ಕಾಡಿನ ರಾಜನಾದ ಸಿಂಹಕ್ಕೆ ಎಮ್ಮೆಗಳಿಂದ ‘ಭಯ’ ದ ಅರಿವಾದಾಗ… ಪ್ರಾಣ ಉಳಿಸಿಕೊಳ್ಳಲು ಸಿಂಹ ಮಾಡಿದ ಪ್ರತಾಪ ಈ ವಿಡಿಯೋದಲ್ಲಿ ನೋಡಿದರೆ ಬಿದ್ದು ಬಿದ್ದು ನಗುತ್ತೀರಿ!

ಸಿಂಹಕ್ಕೆ ಕಾಡಿನರಾಜನೆಂದೇ ಗುರುತಿಸಲಾಗುತ್ತದೆ. ಕೆಲವೊಮ್ಮೆ ಇದಕ್ಕೂ ಸಹ ಕಾಡಿನಲ್ಲಿ ಭಯದ ಅರಿವಾಗುವುದು ಸಾಮಾನ್ಯ. ಸಾಮಾನ್ಯವಾಗಿ ನಾವು ಸಿಂಹದ ಬೇಟೆಯಾಡುವ ಹಿಂಸ್ರ ರೂಪವನ್ನೇ ನೋಡಿದ್ದೇವೆ. ಸದ್ಯ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಇದಕ್ಕೆ ತೀರ ಭಿನ್ನವಾಗಿದೆ. ಈ ವಿಡಿಯೋದಲ್ಲಿ ಸಿಂಹವು ಭಯದ ಅರಿವನ್ನು ಮಾಡಿಕೊಂಡಿದೆ. ಯಾಕೆಂದರೆ ಅದಕ್ಕೆ ಇಲ್ಲಿ ಸಂಪೂರ್ಣವಾಗಿ ಭೀತಿ ಆವರಿಸಿರುವದು ಕಂಡು ಬರುತ್ತದೆ. ಸಿಂಹದ ಈ ದೃಶ್ಯ ನೋಡಿದರೆ ಮೊದಲಿಗೆ ವಿಶ್ವಾಸವೇ ಕೂಡುವುದಿಲ್ಲ.

ಧೈರ್ಯ ಮತ್ತು ಶಕ್ತಿಯುತ ಸ್ವಭಾವಕ್ಕೆ ಪ್ರಸಿದ್ಧಿಯನ್ನು ಪಡೆದಿರುವ ಸಿಂಹವನ್ನೇ ನಾವು ಇಲ್ಲಿಯವರೆಗೆ ನೋಡಿದ್ದೇವೆ. ಅದು ಹೆದರುವುದನ್ನು ಹೆಚ್ಚಾಗಿ ನಾವು ಕಂಡೇ ಇಲ್ಲ. ಆದರೆ ಇಲ್ಲಿ ನಡೆದ ಪರಿಸ್ಥಿತಿಯು ಸಿಂಹದ ಜೊತೆಗೆ ತುಂಬಾ ವಿಚಿತ್ರವಾಗಿದೆ. ಯಾಕಂದರೆ ವಿಡಿಯೋದಲ್ಲಿ ಸಿಂಹವು ಬೇರೆ ಪ್ರಾಣಿಗಳ ಮೇಲೆ ಹಲ್ಲೆ ಮಾಡುವುದು ಅಥವಾ ಅಟ್ಯಾಕ್ ಮಾಡುವದು ಬಿಟ್ಟು ಇಲ್ಲಿ ತನ್ನ ಪ್ರಾಣವನ್ನೇ ಹೇಗಾದರೂ ಉಳಿದರೆ ಸಾಕು ಎಂಬಂತೆ ಹೆಣಗಾಡುತ್ತಿದೆ. ಈ ಪ್ರಯತ್ನದಲ್ಲಿ ಅದು ಒಂದು ಮರವನ್ನು ಏರಲು ಪ್ರಯತ್ನಿಸಿದೆ. ಆದರೆ ಆ ಮರದ ಮೇಲೇರಲೂ ಆಗದೇ ಭಯದಿಂದ ಕೆಳಗೂ ಇಳಿಯಲು ಆಗದೆ ಮಧ್ಯದಲ್ಲಿ ಸ್ತಬ್ದವಾಗಿ ನಿಂತಿದೆ. ಈ ದೃಶ್ಯವನ್ನು ನೋಡಲು ತುಂಬಾ ತಮಾಷೆಯಂತಿದೆ.

ವೀಡಿಯೋ ನೋಡಿ

ಇದಕ್ಕೆ ಕಾರಣ ಅಲ್ಲಿರುವ ಎಮ್ಮೆಗಳ ದೊಡ್ಡ ಗುಂಪು. ಅವುಗಳಿಂದ ತನ್ನ ಜೀವ ಉಳಿಸಿಕೊಳ್ಳಲು ಮರದ ಮೇಲೆ ಏರಿದ ಸಿಂಹವು ತುಂಬಾ ಭಯದಲ್ಲಿಯೇ ಇದ್ದಂತೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ಈ ಪ್ರಾಣಿಯು ಬೇಟೆಯಾಡುವಾಗ ಬೇಟೆಯ ಮೇಲೆ ಸ್ವಲ್ಪವೂ ದಯೆಯನ್ನು ತೋರಿಸುವುದಿಲ್ಲ. ಎಮ್ಮೆಗಳ ಆ ಗುಂಪು ತನ್ನ ಹತ್ತಿರವೇ ಬರುತ್ತಿದೆ ಎಂಬಂತೆ ಭಾಸವಾಗಿ ಸಿಂಹಕ್ಕೆ ಬೆವರು ಬಿಟ್ಟಿದೆ. ಈ ವಿಡಿಯೋವನ್ನು wild_animal_shorts_ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಎಮ್ಮೆಗಳ ಗುಂಪಿನಿಂದ ತನ್ನನ್ನು ಉಳಿಸಿಕೊಳ್ಳಲು ಸಿಂಹವು ಏರಿತು ಮರವನ್ನು, ಎಂದು ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋ ನೋಡಿ ನೇಟಿಜನ್ಸ್ ಗಳು ತಮ್ಮ ಅನೇಕ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಕೆಲವರು ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ ಇಲ್ಲಿಯವರೆಗೆ 21 ಸಾವಿರಗಳ ವರೆಗೆ ಲೈಕ್ಸ್ ಗಳು ಬಂದಿವೆ.