ಕಾಡುಹಂದಿ ಮತ್ತು ಅದರ ಮರಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ ಮಾಸ್ಟರ್ ಹಂಟರ್ ಚಿರತೆ…! ನೋಡಿ ಈ ವಿಡಿಯೋ…
ಕಾಡಿನ ಜೀವನ ಅಂದುಕೊಂಡಷ್ಟು ಸರಳವಾಗಿಲ್ಲ. ಮೇಲ್ನೋಟಕ್ಕೆ ಅಲ್ಲಿರುವ ಎಲ್ಲ ಪ್ರಾಣಿಗಳು ಸ್ವಚ್ಚಂದವಾಗಿ, ಸ್ವತಂತ್ರವಾಗಿ ಮನುಷ್ಯನಿಂದ ದೂರ, ಮನಸ್ಸಿಗೆ ಬಂದ ಹಾಗೆ ಓಡಾಡಿಕೊಂಡು ಜೀವಿಸುತ್ತವೆ ಎಂದು ಕಂಡು ಬಂದರೂ ಅನೇಕ ಸಾಧು ಪ್ರಾಣಿಗಳಿಗೆ ಹೆಜ್ಜೆ ಹೆಜ್ಜೆಗೆ ಆತಂಕ, ಭಯ ಕಟ್ಟಿಟ್ಟ ಬುತ್ತಿ. ಸಾವು ಯಾವಾಗ, ಎಲ್ಲಿ, ಯಾವ ರೀತಿಯಲ್ಲಿ ಅವಿತುಕೊಂಡು ಕುಳಿತಿರುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ದಿನದ 24 ಗಂಟೆಗಳೂ ಸಹ ಮೈಯೆಲ್ಲಾ ಕಣ್ಣಾಗಿ ಸಂಚರಿಸಬೇಕಾಗುತ್ತದೆ ಇಲ್ಲಯ ಪ್ರಾಣಿಗಳು. ಎಷ್ಟೋ ಸಲ ಈ ಪ್ರಾಣಿಗಳು ನಿದ್ರೆಯೂ ಸಹ ಚೆನ್ನಾಗಿ ಮಾಡುವದಿಲ್ಲ. ಕಾರಣ ಸುರಕ್ಷಿತವಾದ ಸ್ಥಳವಿಲ್ಲದ್ದಕ್ಕೆ ಅಲ್ಲಿ ಇಲ್ಲಿ ಮಲಗಿರುವಾಗಲೇ ಇವು ತನಗಿಂತ ದೊಡ್ಡ ಕಾಡು ಪ್ರಾಣಿಗಳಿಗೆ ಆಹಾರವಾಗಿ ಬಿಡುತ್ತವೆ.
ಈಗ ಈ ವಿಡಿಯೋದಲ್ಲಿ ಕಾಡುಹಂದಿಯೊಂದು ತನ್ನ ಮರಿಗಳ ಜೊತೆಗೆ ಆರಾಮಾಗಿ ಅತ್ತಿತ್ತ ನೋಡುತ್ತಾ ತುಂಬಾ ಸಹಜವಾಗಿ ಅಷ್ಟೇ ರಿಲ್ಯಾಕ್ಸ್ ಮೂಡ್ ನಲ್ಲಿ ಹೆಜ್ಜೆ ಹಾಕುತ್ತಿದೆ. ಪಾಪ ತಾಯಿ ಹಂದಿ ಮತ್ತು ಮರಿಗಳಿಗೇನು ಗೊತ್ತು ಅಪಾಯ ಅಡಿ ಅಂತರದಲ್ಲಿರುವ ಬದಿಯ ಹುಲ್ಲಿನಲ್ಲಿಯೇ ಅವಿತು ಕುಳಿತಿದೆ ಎಂದು. ಧೂರ್ತ ಚಿರತೆಯೊಂದು ತನಗಾಗಿ ಹೊಂಚು ಹಾಕಿ ಕುಳಿತಿದೆ ಎಂಬುದು ಕಾಡುಹಂದಿಯ ಗಮನಕ್ಕೆ ಬಂದಿಲ್ಲ. ಹೀಗಾಗಿ ಕಾಡುಹಂದಿಯು ಮತ್ತು ಮರಿಗಳು ನೇರವಾಗಿ ಬೇಟೆಗಾಗಿ ಅವಿತು ಕುಳಿತ ಚಿರತೆಯ ಮುಂದೆಯೇ ಹೋಗಿ ನಿಂತಿವೆ.
ಆಮೇಲೆನು ಕೇಳಬೇಕೆ? ಮೊದಲೇ ಬೇಟೆಯಲ್ಲಿ ನಿಪುಣವಾದ ಚಿರತೆ ಕ್ಷಣದಲ್ಲಿ ಹಂದಿಗಳ ಮೇಲೆ ಮಾಡಿದೆ ಅಟ್ಯಾಕ್. ಕ್ಷಣಾರ್ಧದಲ್ಲಿ ಹಂದಿಗಳು ಕಕ್ಕಾಬಿಕ್ಕಿಯಾಗಿ ದಾರಿಯೂ ನೋಡದೆ ಸಿಕ್ಕ ಕಡೆ ಚೆಲಾಪಿಲ್ಲಿಯಾಗಿವೆ…
ವಿಡಿಯೋ ನೋಡಿ
View this post on Instagram
ಈ ವೀಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ africanwildlife1 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ತಮಾಷೆಯ ವಿಡಿಯೋ ನೆಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ ಎಂದು ಅವರು ನೀಡಿರುವ ಲೈಕ್ಸ್ ಗಳಿಂದ ಕಂಡು ಬರುತ್ತಿದೆ. ಈ ವಿಡಿಯೋಗೆ ಇಲ್ಲಿಯವರೆಗೆ 7 ಲಕ್ಷಕ್ಕೂ ಮೇಲ್ಪಟ್ಟು ಲೈಕ್ಸ್ ಗಳು ದೊರಕಿವೆ.