ಕಾಡಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿಂಹವನ್ನು ನರಿ ಹಿಂದಿನಿಂದ ಬಂದು ಬಾಲ ಎಳೆದಾಗ ನೋಡಿ ಮುಂದೇನಾಯಿತು ಈ ವೈರಲ್ ವಿಡಿಯೋ!
ಸೋಶಿಯಲ್ ಮೀಡಿಯಾ(Social Media) ದಲ್ಲಿ ವನ್ಯಜೀವಿಗಳ ವಿಡಿಯೋಗಳನ್ನು ನೋಡಲು ತುಂಬಾ ಇಷ್ಟ ಪಡುತ್ತಾರೆ. ಕಾಡಿನ ರಾಜನೆಂದೇ ಪ್ರಸಿದ್ಧಿ ಪಡೆದ ಸಿಂಹದ ಜೊತೆಗೆ ತಮಾಷೆ ಮಾಡುವದು ಯಾರಿಗೂ ಸಾಧ್ಯವಿಲ್ಲ. ಏಕೆಂದರೆ ಸಿಂಹದೊಂದಿಗೆ ತಮಾಷೆ ಮಾಡುವದು ಅಂದರೆ ಖುದ್ದು ಅದರ ಭೋಜನಕ್ಕೆ ಅಥವಾ ಬೇಟೆಗೆ ಬಲಿಯಾಗುವದು ಎಂದರ್ಥ. ಆದರೆ ಸದ್ಯಕ್ಕೆ ಒಂದು ಸಿಂಹದ ವಿಡಿಯೋ ವೈರಲ್ ಆಗುತ್ತಿದೆ ಅದರಲ್ಲಿ ಸುಮ್ಮನೆ ಕುಳಿತು ವಿಶ್ರಾಂತಿ ಪಡೆಯುತ್ತಿರುವ ಸಿಂಹದ ಹತ್ತಿರ ಒಂದು ತುಂಟ ನರಿ ಬಂದು ಅದರ ಬಾಲವನ್ನು ಜಗ್ಗಿ ಅಲ್ಲಿಂದ ಓಡಿ ಹೋಗುತ್ತದೆ. ಈ ಹಳೆಯ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇಂಡಿಯನ್ ಫಾರೆಸ್ಟ್ ಸರ್ವಿಸ್ ನ ಅಧಿಕಾರಿ ಸುಶಾಂತ್ ನಂದಾ ಇವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ, ಕಾಡಿನಲ್ಲಿ ಒಂದು ಸಿಂಹ ಮರದ ಕೆಳಗೆ ವಿಶ್ರಾಂತಿ ತಗೆದುಕೊಳ್ಳುತ್ತಿತ್ತು. ಹಿಂದಿನಿಂದ ಒಂದು ನರಿ ಬರುತ್ತದೆ, ಬಂದು ಅದರ ಬಾಲವನ್ನು ತನ್ನ ಬಾಯಿಂದ ಜಗ್ಗಿ ಅಲ್ಲಿಂದ ಓಡಿ ಹೋಗುತ್ತದೆ. ಹೆದರಿಕೆಯಿಂದ ಸಿಂಹ ಎದ್ದೇಳುತ್ತದೆ ಮತ್ತು ಆಕಡೆ ಈಕಡೆ ನೋಡಲು ಪ್ರಾರಂಭಿಸುತ್ತದೆ. ಮಲಗಿದ್ದ ಸಿಂಹ ಎದ್ದೇಳುವಷ್ಟರಲ್ಲಿ ನರಿ ಅಲ್ಲಿಂದ ದೂರ ಓಡಿ ಹೋಗುತ್ತದೆ. ಈ ತಮಾಷೆಯ ವಿಡಿಯೋ ಟ್ವಿಟ್ಟರ್ ನಲ್ಲಿ ಜನ ತುಂಬಾ ಇಷ್ಟ ಪಡುತ್ತಿದ್ದಾರೆ.
ಸುಶಾಂತ್ ನಂದಾ ಈ ವಿಡಿಯೋ ಶೇರ್ ಮಾಡುತ್ತಾ ಬರೆದಿದ್ದಾರೆ, ‘ ಪ್ರಲೋಭನೆಯನ ಹೊರೆತು ಪಡಿಸಿ ಎಲ್ಲ ವಿಷಯಗಳನ್ನು ವಿರೋಧಿಸಬಹುದು’.
Video ನೋಡಿ:
One can resist everything except temptation 😔 pic.twitter.com/UxIa5Q4tXv
— Susanta Nanda (@susantananda3) June 18, 2020
ಸುಶಾಂತ್ ಅವರು ಈ ವಿಡಿಯೋವನ್ನು ಜೂನ್ 18 ರಂದು ಮುಂಜಾನೆ 8 ಗಂಟೆಗೆ ಪೋಸ್ಟ್ ಮಾಡಿದ್ದಾರೆ, ಅದನ್ನು ಶೇರ್ ಮಾಡಿದ ಒಂದು ಗಂಟೆಯೊಳಗೆ ಸುಮಾರು 1 ಸಾವಿರಕ್ಕಿಂತ ಹೆಚ್ಚು ವೀಕ್ಷಣೆಗಳು ಬಂದಿವೆ. ಅದರೊಂದಿಗೆ 200 ಕ್ಕಿಂತ ಹೆಚ್ಚು ಲೈಕ್ಸ್ ಹಾಗೂ 40 ಕ್ಕಿಂತ ಹೆಚ್ಚು ರೀ-ಟ್ವಿಟ್ಸ್ ಗಳು ಬಂದಿವೆ. ಜನರಿಗೆ ಈ ವಿಡಿಯೋ ತುಂಬಾ ತಮಾಷೆಯಾಗಿದೆ. ಯೂಜರ್ಸ್ ಗಳು ಈ ಟ್ವಿಟ್ಟರ್ ಕುರಿತು ಹೀಗೆ ರಿಯೆಕ್ಷನ್ ನೀಡಿದ್ದಾರೆ………