ಕಷ್ಟದ ಸಮಯದಲ್ಲಿ ಪತ್ನಿ ಕೊಟ್ಟ ಸಾತ್; ಸೋನು ಸೂದ್ ಅವರ ಸರಳ ಪ್ರೇಮಕಥೆ ಸಾಕಷ್ಟು ಪಾಠ ಕಲಿಸುತ್ತದೆ!
ಬಾಲಿವುಡ್ ನಟ ಸೋನು ಸೂದ್ ಎಂದರೆ ಅವರು ಲಾಕ್ ಡೌನ್ ಸಮಯದಲ್ಲಿ ಅದೆಷ್ಟೋ ಜನರ ಪಾಲಿಗೆ ಆಪದ್ಬಾಂಧವನಾಗಿ ನಿಂತವರು. ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ನಟ ತಮ್ಮ ಖಾಸಗಿ ಜೀವನವನ್ನು ಖಾಸಗಿಯಾಗೇ ಇಡಲು ಇಷ್ಟಪಡುವ ವ್ಯಕ್ತಿ. ಸೋನು ಇಷ್ಟೆಲ್ಲಾ ಸ್ಟಾರ್ ಡಂ ಪಡೆದಿದ್ದರೂ ಕೂಡಾ ಅವರ ಪತ್ನಿ ಸೊನಾಲಿ ಸೂದ್ ಮಾತ್ರ ಅಷ್ಟಾಗಿ ಸಂದರ್ಶನಗಳು ಹಾಗೂ ಸಮಾರಂಭಗಳಲ್ಲಿ ಪತಿಯೊಡನೆ ಬಂದವರಲ್ಲ. ಜನಪ್ರಿಯತೆಯ ಹೊರತಾಗಿ ಕೂಡಾ ಈ ದಂಪತಿ ಬಹಳ ಸಾಮಾನ್ಯರಂತೆ ಇರಲು ಇಷ್ಟಪಡುತ್ತಾರೆ. ಸೋನು ಹಾಗೂ ಸೋನಾಲಿ ಇಬ್ಬರೂ ಕೂಡಾ ಪ್ರೇಮಿಸಿ ಮರುವೆಯಾಗಿದ್ದು, ಅವರದ್ದು ಒಂದು ಸಿಂಪಲ್ ಲವ್ ಸ್ಟೋರಿ.
ಸೋನು ಸೂದ್ ಇಂಜಿನಿಯರಿಂಗ್ ಮಾಡುವಾಗ ಎಂಬಿಎ ಓದುತ್ತಿದ್ದ ಸೋನಾಲಿ ಅವರನ್ನು ನಾಗ್ಪುರದಲ್ಲಿ ಮೊದಲು ಭೇಟಿಯಾದರು. ಅವರ ಭೇಟಿ ಪರಿಚರ, ಅನಂತರ ಅದು ಸ್ನೇಹ ಹಾಗೂ ಪ್ರೇಮಕ್ಕೆ ಬದಲಾಯಿತು. ಹಾಗೇ ಆದ ಪ್ರೇಮಕ್ಕೆ ಸೋನು ವಿವಾಹದ ಮೂಲಕ ಶಾಶ್ವತವಾದ ಬಂಧನವನ್ನಾಗಿ ಮಾಡಿ, ಸೊನಾಲಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅದಾದ ನಂತರ ಸೋನು ನಟನೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಬಯಸಿದಾಗ ಸೊನಾಲಿಗೆ ಈ ಎಂಟರ್ಟೈನ್ಮೆಂಟ್ ಇಂಡಸ್ಟ್ರಿ ಅಷ್ಟೊಂದು ಸುರಕ್ಷಿತವಲ್ಲ ಎನಿಸಿ ಪತಿಯ ಆಸಕ್ತಿಯನ್ನು ಒಪ್ಪಿರಲಿಲ್ಲ.

ಮುಂಬೈನಲ್ಲಿ ನಟನಾಗಿ ಅವಕಾಶ ಪಡೆಯಲು ಬಂದ ಸೋನು ಇಲ್ಲಿ ಒಂದು ಸಣ್ಣ ಮನೆಯನ್ನು ಬಾಡಿಗೆಗೆ ಪಡೆದರು. ಪತಿಯ ನಿರ್ಧಾರಕ್ಕೆ ಮೊದಲು ಒಪ್ಪದೇ ಇದ್ದ ಸೊನಾಲಿ ಕೂಡಾ ತಮ್ಮ ಅಸಮಾಧಾನ ಹೊರಹಾಕಲಿಲ್ಲ. ಅವರು ಗಂಡನ ಶ್ರಮಕ್ಕೆ ತಾವು ಕೂಡಾ ಸಹಕಾರ ನೀಡಿದರು. ಸಣ್ಣ ಮನೆಯಲ್ಲಿ ಕಷ್ಟ ಪಟ್ಟರೂ ಆಕೆ ಎಂದಿಗೂ ಅದರ ಬಗ್ಗೆ ದೂರಲಿಲ್ಲ. ಬದಲಾಗಿ ನಗು ನಗುತ್ತಾ ಪತಿಗೆ ಪ್ರೋತ್ಸಾಹ ನೀಡುತ್ತಲೇ ನಡೆದರು. ಎಷ್ಟೇ ಕಷ್ಟಗಳಿದ್ದರೂ ಜೀವನ ಸಂಗಾತಿಯು ಜೊತೆಯಿದ್ದರೆ ಎಂತಹ ಸಾಧನೆ ಕೂಡಾ ಮಾಡಬಹುದು ಎಂಬುದಕ್ಕೆ ಸೋನು ಅವರ ಜೀವನದಲ್ಲಿ ಸಾಬೀತು ಮಾಡಿದರು ಸೋನಾಲಿ.
ಸೋನು ಅವರನ್ನು ಯಾವುದೇ ಸಂದರ್ಶನದಲ್ಲಿ ಕೂಡಾ ಅವರ ಪತ್ನಿಯ ಬಗ್ಗೆ ಕೇಳಿದರೆ ಅವರು ತಮ್ಮ ಪತ್ನಿಯ ಬಗ್ಗೆ ಹೇಳುವ ಮಾತುಗಳನ್ನು ಕೇಳಿದಾಗ ಅವರಿಗೆ ತಮ್ಮ ಪತ್ನಿಯ ಮೇಲೆ ಇರುವ ಗೌರವ, ಅಭಿಮಾನ ಹಾಗೂ ಪ್ರೀತಿಯು ಆ ಮಾತುಗಳಲ್ಲಿ ತುಂಬಿರುತ್ತದೆ. ಯಾವುದೇ ಸಂಬಂಧದಲ್ಲಿ ಕೂಡಾ ಪ್ರೀತಿ ಮಾತ್ರವೇ ಅಲ್ಲ ಅಲ್ಲೊಂದು ಗೌರವ ಇರಬೇಕು ಎಂಬುದನ್ನು ಸೋನು ಅವರು ತಮ್ಮ ಪತ್ನಿಯ ಜೊತೆ ಹೊಂದಿರುವ ಅನುಬಂಧಕ್ಕೆ ಸಾಕ್ಷಿಯಾಗಿದೆ. ಸೋನು ಸೂದ್ ವೃತ್ತಿ ಜೀವನದಲ್ಲಿ ಮೇಲೆ ಬರಲು ಸಾಕಷ್ಟು ಶ್ರಮ ವಹಿಸಿದ್ದಾರೆ.

ಆದರೆ ಆ ಶ್ರಮದ ಹೆಸರಿನಲ್ಲಿ ಅವರು ತಮ್ಮ ಕುಟುಂಬಕ್ಕೆ ಇತರೆ ಎಲ್ಲಾ ವಿಷಯಗಳಿಗಿಂತ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದ್ದಾರೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಅವರು ಮನೆ, ಮಡದಿ ಹಾಗೂ ಮಕ್ಕಳಿಗೆ ಆದ್ಯತೆಯನ್ನು ನೀಡುವುದರಿಂದಲೇ ಇಷ್ಟು ವರ್ಷಗಳ ಅವರ ಸಂಸಾರ ಜೀವನದಲ್ಲಿ ಪತಿ ಪತ್ನಿಯ ನಡುವೆ ಸ್ನೇಹ, ಪ್ರೀತಿ ಕಡಿಮೆಯಾಗಿಲ್ಲ, ಮಕ್ಕಳೊಡನೆ ಭಾವನಾತ್ಮಕ ಸಂಬಂಧದಲ್ಲಿ ತೊಡಕು ಎದುರಾಗಿಲ್ಲ. ವೃತ್ತಿ ಹಾಗೂ ಕುಟುಂಬ ಎರಡಕ್ಕೂ ಕೂಡಾ ಪ್ರಾಧಾನ್ಯತೆ ಹೇಗೆ ನೀಡಬೇಕು ಎಂಬುದಕ್ಕೆ ಸೋನು ಸೂದ್ ಅವರ ಜೀವನ ಒಂದು ಮಾದರಿಯಾಗಿದೆ.