲೀಸರಿಗೆ ಕೈಗೆ ಯಾರೂ ಸಿಕ್ಕಿರಲಿಲ್ಲ.
ಇದೆಲ್ಲದರ ನಂತರ ಪೊಲೀಸರು ಅನುಮಾನದ ಆಧಾರದ ಮೇಲೆ ನೌಶಾದ್ ಎನ್ನುವ ಕಳ್ಳನನ್ನು ಹಿಡಿದು ವಿಚಾರಣೆಯನ್ನು ನಡೆಸಿದ್ದಾರೆ. ಈ ವೇಳೆ ವಿಷಯಗಳು ಒಂದೊಂದಾಗಿ ಹೊರ ಬರಲು ಆರಂಭಿಸಿದೆ. ವಿಚಾರಣೆಯ ನಂತರ ಪೊಲೀಸರಿಗೆ ನೌಶಾದ್ ಓರ್ವ ಚಾಲಾಕಿ ಕಳ್ಳನೆಂದೂ, ಆತನೇ ತನ್ನ ಹೊಸ ಸಹಚರನೊಂದಿಗೆ ಸೇರಿಕೊಂಡು ಜನ ಹಿತ ಕೇಂದ್ರದಲ್ಲಿ ಕಳ್ಳತನಕ್ಕೆ ಚಾಲನೆಯನ್ನು ನೀಡಿದ್ದನು ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಇಬ್ಬರ ಬಳಿಯೂ ಪೊಲೀಸರು 3 ಲಕ್ಷ 70 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಪೊಲೀಸರಿಗೆ ಇವರ ಬಳಿ ಕೆಲವು ಬೈಕುಗಳು ಹಾಗೂ ಶ ಸ್ತ್ರಾ ಸ್ತ್ರಗಳೂ ಸಿಕ್ಕಿವೆ.
ನೌಶಾದ್ ವಿಚಾರಣೆಯ ವೇಳೆ ತನ್ನ ಸ್ನೇಹಿತ ಇಜಾಜ್ ಅದೇ ಮೊದಲ ಬಾರಿಗೆ ಕಳ್ಳತನಕ್ಕೆ ಕೈಹಾಕಿದ್ದನು ಎಂದು ಹೇಳಿದ್ದು, ತಾವು ಕದ್ದಿದ್ದು 13 ಲಕ್ಷಗಳಲ್ಲ, ಬದಲಿಗೆ 7.5 ಲಕ್ಷ ರೂಪಾಯಿ ಎಂದು ಹೇಳಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ ನೌಶಾದ್ ಮತ್ತು ಇಜಾಜ್ ಹಣವನ್ನು ಕದ್ದ ನಂತರ ನೌಶಾದ್ ನ ಮನೆಗೆ ಬಂದಿದ್ದಾರೆ. ಅಲ್ಲಿ ಕದ್ದಿರುವ ಹಣದ ಬ್ಯಾಗನ್ನು ತೆರೆದಾಗ ಅದರಲ್ಲಿರುವ ಹಣವನ್ನು ನೋಡಿ ಇಜಾಜ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ನೌಶಾದ್ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಅಲ್ಲಿ ಮೂರು ದಿನಗಳು ಚಿಕಿತ್ಸೆ ನಡೆದು, ಅದಕ್ಕಾಗಿ ಸುಮಾರು ಎರಡು ಲಕ್ಷ ರೂಪಾಯಿಗಳು ಖರ್ಚಾಗಿದೆ. ಕದ್ದಿದ್ದ ಹಣದಲ್ಲೇ ನೌಶಾದ್ ಆಸ್ಪತ್ರೆಯ ಬಿಲ್ಲನ್ನು ಪಾವತಿ ಮಾಡಿದ್ದಾನೆ.

ಎಲ್ಲಾ ವಿಷಯ ಹೊರ ಬಂದ ಮೇಲೆ ಪೋಲಿಸರಿಗೆ ಸಿಕ್ಕಿ ಬಿದ್ದ ಇಜಾಜ್ ಪೊಲೀಸರಿಗೆ, ತಾನು ಬಹುಶಃ ಒಂದು 40-50 ಸಾವಿರ ರೂಪಾಯಿಗಳು ಕಳ್ಳತನದಿಂದ ಸಿಗುತ್ತದೆ ಎಂದು ನಿರೀಕ್ಷೆ ಮಾಡಿದ್ದರೆ, ಆದರೆ ಅಲ್ಲಿ ನನ್ನ ನಿರೀಕ್ಷೆಗೂ ಮೀರಿ ಲಕ್ಷಗಳಲ್ಲಿ ಹಣ ಬ್ಯಾಗ್ ನಲ್ಲಿ ಇತ್ತು. ಅಷ್ಟು ದೊಡ್ಡ ಮೊತ್ತದಲ್ಲಿ ಹಣವನ್ನು ಕಂಡು ನನ್ನ ಬ್ಲಡ್ ಪ್ರೆ ಶರ್ ಹೆಚ್ಚಾಯಿತು ಎಂದು ಹೇಳಿದ್ದಾನೆ. ಇಜಾಜ್ ಮೇಲೆ ಈ ಕಳ್ಳತನಕ್ಕೂ ಮೊದಲೇ 12 ಕೇಸುಗಳು ದಾಖಲಾಗಿವೆ ಎನ್ನಲಾಗಿದೆ.