ಕಾಯ್ದು ಕುಳಿತ ಆಪತ್ತು ಯಾವಾಗ? ಎಲ್ಲಿಂದ? ಯಾವ ರೂಪದಲ್ಲಿ? ಬಂದು ಅಪ್ಪಳಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ! ಈ ವಿಡಿಯೋ ನೋಡಿದಾಗ ತಿಳಿಯುತ್ತದೆ.

ಇಂದಿನ ಯುಗದಲ್ಲಿ ರೋಡ್ ಮೇಲೆ ನಡೆಯುವ ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ. ದಿನದಿಂದ ದಿನಕ್ಕೆ ವಾಹನಗಳನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಸ್ತೆಯ ಮೇಲೆ ವಾಹನಗಳ ಓಡಾಟ ಹದ್ದು ಮೀರಿದೆ. ವಾಹನ ನಡೆಸುವಾಗ ನಾವು ಎಷ್ಟೇ ಕಾಳಜಿ ತೆಗೆದುಕೊಂಡರೂ ನಮ್ಮ ಅದೃಷ್ಟ ನಮ್ಮ ಕೈಯಲ್ಲಿಲ್ಲ.

ಪ್ರವಾಸ ಮಾಡುತ್ತಿರುವ ಸಮಯದಲ್ಲಿ ಪ್ರತಿಯೊಬ್ಬರು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾರೆ. ಎಷ್ಟೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡರೂ ಸಹ ಕೆಲವೊಮ್ಮೆ ಆಕಸ್ಮಿಕವಾಗಿ ಅಪಘಾತಗಳು ಸಂಭವಿಸಿ ಪ್ರಾಣ ಹಾನಿ ಉಂಟಾಗುತ್ತದೆ. ಆದ್ದರಿಂದ ನಾವು ನಮ್ಮ ಜೀವಕ್ಕೆ ಹೆದರಿ ಎಷ್ಟು ಕಾಳಜಿ ತೆಗೆದುಕೊಂಡರೂ ಅದು ಕಡಿಮೆಯೇ ಎನ್ನಬಹುದು.

ಇದೇ ರೀತಿಯ ವಿಚಿತ್ರ ವಾಹನ ಅಪಘಾತದ ವಿಡಿಯೋ ಒಂದು ನಿಮ್ಮ ಮುಂದೆ ತಂದಿರುವೆವು. ಪ್ರಸ್ತುತ ವಿಡಿಯೋ ಎಲ್ಲಿಯದು ಎಂಬುದು ತಿಳಿದುಬಂದಿಲ್ಲ. ಈ ವಿಡಿಯೋದಲ್ಲಿ ಕಾರು ತನ್ನಷ್ಟಕ್ಕೆ ತಾನು ಬರುತ್ತಿದೆ. ಅದರ ಎದುರಿನಿಂದ ಬರುವ ಟ್ರಕ್ಕಿನ ದೊಡ್ಡದಾದ ವ್ಹೀಲ್ ಒಂದು ಆಕಸ್ಮಿಕವಾಗಿ ಟ್ರಕ್ಕಿನಿಂದ ಬೇರೆಯಾಗಿ ಎದುರಿಗೆ ಬರುವ ಕಾರಿನ ಬಾನೆಟ್ಟಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಅಷ್ಟಕ್ಕೂ ಈ ಅಪಘಾತದಲ್ಲಿ ಪ್ರಾಣ ಹಾನಿ ಏನು ಆಗಿಲ್ಲ. ಆದರೆ ಕಾರಿನ ಮುಂದಿನ ಭಾಗ ಮಾತ್ರ ಪೀಸ್ ಪೀಸ್ ಆಗಿದೆ.

ನೋಡಿ ಈ ದೃಶ್ಯ ವಿಡಿಯೋದಲ್ಲಿ…

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ vipcars_08 ಈ ಹೆಸರಿನಿಂದ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ 2 ಲಕ್ಷಕ್ಕಿಂತ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.