ಕಾರಿನಲ್ಲಿಟ್ಟ ನೀರಿನ ಬಾಟಲಿ ತೆಗೆದುಕೊಂಡಿತು ಇಂಜಿನಿಯರ್ ನ ಜೀವ! ಮನ ಕಲಕುವ ಅಪಘಾತ…
ಅನೇಕ ಸಲ ತುಂಬಾ ಚಿಕ್ಕ ಚಿಕ್ಕ ವಸ್ತುಗಳೇ ನಮ್ಮ ಜೀವಕ್ಕೆ ಕುತ್ತು ಹೇಗೆ ತರುತ್ತವೆ ಎಂಬುದು ಹೇಳಲು ಸಾಧ್ಯವಿಲ್ಲ. ಮನುಷ್ಯ ಕೆಲವೊಂದು ಚಿಕ್ಕ ಪುಟ್ಟ ವಿಷಯಗಳ ಕಡೆಗೆ ಗಮನ ನೀಡುವದೇ ಇಲ್ಲ. ಆದರೆ ಆ ಚಿಕ್ಕಪುಟ್ಟ ವಸ್ತುಗಳೇ ನಮ್ಮ ಜೀವಕ್ಕೆ ಅ#ಪಾಯವನ್ನು ತರುತ್ತವೆ. ಅವುಗಳಿಂದ ದು#ರ್ಘಟನೆಗಳು ಸಂಭವಿಸಿದಾಗ ಮಾತ್ರ ನಮ್ಮ ಕಣ್ಣುಗಳು ತೆರೆಯುತ್ತವೆ. ಅಷ್ಟೊತ್ತಿಗೆ ಘಟನೆ ನಡೆದು ಹೋಗಿರುತ್ತದೆ. ಜೀವಿತ ಹಾನಿಯೂ ಆಗಿ ಬಿಟ್ಟಿರುತ್ತದೆ.
ಹೇಗೆ ನೋಡಿ…
ದೆಹಲಿಯ ಹತ್ತಿರದ ಗ್ರೇಟರ್ ನೋಯ್ಡಾ ಹತ್ತಿರ ಒಂದು ಅ#ಪಘಾತ ಸಂಭವಿಸಿದೆ. ಈ ಅ#ಪಘಾತದಲ್ಲಿ ಅಭಿಷೇಕ್ ಝಾ ಹೆಸರಿನ ಇಂಜಿನಿಯರ್ ನೊಬ್ಬ ತನ್ನ ಮಿತ್ರನ ಜೊತೆಗೆ ಗ್ರೇಟರ್ ನೋಯ್ಡಾಗೆ ಹೋಗುತ್ತಿದ್ದ. ಆಗ ಆತನ ಕಾರು ರಸ್ತೆಯ ಬದಿಗೆ ನಿಂತ ಟ್ರಕ್ಕಿಗೆ ಹೋಗಿ ಅಪ್ಪಳಿಸಿದೆ. ಈ ಅ#ಪಘಾತದಲ್ಲಿ ಆತನು ಸ್ಥಳದಲ್ಲಿಯೇ ಮರಣಿಸಿದ್ದಾನೆ. ಆತನ ಮಿತ್ರ ಗಂಭೀರವಾಗಿ ಗಾಯಗೊಂಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಈ ಅ#ಪಘಾತಕ್ಕೆ ಮುಖ್ಯ ಕಾರಣ ನೀರಿನ ಬಾಟಲಿ ಎಂದು ಸಾಬೀತಾಗಿದೆ.
ಪೊಲೀಸರು ನೀಡಿದ ವರದಿಯ ಪ್ರಕಾರ, ಅಭಿಷೇಕ್ ಕಾರು ಚಲಾಯಿಸುತ್ತಿದ್ದ. ಆಗ ಕಾರಿನ ಹಿಂದುಗಡೆ ಇಟ್ಟಿರುವ ನೀರಿನ ಬಾಟಲ್ ಸರಿದು ಅಭಿಷೇಕ್ ನ ಕಾಲಿನ ಕೆಳಗೆ ಬಂದಿದೆ. ಟ್ರಕ್ ಸಮೀಪಿಸುತ್ತಿದ್ದಂತೆ ಅಭಿಷೇಕ್ ಬ್ರೇಕ್ ದಬಾಯಿಸಿದ್ದಾನೆ. ಆದರೆ ದುರ#ದೃಷ್ವಶಾತ್ ನೀರಿನ ಬಾಟಲ್ ಬ್ರೇಕ್ ಪ್ಯಾಡಲ್ ಕೆಳಗೆ ಬಂದು ಸಿಕ್ಕಿದ್ದರಿಂದ ಬ್ರೇಕ್ ಸರಿಯಾಗಿ ತಾಗದ ಕಾರಣ ಕಾರು ಜೋರಾಗಿ ಟ್ರಕ್ಕಿಗೆ ಅಪ್ಪಳಿಸಿದೆ. ಈ ಅ#ಪಘಾತದಲ್ಲಿ ಅಭಿಷೇಕ್ ತನ್ನ ಪ್ರಾಣವನ್ನು ಕಳೆದು ಕೊಂಡಿದ್ದಲ್ಲದೆ ಮಿತ್ರನು ಗಂ#ಭೀರವಾಗಿ ಗಾ#ಯಗೊಂಡಿದ್ದಾನೆ.

ಮಿತ್ರರೇ, ಕಾಲ ಮಿಂಚಿ ಹೋಗಿರುತ್ತದೆ. ಆದರೆ ಆ ಸಮಯ ಕಲಿಸಿದ ಪಾಠದಿಂದ ಬೇರೆಯವರಾದರೂ ಪಾಠ ಕಲಿತು ಕೊಳ್ಳುವದರಿಂದ ಮಂದೆ ಆಗುವ ಅ#ನಾಹುತಗಳನ್ನು ತಪ್ಪಿಸಿಕೊಳ್ಳಬಹುದು, ಅಲ್ವಾ?