ಕಾನೂನಿನ ಕೈಗೆ ಸಿಗಬಾರದೆಂದು ಎಸಿಬಿ ಅಧಿಕಾರಿಗಳ ಕಣ್ಣೆದುರೇ ಲಕ್ಷ ಲಕ್ಷ ಹಣ ಗ್ಯಾಸ್ ಸ್ಟೋವ್ ಮೇಲೆ ಸುಟ್ಟು ಹಾಕಿದ ತಹಸೀಲ್ದಾರ್!
ರಾಜಸ್ಥಾನದ ಸಿರೋಹಿ ಎಂಬ ಪ್ರದೇಶದಲ್ಲಿ ನಡೆದ ಘಟನೆಯೊಂದರ ವಿಡಿಯೋ ಒಂದು ವೈರಲ್ ಆಗಿದೆ. ಈ ವೈರಲ್ ವಿಡಿಯೋ ನೋಡಿದ ಜನರು ಒಂದು ಕ್ಷಣ ಶಾಕ್ ಆಗಿದ್ದಾರೆ. ಹೀಗೂ ಉಂಟೆ!!! ಎಂದು ಆಶ್ಚರ್ಯ ಪಟ್ಟಿದ್ದಾರೆ. ಅಲ್ಲದೇ ಇದೆಂತಹ ಮೂರ್ಖತನದ ಕೆಲಸವೆಂದು ಎಂದು ಟೀಕೆ ಮಾಡಿದ್ದಾರೆ, ಅಲ್ಲದೇ ಇದು ಭ್ರಷ್ಟ ಅಧಿಕಾರಿಯ ಭ್ರ ಷ್ಟ ತನವನ್ನು ಸಾರಿ ಹೇಳುವಂತಹ ವೀಡಿಯೋ ಇದಾಗಿದೆ. ಇಷ್ಟಕ್ಕೂ ವಿಡಿಯೋದಲ್ಲಿ ಕಂಡ ದೃಶ್ಯವಾದರೂ ಏನು?? ಎನ್ನುವುದಾದರೆ, ಇಲ್ಲಿನ ತಹಸಿಲ್ದಾರ್ ಒಬ್ಬರು ಹಣದ ಕಂತೆಗಳನ್ನು ಗ್ಯಾಸ್ ಸ್ಟವ್ ಮೇಲೆ ಬೆಂಕಿಯಲ್ಲಿ ಸುಟ್ಟು ಹಾಕಿದ್ದಾರೆ. ಹೀಗೆ ಹಣದ ಕಂತೆಗಳನ್ನು ಬೆಂಕಿಯಲ್ಲಿ ಸುಡುತ್ತಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಹಸೀಲ್ದಾರರು ಈ ರೀತಿ ದೊಡ್ಡ ಮೊತ್ತದ ಹಣವನ್ನು ಬೆಂಕಿಯಲ್ಲಿ ಸುಟ್ಟಿದಾದರೂ ಏನು ಕಾರಣ ಎನ್ನುವುದನ್ನು ತಿಳಿಯೋಣ ಬನ್ನಿ.
ವಾಸ್ತವವಾಗಿ ಇತ್ತೀಚಿನ ದಿನಗಳಲ್ಲಿ ರಾಜಸ್ಥಾನದಲ್ಲಿ ಭ್ರ ಷ್ಟಾ ಚಾ ರ ನಿಗ್ರಹ ದಳವು ತನಗೆ ಅನುಮಾನ ಬಂದಂತಹ, ಭ್ರ ಷ್ಟ ಅಧಿಕಾರಿಗಳೆಂದು ದೂರು ಬಂದಿರುವಂತಹ ಅಧಿಕಾರಿಗಳ ಮನೆಗಳ ಮೇಲೆ ದಾ ಳಿ ಯನ್ನು ನಡೆಸುತ್ತಿದೆ. ಇದೇ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಸಿರೋಹಿ ಯನ್ನು ತಲುಪಿದ ವಿಷಯವನ್ನು ಕೇಳಿದಾಗ ಇಲ್ಲಿ ಕೂಡಾ ಹಲವು ಭ್ರ ಷ್ಟ ಅಧಿಕಾರಿಗಳಿಗೆ ಎದೆಯಲ್ಲಿ ಒಂದು ನಡುಕ ಹುಟ್ಟಿಕೊಂಡಿದೆ. ಅನೇಕರಿಗೆ ಇದು ಆಶ್ಚರ್ಯ ಕೂಡಾ ಆಗಿದೆ. ಸಿರೋಹ ಜಿಲ್ಲೆಯ ಪಿಂಡ್ ಬಾರಾತ್ ತಹಸೀಲ್ ನ ತಹಸಿಲ್ದಾರರು ಎಸಿಬಿ ಅಧಿಕಾರಿಗಳು ತಮ್ಮ ಮನೆಗೆ ಬರುವುದನ್ನು ನೋಡಿದ ಕೂಡಲೇ ಮನೆಯ ಬಾಗಿಲನ್ನು ಮುಚ್ಚಿ ತನ್ನ ಕೆಲಸ ಆರಂಭಿಸಿದ್ದಾರೆ.
ಎಸಿಬಿ ಅಧಿಕಾರಿಗಳು ಬಹಳ ಹೊತ್ತು ತಹಸೀಲ್ದಾರ್ ಬಾಗಿಲನ್ನು ತಟ್ಟಿದ್ದಾರೆ, ಮನೆಯ ಬಾಗಿಲನ್ನು ತೆರೆಯುವಂತೆ ತಹಸಿಲ್ದಾರ್ ಅವರನ್ನು ಪದೇ ಪದೇ ಆಗ್ರಹಿಸಿದ್ದಾರೆ. ಆದರೆ ತಹಸೀಲ್ದಾರ್ ಮಾತ್ರ ಅಧಿಕಾರಿಗಳ ಮಾತಿಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ನೀಡದೆ ಸುಮ್ಮನಾಗಿದ್ದಾರೆ. ಆಗ ಅನುಮಾನಗೊಂಡು ಒಳಗಡೆ ಆತ ಏನು ಮಾಡುತ್ತಿದ್ದಾನೆ ಎಂಬುದನ್ನು ನೋಡುವ ಪ್ರಯತ್ನವನ್ನು ಮಾಡಿದಾಗ, ಎಲ್ಲರೂ ಒಂದು ಕ್ಷಣ ಶಾ ಕ್ ಆಗಿದ್ದಾರೆ. ಕಾರಣ ಅಡುಗೆಮನೆಯಲ್ಲಿ ಗ್ಯಾಸ್ ಸ್ಟವ್ ಹೊತ್ತಿಸಿ ತಹಸೀಲ್ದಾರ್ ಲಕ್ಷ ಲಕ್ಷ ರೂಪಾಯಿಗಳ ನೋಟುಗಳ ಕಂತೆ ಯನ್ನು ಸುಡುತ್ತಿದ್ದರೆ, ಅವರ ಪತ್ನಿ ಈ ಕೆಲಸದಲ್ಲಿ ಅವರಿಗೆ ನೆರವನ್ನು ನೀಡುತ್ತಿದ್ದರು ಎನ್ನಲಾಗಿದೆ.
ತಹಸಿಲ್ದಾರ್ ಕಲ್ಪೇಶ್ ಜೈನ್ ಅವರು ನೆಲ್ಲಿ ತೊಗಟೆಯ ಗುತ್ತಿಗೆ ಗಾಗಿ ದೊಡ್ಡ ಮೊತ್ತದ ಲಂಚದ ಬೇಡಿಕೆಯನ್ನು ಇಟ್ಟಿದ್ದರು ಎನ್ನುವ ಮಾಹಿತಿ ಎಸಿಬಿ ಅಧಿಕಾರಿಗಳಿಗೆ ತಲುಪಿದೆ. ಈ ವಿಷಯದ ಕುರಿತಾಗಿ ಅಧಿಕಾರಿಗಳು ಸಕ್ರಿಯರಾಗಿದ್ದು ತನಿಖೆ ಆರಂಭಿಸಿದ್ದಾರೆ. ಆಗ ಎಸಿಬಿ ತನ್ನ ಯೋಜನೆಯ ಭಾಗವಾಗಿ ಕಂದಾಯ ಅಧಿಕಾರಿ ಪರ್ಬತ್ ಸಿಂಗ್ ಒಂದು ಲಕ್ಷ ರೂಪಾಯಿ ಲಂಚ ಪಡೆಯುವಾಗಲೇ ಹಿಡಿದಿದ್ದಾರೆ. ಇದಾದ ನಂತರ ಎಸಿಬಿ ಅಧಿಕಾರಿಗಳು ಪರ್ಬತ್ ಸಿಂಗ್ ನೀಡಿದ ಮಾಹಿತಿಯ ಅನುಸಾರವಾಗಿ ಆತನ ಜೊತೆಗೆ ಕಲ್ಪೇಶ್ ಜೈನ್ ಅವರ ಮನೆಯನ್ನು ತಲುಪಿದ್ದಾರೆ. ಆದರೆ ಅಧಿಕಾರಿಗಳು ಬಂದಿದ್ದನ್ನು ನೋಡಿದ ಕೂಡಲೇ ತಹಸಿಲ್ದಾರ್ ಕಲ್ಪೇಶ್ ಜೈನ್ ಮನೆಯ ಬಾಗಿಲನ್ನು ಹಾಕಿ ನೋಟುಗಳನ್ನು ಸುಡಲು ಓಡಿದ್ದಾರೆ.
ವಿಡಿಯೋ ನೋಡಿ
लाखों की नोटों की गड्डियाँ गैस चूल्हे पर रख कर किसी को जलाते देखा है कभी ? राजस्थान के सिरोही में घूस के आरोपी तहसीलदार ने यही किया क्यूँकि ACB की टीम घर के बाहर पहुंची हुई थी pic.twitter.com/QrfHc1JRdV
— Samir Abbas (@TheSamirAbbas) March 25, 2021
ನೋಟುಗಳನ್ನು ಬೆಂಕಿಯಲ್ಲಿ ಸುಡುವಾಗ ಮನೆಯಿಂದ ಹೊರಗೆ ಬಂದ ಹೊಗೆ ಮತ್ತು ವಾಸನೆಯನ್ನು ಕಂಡು ಅಧಿಕಾರಿಗಳು ಒಳಗೆ ಏನಾಗುತ್ತಿದೆ ಎಂದು ನೋಡಿದಾಗ, ನೋಟುಗಳನ್ನು ಸುಡುತ್ತಿರುವ ವಿಷಯವನ್ನು ನೋಡಿ ಶಾ ಕ್ ಆಗಿ ಕೂಡಲೇ ತಡ ಮಾಡದೇ ಮನೆಯ ಬಾಗಿಲನ್ನು ಮುರಿದು ಒಳಗಡೆ ಪ್ರವೇಶ ಮಾಡಿದ್ದಾರೆ. ಅಧಿಕಾರಿಗಳು ಮನೆಯೊಳಗೆ ಬರುವ ವೇಳೆಗೆ ತಹಸಿಲ್ದಾರ್ ಮತ್ತು ಅವರ ಪತ್ನಿ ಇಬ್ಬರೂ ಸೇರಿಕೊಂಡು ಸುಮಾರು 20 ಲಕ್ಷ ರೂಪಾಯಿಗಳಲ್ಲಿ ಬಹಳಷ್ಟು ನೋಟುಗಳನ್ನು ಸುಟ್ಟು ಹಾಕಿದ್ದರು. ಇದರ ಹೊರತಾಗಿಯೂ ಎಸಿಬಿ ಅಧಿಕಾರಿಗಳು ಒಂದೂವರೆ ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ತಹಸಿಲ್ದಾರ್ ಕಲ್ಲೇಶ್ ಜೈನ್ ಅವರನ್ನು ಬಂ ಧಿ ಸಿದ್ದು, ಎಸಿಬಿ ಅಧಿಕಾರಿಗಳು ಅವರ ಒಟ್ಟು ಆಸ್ತಿಯ ತನಿಖೆಯನ್ನು ನಡೆಸಿದ್ದಾರೆ.