ಕಸಾಬ್ ನನ್ನು ಗಲ್ಲಿಗೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ , ಇಂದು ಬೀದಿ ಪಾಲು!!
ಮುಂಬೈನಲ್ಲಿ 26/11 ಹಲ್ಲೆ ಎಸಗಿದ ಅಜ್ಮಲ್ ಕಸಾಬ್ ಹಾರಿಸಿದ ಗುಂಡುಗಳಿಂದ ಬದುಕುಳಿದ ಮತ್ತು ಅವರ ವಿರುದ್ಧ ಸಾಕ್ಷ್ಯ ನೀಡಿದ ಹರಿಶ್ಚಂದ್ರ ಶ್ರೀವರ್ಧನಕರ್ ಇಂದು ಅಸಹಾಯಕ ಜೀವನವನ್ನು ನಡೆಸುತ್ತಿದ್ದಾರೆ. ಶ್ರೀವರ್ಧನಕರ್ ಕುಟುಂಬದವರಿಗೆ ಇಷ್ಟಬರದ ಕಾರಣ ಅವರನ್ನು ವೃದ್ಧಾಪ್ಯದಲ್ಲಿ ಬೀದಿಗಳಲ್ಲಿ ಬಿಟ್ಟಿದ್ದಾರೆ. ಇತ್ತೀಚೆಗೆ, ಮುಂಬೈನ ಬೀದಿಗಳಲ್ಲಿ ವಾಸ ಮಾಡುವಾಗ ಅಂಗಡಿಯವನು ಅವರನ್ನು ನೋಡಿ ಅವರಿಗೆ ಆಶ್ರಯ ನೀಡಿದ್ದಾರೆ. ವಿಚಾರಣೆಯ ನಂತರ, ಅವರು ಕಸಬ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿ ಉಳಿದಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಇಂಡಿಯಾ ಟುಡೆ ವರದಿ ಮಾಡಿದೆ.
ಮುಂಬೈನ ಸಾತ್ ರಸ್ತಾ ಅಂಗಡಿಯ ಮಾಲೀಕರಾದ ಡೀನ್ ಡಿಸೋಜಾ ಅವರಿಗೆ ಶ್ರೀವರ್ಧಂಕರ್ ರಸ್ತೆಯಲ್ಲಿ ಕುಳಿತಿರುವುದು ಕಂಡು ಬಂದರು ಆಗ ಅವರು ಮನುಷ್ಯತ್ವದ ನಿಟ್ಟಿನಲ್ಲಿ ಅವರಿಗೆ ಆಶ್ರಯ ನೀಡಿದರು.

ಆ ವೃದ್ಧ ವ್ಯಕ್ತಿ ಆಹಾರ ಅಥವಾ ನೀರಿಲ್ಲದೆ ಬೀದಿಯಲ್ಲಿ ವಾಸಿಸುತ್ತಿದ್ದ. ಶ್ರೀವರ್ಧಂಕರ್ ಅವರನ್ನು ಅವರ ಕುಟುಂಬದವರೇ ಹೊರಹಾಕಿದ್ದರಿಂದ ಇಂದು ಅವರು ಬೀದಿಯಲ್ಲಿ ವಾಸ ಮಾಡುವ ಸಮಯ ಬಂದಿದೆ.
26/11 ರ ಆ ರಾತ್ರಿ ಶ್ರೀವರ್ಧನಕರ್ ಅವರು ಕಸಾಬ್ ಮತ್ತು ಅವರ ಸಹಚರ ಅಬು ಇಸ್ಮಾಯಿಲ್ ಅವರನ್ನು ಕಾಮಾ ಆಸ್ಪತ್ರೆಯ ಹೊರಗೆ ಎದುರಿಸಿದ್ದರು. ಅವರಿಗೆ ಒಂದು ಬುಲೆಟ್ ಸಹ ತಾಗಿತ್ತು ಆದರೂ ಭಯವಿಲ್ಲದೆ ಕಸಬ್ನ ಸಹಚರನನ್ನು ತನ್ನ ಚೀಲದಿಂದ ತಳ್ಳಿ ಅಲ್ಲಿಂದ ಬದುಕಿ ಉಳಿದಿದ್ದರು. ಆದುದರಿಂದಲೇ ಕಸಾಬ್ನ ಮರಣದಂಡನೆಯ ಪ್ರಮುಖ ಸಾಕ್ಷಿಗಳಲ್ಲಿ ಶ್ರೀವರ್ಧಂಕರ್ ಒಬ್ಬರಾಗಿದ್ದರು.

ಶ್ರೀವರ್ಧಂಕರ್ ಅವರನ್ನು ರಸ್ತೆಯಲ್ಲಿ ಕಂಡಾಗ ಅವರು ತಮ್ಮ ಸ್ನೇಹಿತ ಗೈಕ್ವಾಡ್ಗೆ ಮಾಹಿತಿ ನೀಡಿದರು ಎಂದು ಡಿಸೋಜ ಹೇಳಿದರು. ಗೈಕ್ವಾಡ್ IMCares ಎಂಬ ಹೆಸರಿನ ಎನ್ಜಿಒ ನಡೆಸುತ್ತಿದ್ದಾರೆ. ಎನ್ಜಿಒ ಸದಸ್ಯರು ಶ್ರೀವರ್ಧಂಕರ್ಗೆ ಊಟ ನೀಡಿದಾಗ ಅವರು ಅದನ್ನು ತಿನ್ನಲು ನಿರಾಕರಿಸಿದರು. ಎನ್ಜಿಒ ಶ್ರೀವರ್ಧಂಕರ್ಗೆ ಸ್ನಾನ ಮಾಡಿ, ಕೂದಲು ಕತ್ತರಿಸುತ್ತಿದ್ದಾಗ ಏತನ್ಮಧ್ಯೆ, ಶ್ರೀವರ್ಧಂಕರ್ ಅವರು , ಹರಿಶ್ಚಂದ್ರ, ಬಿಎಂಸಿ ಮತ್ತು ಮಹಾಲಕ್ಷ್ಮಿ ಮುಂತಾದ ಹೆಸರುಗಳು ಗೊಣಗುತ್ತಿದ್ದರು. ಅದರಿಂದ ಅವರ ಸಂಬಂಧಿಕರು ಎಲ್ಲಿ ವಾಸಿಸುತ್ತಿದ್ದಾರೆಂದು ತಿಳಿದುಬಂದಿದೆ.
ಗಾಯಕವಾಡ್ ಅವರು ಮಹಾಲಕ್ಷ್ಮಿಯ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾಲೋನಿಯಲ್ಲಿ ಶ್ರೀವರ್ಧಂಕರ್ ಅವರ ಸಹೋದರನನ್ನು ಹುಡುಕಲು ಇಡೀ ದಿನ ಕಳೆದರು. ಆಗ ಅಲ್ಲಿದ್ದ ಜನರು ಅವರು ಕಲ್ಯಾಣ್ನಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದರು. ಹಾಗೇ ಅವರು 26/11 ರಂದು ಶ್ರೀವರ್ಧನಕರ ಕೆಲಸದ ಬಗ್ಗೆ ಮಾಹಿತಿ ನೀಡಿದರು. ಇದರ ನಂತರ ಗೈಕ್ವಾಡ್ ಅಗ್ರಿಪಾಡಾ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಕೂಡಲೇ ಕಲ್ಯಾಣ್ನಲ್ಲಿ ವಾಸಿಸುತ್ತಿದ್ದ ಹುಡುಗನಿಗೆ ಟ್ರಾವೆಲ್ ಪಾಸ್ ನೀಡಿ ಶ್ರೀವರ್ಧಂಕರ್ ಅವರನ್ನು ಕಲ್ಯಾಣ್ಗೆ ಕರೆದೊಯ್ಯಲು ಹೇಳಿದರು.

ಆದ್ರೆ ಗಾಯಕವಾಡ ಅವರು ಒಂದು ಆಘಾತಕಾರಿ ವಿಷಯವನ್ನು ಹೇಳಿದರು ಅದೇನೆಂದರೆ ಶ್ರೀವರ್ಧನಕರ ಇವರ ಕುಟುಂಬದವರಿಗೆ ಅವರನ್ನು ಮನೆಯಲ್ಲಿ ವಾಸಿಸುವದಕ್ಕೆ ಅನುಮತಿ ಕೊಡುವದಿಲ್ಲ ಹೊರತಾಗಿ ಅವರನ್ನು ಒಂದು ಆಶ್ರಮದಲ್ಲಿ ಇಡುವದರ ಕುರಿತು ವಿಚಾರಣೆ ಮಾಡುತ್ತಿದ್ದರು ತದನಂತರ ಗಾಯಕವಾಡ ಅವರು ನಮ್ಮ ದೇಶದ ಸಲುವಾಗಿ ಮಹತ್ವದ ಕಾರ್ಯ ಮಾಡಿರುವ ಶ್ರೀವರ್ಧನ ಕರ ಅವರಿಗೆ ಸಹಾಯ ಮಾಡಿರಿ ಎಂದು ತಮ್ಮ ಎನ್ ಜಿ ಯೋ ಮೂಲಕ ಮನವಿ ಮಾಡಿಕೊಡಿದ್ದಾರೆ.