ಕಾಡಿನಲ್ಲಿ ಸುರಕ್ಷಿತ ಅಂತರ ಕಾಪಾಡದಿದ್ದರೆ ಏನಾಗುತ್ತದೆ? ವೈರಲ್ ಆಯ್ತು ಬೆಚ್ಚಿ ಬೀಳಿಸುವ ಜಂಗಲ್ ಸಫಾರಿ Video

ವರ್ಷಗಳು ಉರುಳಿದಂತೆ ಆಧುನಿಕತೆಯ ಹೆಸರಿನಲ್ಲಿ ಮನುಷ್ಯ ಅರಣ್ಯಗಳಲ್ಲಿ ಇದ್ದ ಮರಗಳನ್ನೆಲ್ಲ ಕಡಿದು ನಗರಗಳ ನಿರ್ಮಾಣದಲ್ಲಿ ತೊಡಗಿದ್ದಾನೆ. ಅರಣ್ಯಗಳನ್ನೇ ಆಶ್ರಯವನ್ನಾಗಿ ನಂಬಿ ಬದುಕುತ್ತಿದ್ದ ಅದೆಷ್ಟು ಜೀವಿಗಳ ಪಾಲಿಗೆ ಮನುಷ್ಯ ಕಂ ಟ ಕ ಪ್ರಾಯನಾಗಿದ್ದಾನೆ. ದಿನದಿಂದ ದಿನಕ್ಕೆ ವನ್ಯ ಮೃಗಗಳ ಸಂತತಿಯೂ ಅಳಿಯುತ್ತಿದ್ದು, ಪ್ರಕೃತಿಯಲ್ಲಿ ಅಸಮತೋಲನ ಏರ್ಪಡುತ್ತಿದೆ. ಇಂತಹ ಅಸಮತೋಲನವನ್ನು ತಪ್ಪಿಸಲು ಪ್ರಾಣಿ ಸಂಕುಲವನ್ನು ಸಂರಕ್ಷಣೆ ಮಾಡಲು ಸರ್ಕಾರಗಳು ಪ್ರಯತ್ನವನ್ನು ಮಾಡುತ್ತಾ, ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ವನ್ಯ ಮೃಗ ಸಂರಕ್ಷಣಾ ತಾಣಗಳನ್ನು ನಿರ್ಮಾಣ ಮಾಡುತ್ತಿದೆ. ಆದರೆ ಇಲ್ಲಿ ಕೂಡಾ ಪ್ರಾಣಿಗಳಿಗೆ ಸ್ವತಂತ್ರವಾಗಿ ಬದುಕುವ ಅವಕಾಶವೇ ಇಲ್ಲ ಎನ್ನುವುದು ಪ್ರತಿಯೊಬ್ಬರೂ ನಂಬಲೇಬೇಕಾದ ವಿಚಾರವಾಗಿದೆ. ವನ್ಯ ಮೃಗಗಳನ್ನು ನೋಡುವ ಆಸೆಯಿಂದ ಜನರು ಅಭಯಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನ ಗಳಿಗೆ ಭೇಟಿ ನೀಡುವುದು ಒಂದು ಹವ್ಯಾಸವಾಗಿದೆ.

ಆ ತಾಣಗಳಲ್ಲಿ ಜಂಗಲ್ ಸಫಾರಿಗಳು ತೀರಾ ಸಾಮಾನ್ಯವಾಗಿದ್ದು, ಕಾಡಿನಲ್ಲಿ ಸಫಾರಿಗೆ ಏರ್ಪಾಟು ಮಾಡಲಾಗಿರುತ್ತದೆ. ರಜಾ ದಿನಗಳಲ್ಲಿ ಮೋಜು ಮಾಡಲು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಈ ತಾಣಗಳಿಗೆ ಭೇಟಿ ನೀಡುವುದು ಮಾತ್ರವಲ್ಲದೇ, ವನ್ಯಜೀವಿಗಳನ್ನು ನೋಡಲು ಅರಣ್ಯಗಳ ಒಳಗೆ ಪ್ರವೇಶಿಸುತ್ತಾರೆ. ಪ್ರತಿದಿನ ಹೀಗೆ ಪ್ರಾಣಿಗಳನ್ನು ನೋಡಲು ಪ್ರವಾಸಿಗರು ಬರುವುದು ಸಹಜವಾಗಿಯೇ ಪ್ರಾಣಿಗಳಿಗೆ ತೊಂದರೆ ಉಂಟು ಮಾಡುತ್ತದೆ. ನಮ್ಮ ಮನೆಯೊಳಗೆ ಯಾರಾದರೂ ಅಪರಿಚಿತರು ಬಂದು ನಮ್ಮನ್ನು ನೋಡಿದರೆ ಹೇಗೆ ನಮಗೆ ಅಸಹನೀಯ ಎನಿಸುವುದೋ ಅದೇ ರೀತಿಯಲ್ಲಿ ವನ್ಯ ಜೀವಿಗಳು ಇರುವ ತಾಣದಲ್ಲಿ ಹಾಗೂ ಪ್ರಶಾಂತವಾಗಿ ಓಡಾಡಿಕೊಂಡಿರುವ ಸ್ಥಳ ಸ್ಥಳಗಳಲ್ಲಿ ಕೂಡ ತಮ್ಮ ಮನರಂಜನೆಗಾಗಿ ಜನರು ನುಗ್ಗುತ್ತಿದ್ದಾರೆ.

ಪ್ರಾಣಿಗಳ ಮನಃ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಜಂಗಲ್ ಸಫಾರಿಗೆ ಹೋದವರ ಮೇಲೆ ಆನೆಯೊಂದು ತನ್ನ ಸಿ ಟ್ಟ ನ್ನು ತೋರಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದು ಪ್ರತಿಯೊಬ್ಬರು ಆಲೋಚನೆ ಮಾಡಬೇಕಾದ ಸಂದೇಶವೊಂದನ್ನು ನೀಡಿದೆ. ಕಾಡಿನ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಆನೆಯ ಹಿಂದೆ ಜಂಗಲ್ ಸಫಾರಿ ವಾಹನ ಪ್ರವಾಸಿಗರನ್ನು ಕೂರಿಸಿಕೊಂಡು ಆನೆಯನ್ನು ಹಿಂಬಾಲಿಸಿದೆ.
ವಾಹನದಲ್ಲಿ ಕುಳಿತಿದ್ದವರು ಆನೆಯ ಫೋಟೋಗಳನ್ನು ಹಿಡಿಯುತ್ತಾ, ಖುಷಿಪಡುತ್ತಾ ನಗುತ್ತಾ ಸಾಗಿದ್ದಾರೆ. ಒಂದಷ್ಟು ದೂರ ಆನೆಯು ಕೂಡ ಬಹಳ ಶಾಂತವಾಗಿ ನಡೆದುಹೋಗಿದೆ. ಆದರೆ ಒಂದು ಹಂತದ ನಂತರ ತನ್ನ ಹಿಂದೆ ಬರುತ್ತಿರುವ ಸಫಾರಿ ವಾಹನ ಆನೆಗೆ ಕಿರಿಕಿರಿಯನ್ನು ಉಂಟು ಮಾಡಿದೆ. ಆಗ ಸಿ ಟ್ಟಾ ದ ಆನೆ ಹಿಂದೆ ತಿರುಗಿ ಸಫಾರಿ ವಾಹನದ ಮೇಲೆ ದಾಳಿಯಿಟ್ಟಿದೆ.

ಕೂಡಲೇ ಎಚ್ಚೆತ್ತುಕೊಂಡ ವಾಹನದ ಚಾಲಕ ವಾಹನವನ್ನು ಹಿಂದಕ್ಕೆ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಆನೆಯು ಮಾತ್ರ ಸಿಟ್ಟಿನಿಂದ ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ವಾಹನದಲ್ಲಿದ್ದ ಪ್ರವಾಸಿಗರು ಆನೆಯ ಸಿಟ್ಟನ್ನು ಕೂಡಾ ತಮಾಷೆ ಯನ್ನಾಗಿ ಸ್ವೀಕರಿಸಿ ಹಾಸ್ಯ ದೃಶ್ಯ ಎಂಬಂತೆ ನಕ್ಕಿರುವುದು ಸ್ಪಷ್ಟವಾಗಿ ಕೇಳಿಸಿದೆ. ಸಾವಿರಾರು ಜನ ವೀಕ್ಷಣೆ ಮಾಡಿರುವ ಈ ವಿಡಿಯೋವನ್ನು ಅನೇಕ ಜನ ರೀಟ್ವೀಟ್ ಮಾಡಿದ್ದಾರೆ. ಪ್ರಾಣಿಗಳ ಏಕಾಂತ ಕ್ಕೂ ಅವಕಾಶವಿಲ್ಲದ ಪರಿಸ್ಥಿತಿಯಿದು ಎಂದು ದಯೆ ತೋರಿದ್ದಾರೆ. ಕೆಲವರು ಆ ಪ್ರವಾಸಿಗರನ್ನು ಬಂ‌ ಧಿ ಸಿ ಜೈಲಿಗೆ ಹಾಕಿ ಎಂದು ಅ ಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳ ಏಕಾಂತ ಭಂಗ ಮಾಡುವುದಕ್ಕೆ ಏಕೆ ಶಿ ಕ್ಷೆಯಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.‌

ವಿಡಿಯೋ ನೋಡಿ

ಪ್ರವಾಸಿಗರಿಗೆ ಸರಿಯಾದ ತರಬೇತಿ ನೀಡಬೇಕು ಎಂದಿದ್ದಾರೆ ಮತ್ತೆ ಕೆಲವರು. ಮನುಷ್ಯ ಏಕೆ ಹೀಗೆ ಪ್ರಾಣಿಗಳಿಗೆ ಕಿರಿಕಿರಿ ಉಂಟು ಮಾಡುವನ್ನು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.‌ ವೀಡಿಯೋ ಶೇರ್ ಮಾಡಿದ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಶೀಘ್ರದಲ್ಲೇ ಯಾವಾಗಲೂ ಇಷ್ಟು ಅದೃಷ್ಟಶಾಲಿಗಳಾಗಿರುವುದಿಲ್ಲ, ಜಂಗಲ್ ಸಫಾರಿಗೆ ಹೋದಾಗ ಪ್ರಾಣಿಗಳಿಂದ ನಿರ್ಧಿಷ್ಟ ದೂರವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಇರಬೇಕು ಎಂದು ಹೇಳಿದ್ದಾರೆ. ವಿಷಯ ಏನೇ ಆದರೂ ಮನುಷ್ಯನ ಮನರಂಜನೆಯಿಂದ ಪ್ರಾಣಿಗಳಿಗೆ ಏಕಾಂತ, ಮನಃಶಾಂತಿ ಖಂಡಿತ ಇಲ್ಲವಾಗಿದೆ.