ಕಾಲಿಗೆ ಕಪ್ಪು ದಾರವನ್ನು ಯಾಕೆ ಕಟ್ಟಿಕೊಳ್ಳುತ್ತಾರೆ? ಇದರ ಲಾಭವನ್ನು ತಿಳಿದ ನಂತರ ನೀವೂ ಕಟ್ಟಿಕೊಳ್ಳುತ್ತೀರಿ…
ನಮ್ಮಲ್ಲಿ ಅನೇಕ ಜನರು ಕಪ್ಪು ದಾರವನ್ನು ಉಪಯೋಗಿಸುತ್ತಾರೆ. ಕೆಲವರು ಹೆಚ್ಚಾಗಿ ಕಾಲಲ್ಲಿ, ಕೊರಳಲ್ಲಿ ತೊಟ್ಟುಕೊಂಡರೆ ಇನ್ನು ಕೆಲವರು ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ. ಈ ದಾರವನ್ನು ಕಟ್ಟಿಕೊಳ್ಳುವುದರ ಹಿಂದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬೇರೆ ಬೇರೆ ಕಾರಣಗಳಿವೆ. ಕೆಲವರು ಈ ಕಪ್ಪು ದಾರವನ್ನು ಫ್ಯಾಶನ್ ಎಂದು ತೊಟ್ಟುಕೊಂಡರೆ ಇನ್ನು ಕೆಲವರು ವಿಶೇಷ ಉದ್ದೇಶ ಮತ್ತು ಗುರಿಗಳನ್ನು ಪೂರ್ಣ ಮಾಡಿಕೊಳ್ಳಲು ಕಟ್ಟಿಕೊಳ್ಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕಪ್ಪುದಾರ ತುಂಬಾ ಮಹತ್ವದ್ದಾಗಿದೆ ಎಂದು ತಿಳಿಯಲಾಗುತ್ತದೆ. ಇದರಿಂದ ಜೀವನವು ಸಂತೋಷದಿಂದ ಕೂಡಿರುವದರ ಜೊತೆಗೆ ಸಮೃದ್ಧಿಯನ್ನು ಪಡೆಯುತ್ತದೆ ಮತ್ತು ಇದು ಅನೇಕ ಸಂಕಟಗಳಿಂದ ಪಾರು ಮಾಡುತ್ತದೆ.
# ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕಪ್ಪುದಾರ ತೊಟ್ಟುಕೊಳ್ಳುವದರಿಂದ ಮನುಷ್ಯನಲ್ಲಿ ಮನೆ ಮಾಡಿದ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಜೊತೆಗೆ ಆ ವ್ಯಕ್ತಿಯು ಅನೇಕ ಸಂಕಟಗಳಿಂದ ಪಾರಾಗುತ್ತಾನೆ. ಈ ಕಪ್ಪು ದಾರಿನ ಇನ್ನು ಅನೇಕ ಲಾಭಗಳು ಯಾವವು ಎಂಬುದನ್ನು ನೋಡಿ…
# ಕಪ್ಪು ಧಾರವು ದೃಷ್ಟಿ ತಗಲುವದರಿಂದ ಸಂರಕ್ಷಣೆಯನ್ನು ನೀಡುತ್ತದೆ. ಯಾವ ಹುಡುಗಿಯರಿಗೆ ಮತ್ತು ಚಿಕ್ಕಮಕ್ಕಳಿಗೆ ಮೇಲಿಂದ ಮೇಲೆ ದೃಷ್ಟಿ ತಾಗುತ್ತದೆ ಅಂಥವರು ಕಪ್ಪು ದಾರವನ್ನು ಅವಶ್ಯವಾಗಿ ತೊಟ್ಟುಕೊಳ್ಳಬೇಕು.
# ಕುಂಡಲಿಯಲ್ಲಿ ಶನಿಗ್ರಹವು ಅಶುಭ ಸ್ಥಿತಿಯಲ್ಲಿದ್ದರೆ ಕಾಲಿಗೆ ಕಪ್ಪು ದಾರವನ್ನು ಧರಿಸಿಕೊಳ್ಳಬೇಕು. ಇದರಿಂದ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಆಗುವ ಶನಿಯ ನಕಾರಾತ್ಮಕ ಪ್ರಭಾವದಿಂದ ಬಚಾವಾಗಲು ಸಾಧ್ಯವಾಗುತ್ತದೆ. ಇಲ್ಲವಾದರೆ ಶನಿಯ ಕೆಟ್ಟ ದೃಷ್ಟಿ ಹಾನಿಯನ್ನು ಮಾಡುತ್ತದೆ.
# ಯಾರಿಗೆ ವ್ಯವಸಾಯದಲ್ಲಿ ಮೇಲಿಂದ ಮೇಲೆ ಆರ್ಥಿಕ ಹಾನಿಯಾಗುತ್ತಿದೆಯೋ ಅಂಥವರು ಕಾಲಿನಲ್ಲಿ ಕಪ್ಪು ದಾರವನ್ನು ಧರಿಸಿಕೊಂಡಾಗ ಲಾಭ ನಿಶ್ಚಿತ.
# ಒಂದು ವೇಳೆ ಕುಂಡಲಿಯಲ್ಲಿ ರಾಹು-ಕೇತು ದುರ್ಬಲವಾಗಿದ್ದರೆ ಕಾಲಲ್ಲಿ ಕಪ್ಪು ದಾರವನ್ನು ಧರಿಸಿಕೊಳ್ಳಬೇಕು. ಇದು ನಿಮಗೆ ಅನೇಕ ಪ್ರಕಾರದ ಸಂಕಟಗಳಿಂದ ಉಳಿಸುತ್ತದೆ. ರಾಹು ಮತ್ತು ಕೇತು ಗ್ರಹಗಳ ನೆರಳು ಅಶುಭವಾಗಿರುತ್ತದೆ. ಇವುಗಳಿಂದ ಜೀವನವೇ ನಷ್ಟವಾಗುತ್ತದೆ.
ಈ ರೀತಿಯಾಗಿ ತೊಟ್ಟು ಕೊಳ್ಳಿ ಕಪ್ಪು ದಾರ –
* ಕಪ್ಪು ದಾರವನ್ನು ಶನಿವಾರದಂದು ಧರಿಸಿಕೊಳ್ಳಿ.
* ಕಪ್ಪು ದಾರವನ್ನು ಯಾವಾಗಲೂ ಶಿವನ ಮಂದಿರದಲ್ಲಿ ಹೋದ ನಂತರವೇ ಧರಿಸಿಕೊಳ್ಳಿ. ಕಾಲಲ್ಲಿ ಕಪ್ಪು ದಾರವನ್ನು ಧರಿಸಿ ಕೊಂಡ ನಂತರ ಶನಿದೇವನ ಮಂತ್ರವನ್ನು ಕನಿಷ್ಠ 21 ಬಾರಿಯಾದರೂ ಜಪಿಸಿ.
* ಕಪ್ಪು ದಾರವನ್ನು ಧರಿಸಿಕೊಂಡ ನಂತರ ಅದರ ಜೊತೆಗೆ ಬೇರೆ ಯಾವ ಬಣ್ಣದ ದಾರವನ್ನು ಸಹ ಧರಿಸಿಕೊಳ್ಳಬೇಡಿ.
* ಕಪ್ಪು ದಾರವನ್ನು ಧರಿಸಿ ಕೊಂಡ ನಂತರ ದಿನನಿತ್ಯ ಗಾಯತ್ರಿ ಮಂತ್ರವನ್ನು 11 ಬಾರಿಯಾದರೂ ಜಪಿಸಬೇಕು. ಇದರಿಂದ ಅನೇಕ ರೀತಿಯಲ್ಲಿ ಲಾಭವಾಗುವದು ನಿಶ್ಚಿತ.