ಕಾರು ಖರೀದಿಗೆ ಬಂಪರ್ ಆಫರ್: ಮಹೀಂದ್ರಾ ಕಾರಿನ ಮೇಲೆ ಸಿಗಲಿದೆ 3 ಲಕ್ಷದ ವರೆಗಿನ ಡಿಸ್ಕೌಂಟ್!

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಯಾಗಿರುವ ಮಹಿಂದ್ರ ಮಾರ್ಚ್ ತಿಂಗಳಲ್ಲಿ ತನ್ನ ವಾಹನಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಕಾರು ಖರೀದಿ ಮಾಡಲು ಆಸಕ್ತಿಯಿರುವವರಿಗೆ ಇದೊಂದು ಭರ್ಜರಿ ಅವಕಾಶವಾಗಿದೆ ಎನ್ನಬಹುದಾಗಿದೆ. ಮಹೀಂದ್ರಾ ತನ್ನ ವಿಶೇಷವಾದ ಕಾರುಗಳ ಮೇಲೆ ನೀಡಿರುವ ರಿಯಾಯಿತಿ ಗಳು ಕಾರು ಕೊಳ್ಳುವವರಿಗೆ ಒಂದು ಅತ್ಯುತ್ತಮವಾದ ಅವಕಾಶ ಇದಾಗಿದೆ ಎಂದಿದ್ದಾರೆ. ಇನ್ನು ಈ ವಿಶೇಷ ಆಫರ್ ನಲ್ಲಿ ಮಹೀಂದ್ರಾ ಎಕ್ಸ್‌ಯುವಿ 300, ಬೊಲೆರೊ, ಮೊರಾಜೋ, ಸ್ಕಾರ್ಪಿಯೋ, ಅಲ್ತುರಾಸ್ ಜಿ 4 ಕಾರುಗಳ ಮೇಲೆ 3 ಲಕ್ಷ ರೂಪಾಯಿಗಳವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಹಾಗಿದ್ದರೆ ಈ ಕಾರುಗಳನ್ನು ಖರೀದಿ ಮಾಡುವುದಾದರೆ, ನೀವು ಖರೀದಿಸುವ ಕಾರಿನ ಮೇಲೆ ಎಷ್ಟರಮಟ್ಟಿನ ರಿಯಾಯಿತಿಯನ್ನು ಪಡೆಯಬಹುದು ಎಂಬುದನ್ನು ತಿಳಿಯಲು ಈ ಮಾಹಿತಿ ಬಹಳ ಉಪಯೋಗಕಾರಿಯಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ: ಮಹಿಂದ್ರ ಸ್ಕಾರ್ಪಿಯೋ ಹೆಚ್ಚು ಮಾರಾಟವಾಗುವ ಎಸ್ಯುವಿ ಕಾರು. ಮಹೀಂದ್ರಾ ಸ್ಕಾರ್ಪಿಯೋ ಖರೀದಿ ಮಾಡುವುದರಿಂದ ನಿಮಗೆ 7042 ರೂಪಾಯಿಗಳ ಡಿಸ್ಕೌಂಟ್ ಸಿಗುತ್ತದೆ. ಹಾಗೂ 15000 ಸಾವಿರ ರೂಗಳ ಎಕ್ಸ್ಚೇಂಜ್ ಬೋನಸ್, 4500 ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್, ಇದರ ಜೊತೆಗೆ ಹತ್ತು ಸಾವಿರ ರೂಪಾಯಿಗಳ ಮೌಲ್ಯದ ಪರಿಕರಗಳು ಲಭಿಸುತ್ತವೆ. ಈ ಖರೀದಿಯಿಂದ ನಿಮಗೆ ಒಟ್ಟು 36,042 ರೂಪಾಯಿಗಳ ಉಳಿತಾಯವಾಗಲಿದೆ. ಇನ್ನು ಸ್ಕಾರ್ಪಿಯೊ ಕಾರಿನ ಬೆಲೆಯ ಬಗ್ಗೆ ಮಾತನಾಡಿದರೆ ಇದರ ಬೆಸ್ಟ್ ವೆರಿಯಂಟ್ ಕಾರಿನ ಬೆಲೆ 11 ಲಕ್ಷ 99 ಸಾವಿರ ರೂ.ಗಳಾಗಿದ್ದರೆ, ಟಾಪ್ ವೆರಿಯಂಟ್ ಬೆಲೆ 16,52000 ರೂಗಳಾಗಿದೆ.

ಮಹೇಂದ್ರ ಎಸ್ ಯು ವಿ 300 : ಎಸ್ ಯು ವಿ ಕಾರುಗಳಲ್ಲಿ ಸುರಕ್ಷಿತವಾದ ಕಾರು ಎನ್ನಲಾಗಿದೆ. ಗ್ಲೋಬಲ್ ಎನ್ ಸಿ ಎ ಪಿ ಕಾರ್ ಕ್ರಾಷ್ ಟೆಸ್ಟ್ ನಲ್ಲಿ ಈ ಕಾರು ಫೈವ್ ಸ್ಟಾರ್ ಗಳನ್ನು ಪಡೆದುಕೊಂಡಿದೆ. ಅದೇ ಕಾರಣದಿಂದ ಸುರಕ್ಷತೆಯ ವಿಚಾರದಲ್ಲಿ ಜನರಿಗೆ ಈ ಕಾರಿನ ಮೇಲೆ ಮೊದಲಿಗಿಂತ ಹೆಚ್ಚಿನ ನಂಬಿಕೆ ಮೂಡಿದೆ. ಈ ಕಾರಿನ ಮೇಲೆ ಪೆಟ್ರೋಲ್ ವೆರಿಯಂಟ್ ಗೆ 5000 ರೂಪಾಯಿಗಳ ಕ್ಯಾಶ್ ಬ್ಯಾಕ್ ಹಾಗೂ ಡೀಸೆಲ್ ವೆರಿಯಂಟ್ ಕಾರಿಗೆ 10,000 ರೂಗಳ ಕ್ಯಾಶ್ ಬ್ಯಾಕ್ ನೀಡಲಾಗಿದೆ. 25,000 ರೂಗಳ ಎಕ್ಸ್‌ಚೇಂಜ್ ಬೋನಸ್, ನಾಲ್ಕೂವರೆ ಸಾವಿರ ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್, 5000 ರೂಗಳ ಪರಿಕರಗಳು ದೊರೆಯಲಿದೆ. ಇದರ ಬೇಸ್ ವೇರಿಯಂಟ್ ಕಾರಿನ ಬೆಲೆ 7 ಲಕ್ಷ 95 ಸಾವಿರ ರೂಪಾಯಿಗಳಾಗಿದ್ದಾರೆ,ಟಾಪ್ ವೆರಿಯಂಟ್ ತಲೆ 12 ಲಕ್ಷ 55 ಸಾವಿರ ರುಪಾಯಿಗಳಾಗಿದೆ..

ಮಹೇಂದ್ರ ಬುಲೆರೋ: ಈ ಕಾರು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಜನರು ಇಷ್ಟಪಡುವ ಕಾರಾಗಿದೆ. ಈ ಕಾರಿನ ಮೇಲೆ ಮೂರು ಸಾವಿರದ ಐನೂರು ರೂಪಾಯಿಗಳ ಕ್ಯಾಶ್ ಡಿಸ್ಕೌಂಟ್, 10 ಸಾವಿರ ರೂ.ಗಳ ಎಕ್ಸ್‌ಚೇಂಜ್ ಬೋನಸ್, ನಾಲ್ಕು ಸಾವಿರ ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ಸಿಗುತ್ತದೆ. ಈ ಕಾರಿನ ಬೇಸ್ ವೇರಿಯೆಂಟ್ ಬೆಲೆ 8 ಲಕ್ಷ 17 ರೂಪಾಯಿ ಗಳಾಗಿದ್ದು, ಟಾಪ್ ವೆರಿಯಂಟ್ ಕಾರಿನ ಬೆಲೆ 9 ಲಕ್ಷ 14 ಸಾವಿರ ರೂಪಾಯಿಗಳಾಗಿದೆ.

ಮಹೀಂದ್ರಾ ಮರಾಜೋ : ಮಹೀಂದ್ರಾದ ಪ್ರಸಿದ್ಧ ಎಂಪಿವಿ ಮರಾಜೋ ಖರೀದಿಯ ಮೇಲೂ ನೀವು ಭಾರಿ ಉಳಿತಾಯ ಮಾಡಬಹುದು. ಮಾರ್ಚ್ ತಿಂಗಳಲ್ಲಿ ಈ ಎಂಪಿವಿಯ ಎಂ 2 ಮಾಡೆಲ್ ಮೇಲೆ ರೂ. 20,000 ಕ್ಯಾಶ್ ಡಿಸ್ಕೌಂಟ್, ಅದೇ ಸಮಯದಲ್ಲಿ ಅದರ ಎಂ 4 ಮತ್ತು ಎಂ 6 ಮಾಡೆಲ್ ಗಳ ಮೇಲೆ 15,000 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ 15 ಸಾವಿರ ರೂ.ಗಳ ಎಕ್ಸ್‌ಚೇಂಜ್ ಬೋನಸ್ ಮತ್ತು 6,000 ರೂ.ಗಳ ಕಾರ್ಪೊರೇಟ್ ರಿಯಾಯಿತಿಯನ್ನು ಸಹಾ ನೀಡಲಾಗುತ್ತಿದೆ. ಅದೇ ಸಮಯದಲ್ಲಿ, ಅದರ ಬೇಸ್ ವೇರಿಯಂಟ್ ಬೆಲೆ 11 ಲಕ್ಷ 64 ಸಾವಿರ ರೂಪಾಯಿಗಳು ಮತ್ತು ಟಾಪ್ ವೆರಿಯಂಟ್ ಬೆಲೆ 13 ಲಕ್ಷ 79 ಸಾವಿರ ರೂಪಾಯಿಗಳಾಗಿದೆ.

ಮಹೀಂದ್ರಾ ಅಲ್ಟುರಾದ್ ಜಿ 4: ಎಸ್‌ಯುವಿ ಅಲ್ಟುರಾಸ್ ಜಿ 4 ಗೆ ಹೆಚ್ಚಿನ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಕಾರನ್ನು ಖರೀದಿ ಮಾಡಿದರೆ 3 ಲಕ್ಷ ರೂಪಾಯಿಗಳನ್ನು ಉಳಿಸುವ ಅವಕಾಶವಿದೆ. ಈಗ ಕಂಪನಿಯು ಈ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿದ್ದು, ಈ ಕೊಡುಗೆ ಕಾರು ಸ್ಟಾಕ್‌ ಇರುವ ತನಕ ಮಾತ್ರವೇ ಲಭ್ಯ ಇರುತ್ತದೆ. ಆದ ಕಾರಣ ಸ್ಟಾಕ್ ಬಗ್ಗೆ ತಿಳಿಯಲು ನಿಮ್ಮ ಹತ್ತಿರದ ಮಾರಾಟಗಾರರನ್ನು ನೀವು ಸಂಪರ್ಕಿಸಬೇಕಾಗುತ್ತದೆ. ಇದರ ಬೇಸ್ ವೇರಿಯಂಟ್ ನ ಬೆಲೆ 28 ಲಕ್ಷ 73 ಸಾವಿರ ರೂಪಾಯಿ ಮತ್ತು ಟಾಪ್ ವೆರಿಯಂಟ್ ನ ಬೆಲೆ 31 ಲಕ್ಷ 73 ಸಾವಿರ ರೂಪಾಯಿಗಳಾಗಿದೆ.