ಕಾಲೇಜಿನಲ್ಲಿ ಪ್ರೊಜೆಕ್ಟ್ ಮಾಡುವಾಗ ಹೊಳೆಯಿತು ಉದ್ಯೋಗದ ಹೊಸ ಐಡಿಯಾ, ಈಗಿನ ಸಂಪಾದನೆ ಕೋಟಿಗಳಲ್ಲಿ!

ರೈತರು ಇತ್ತೀಚೆಗೆ ಕೃಷಿಯಲ್ಲಿ ಅನೇಕ ಆಧುನಿಕ ಪ್ರಕಾರದ ಪ್ರಯೋಗಗಳನ್ನು ಮಾಡಿ ಲಕ್ಷಾವಧಿ ರೂಪಾಯಿಗಳನ್ನು ಗಳಿಸುವುದು ನಾವು ನೋಡಿದ್ದೇವೆ. ಈ ಲೇಖನದಲ್ಲಿ ಎರೆಹುಳ ಸಹಾಯದಿಂದ ಅಥವಾ ಕೆಂಪು ವಿಗ್ಲರ್ ಹಾಗೂ ಬಿಳಿ ಹುಳಗಳ ಸಹಾಯದಿಂದ ಕೃಷಿಗೆ ಬೇಕಾದ ಶಕ್ತಿವರ್ಧಕ ಗೊಬ್ಬರ ತಯಾರಿಸಿ ವರ್ಷಕ್ಕೆ 1 ಕೋಟಿ ರೂಪಾಯಿಗಳನ್ನು ಗಳಿಸುವ ತರುಣಿಯ ಪರಿಚಯ ಮಾಡಿಕೊಡಲಿದ್ದೇವೆ, ನೋಡಿ.

ಈಕೆಯ ಹೆಸರು ಸನಾ ಖಾನ್. ಯುಪೀಯ ಮೀರತ್ ನಲ್ಲಿ ವಾಸ್ತವ್ಯ. ಇವರ ಜನ್ಮ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿಯೇ ಆಯಿತು. ತಂದೆ ಲೇಡಿಜ್ ಟೇಲರ್ ಮತ್ತು ಅಜ್ಜ ಒಂದು ಗ್ಯಾರೇಜ್ ನಡೆಸುತ್ತಿದ್ದರು. ಮನೆಯವರು ಸನಾ ಡಾಕ್ಟರ್ ಆಗಬೇಕು ಎಂದುಕೊಳ್ಳುತ್ತಿದ್ದರು. ಆದರೆ ಸನಾ ಅವರು ಮೆಡಿಕಲ್ ಪರೀಕ್ಷೆಯಲ್ಲಿ ಸೆಲೆಕ್ಷನ್ ಆಗಲಿಲ್ಲ. ಆನಂತರ ಅವರು ಗಾಜಿಯಾಬಾದ್ ನಲ್ಲಿಯ ಬಿ ಟೇಕ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ದಿನಾಲು ಮೆರತ್ ನಿಂದ ಗಾಜಿಯಾಬಾದ್ ಅಪ್ಡೌನ್ ಮಾಡುತ್ತಿದ್ದರು. ಇಲ್ಲಿ ಮೂರನೆಯ ವರ್ಷದಲ್ಲಿ ಇರುವಾಗಲೇ ಕಾಲೇಜ್ ನಲ್ಲಿ ವರ್ಮ್ ಕಾಂಪೋಸ್ಟ್ ಬಗ್ಗೆ ಒಂದು ಪ್ರೊಜೆಕ್ಟ್ ಮಾಡಿದರು ಮತ್ತು ಅದರಲ್ಲಿ ಯಶಸ್ಸು ಸಾಧಿಸಿದರು.

ಈ ಪ್ರೊಜೆಕ್ಟ್ ಜೊತೆಗೆ ಅವರು ಉದ್ಯೋಗವನ್ನು ಮಾಡುವ ವಿಚಾರ ಮಾಡಿ ತನ್ನ ಸೋದರನ ಜೊತೆಗೆ ಕೂಡಿ ಕೆಲಸ ಪ್ರಾರಂಭಿಸಿದರು. SJ ಆರ್ಗೆನಿಕ್ಸ್ ಹೆಸರಿನ ಕಂಪನಿ ಶುರು ಮಾಡಿದರು. ಸರಕಾರದ ಸಹಾಯದಿಂದ ಅವರಿಗೆ ಕಾಲೇಜಿನಲ್ಲಿಯೇ ಒಂದು ರೂಮ್ ಸಿಕ್ಕಿತು. ಆಲ್ಲಿಯೆ ಅವರು ಗೊಬ್ಬರದ ನಿರ್ಮಿತಿ ಪ್ರಾರಂಭಿಸಿದರು.

27 ವರ್ಷದ ಸನಾ ಅವರ SJ ಆರ್ಗೆನಿಕ್ಸ್ ಹೆಸರಿನ ಕಂಪನಿ ಇದೆ. ಸನಾ ಅವರು ಬಿ ಟೇಕ್ ನಲ್ಲಿ ಕಲಿಯುತ್ತಿರುವಾಗ 2014 ರಲ್ಲಿ ಈ ಕಂಪನಿಯನ್ನು ಪ್ರಾರಂಭಿಸಿದರು. 7 ವರ್ಷಗಳ ಹಿಂದೆ ಪ್ರಾರಂಭಿಸಿದ ಕಂಪನಿಯ ವಾರ್ಷಿಕ ವಹಿವಾಟು ಈಗ ಕೋಟಿ ರೂಪಾಯಿಗಳನ್ನು ದಾಟಿದೆ. ಜೊತೆಗೆ 25 ಜನರಿಗೆ ಕೆಲಸವನ್ನು ನೀಡಿದ್ದಾರೆ.

ಮೊದಲಿಗೆ ಈ ಕಂಪನಿ ಜವಾಬ್ದಾರಿಯಿಂದ ನೀಗಿಸುವ ಸಲುವಾಗಿ ತುಂಬಾ ಕಷ್ಟ ಪಡಬೇಕಾಯಿತು. ಪಟ್ಟಣದಲ್ಲಿ ವಾಸ್ತವ್ಯಕ್ಕೆ ಇದ್ದುದರಿಂದ ಸೈಟ್ ಗೆ ಭೇಟಿ ನೀಡಲು 16 ಕಿಲೋಮೀಟರ್ ಗಳ ವರೆಗೆ 2 ವ್ಹೀಲರ್ ಮೇಲೆ ಹೋಗಬೇಕಾಗುತ್ತಿತ್ತು. ಜನರು ಆಕೆಗೆ ಹುಚ್ಚಿ ಎಂತಲೂ ಕರೆಯುತ್ತಿದ್ದರು. ಕಾರಣ ಪಟ್ಟಣದಿಂದ ಹಳ್ಳಿಗೆ ಬಂದು ಸೆಗಣಿಯ ಮೇಲೆ ಪ್ರಕ್ರಿಯೆ ಮಾಡಿ ಗೊಬ್ಬರ ತಯಾರಿಸುತ್ತಿದ್ದಳು.

ಈಗ ಸನಾ ಖಾನ್ ಅವರು 104 ಶಾಲೆಗಳಲ್ಲಿ ವಾರ್ಮ್ ಕಾಂಪೋಸ್ಟ್ ಸೈಟ್ ತಯಾರಿಸಿದ್ದಾರೆ. ಇದರ ಜೊತೆಗೆ ಮೇರತ್ ನಲ್ಲಿಯ ಒಂದು ಹಳ್ಳಿಯಲ್ಲಿ ಒಂದು ಎಕರೆ ಭೂಮಿಯನ್ನು ಖರೀದಿಸಿ ಅಲ್ಲಿ 300 ಟನ್ ವರೆಗೆ ಕಾಂಪೋಸ್ಟ್ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಈ ಕಂಪನಿ ಚೆನ್ನಾಗಿ ಬೆಳೆಯುತ್ತಿದ್ದು ಸದ್ಯ ವಾರ್ಷಿಕ ವಹಿವಾಟು ಕೋಟಿಯಲ್ಲಿ ನಡೆದಿದೆ.