ಕಾಲೇಜಿನ ಭದ್ರತಾ ಸಿಬ್ಬಂದಿಯ ಬೈಕ್ ಸುಟ್ಟು ಹೋಯಿತೆಂದು ವಿದ್ಯಾರ್ಥಿಗಳೇ ಹಣ ಸಂಗ್ರಹಿಸಿ ಹೊಸ ಬೈಕ್ ಖರೀದಿ ಮಾಡಿದರು!

ರಾಯ್ ಪುರದ ಹಿದಾಯುತುಲ್ಲ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಭದ್ರತಾ ಸಿಬ್ಬಂದಿಯ ಬೈಕ್ ಸುಟ್ಟು ಹೋದಂತಹ ಸಂದರ್ಭದಲ್ಲಿ ಆ ಭದ್ರತಾ ಸಿಬ್ಬಂದಿಗೆ ಹೊಸ ಬೈಕ್ ಖರೀದಿ ಮಾಡಲು ಅವರ ಕಷ್ಟದ ಸಮಯದಲ್ಲಿ ನೆರವನ್ನು ನೀಡಲು ಮುಂದಾದ ಒಂದು ಮಾದರಿ ಅಥವಾ ಪ್ರೇರಣಾತ್ಮಕ ಘಟನೆಯು ನಡೆದಿದೆ‌. ವಿಶ್ವ ವಿದ್ಯಾಲಯದಲ್ಲಿ ಅಲ್ಲಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ‌. ಹೀಗೆ ಕರ್ತವ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿಯಲ್ಲಿ ಒಬ್ಬರು ಸುರೇಂದ್ರ ಸಾಹು. ಸುರೇಂದ್ರ ಅವರು ಹತ್ತಿರದ ಹಳ್ಳಿಯೊಂದರಲ್ಲಿ ವಾಸವಿದ್ದಾರೆ. ಒಂದು ದಿನ ಅವರಿಗೆ ಕರೆಯೊಂದು ಬಂದು ನಿಮ್ಮ ಬೈಕ್ ಸಂಪೂರ್ಣವಾಗಿ ಸು ಟ್ಟು ಹೋಗಿದೆ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸುತ್ತಾರೆ.

ಫೋನ್ ಕರೆ ಯಲ್ಲಿ ತನ್ನ ಬೈಕ್ ಸು ಟ್ಟು ಹೋದ ವಿಷಯವನ್ನಾಗಿ ಕೇಳಿ ಸುರೇಂದ್ರ ಸಾಹು ಬಹಳ ಬೇಸರ ಪಟ್ಟುಕೊಂಡಿದ್ದಾರೆ. ಸಾಹು ಬೈಕ್ ಸು ಟ್ಟು ಹೋದ ಜಾಗಕ್ಕೆ ಬಂದು ನೋಡಿದ ಸಾಹುಗೆ ನಿಜವಾಗಿಯೂ ದುಃಖವಾಗಿದೆ. ಬೈಕ್ ನಲ್ಲಿ ಸ್ಪಾರ್ಕ್ ಕಾಣಿಸಿಕೊಂಡಿದ್ದರಿಂದ ಇಂತಹ ಒಂದು ಅ ನಾ ಹುತ ನಡೆದು ಹೋಗಿತ್ತು. ಹಾ ಳಾ ದ ತನ್ನ ಬೈಕ್ ನೋಡುತ್ತ ಸಾಹು ತಾನು ಎರಡು ವರ್ಷಗಳ ಕಾಲ ತನ್ನ ಗಳಿಕೆಯಲ್ಲಿ ಸ್ವಲ್ಪ ಸ್ವಲ್ಪ ಹಣವನ್ನು ಉಳಿಸಿ ಈ ಬೈಕ್ ಕೊಂಡಿದ್ದಾಗಿ ಹೇಳಿಕೊಂಡು ತಮ್ಮ ವೇ ದ ನೆಯನ್ನು ವ್ಯಕ್ತಪಡಿಸಿದ್ದಾರೆ. ಕಷ್ಟ ಪಟ್ಟು ಕೊಂಡ ಅವರ ನೋ ವು ನಿಜಕ್ಕೂ ಎಂತದ್ದು ಎಂದು ಅನುಭವಿಸಿದವನೇ ಬಲ್ಲನೇ ಹೊರತು ಬೇರೆಯವರು ಹೇಳುವುದು ಕಷ್ಟದ ಮಾತು.

ಬೈಕ್ ಸು ಟ್ಟು ಹೋದ ನಂತರ ಸುರೇಂದ್ರ ಅವರಿಗೆ ಬಹಳ ನಿರಾಶೆ ಉಂಟಾಗಿತ್ತು. ಈ ಬೈಕ್ ಅನ್ನು ಸುರೇಶ್ ಮತ್ತು ಅವರ ಸಹೋದರ ಇಬ್ಬರೂ ಕೂಡಾ ಪೈಸೆ ಪೈಸೆ ಕೂಡಿಟ್ಟು ಈ ಬೈಕ್ ಅನ್ನು ಕೊಂಡಿದ್ದರು. ಅವರ ಮನೆ ವಿಶ್ವವಿದ್ಯಾಲಯದಿಂದ 12 ಕಿಮೀ ದೂರದಲ್ಲಿದೆ. ಬೈಕ್ ಕೊಳ್ಳುವ ಮೊದಲು ಅವರು ಪ್ರತಿದಿನ ಸೈಕಲ್ ನಲ್ಲಿ ಕೆಲಸಕ್ಕೆ ಬರುತ್ತಿದ್ದರು. ಸುರೇಂದ್ರ ಅವರ ಬೈಕ್ ಸು ಟ್ಟು ಹೋದ ವಿಷಯ ಕಾಲೇಜಿನ ವಿದ್ಯಾರ್ಥಿಗಳಿಗೆ ಕೂಡಾ ತಿಳಿಯಿತು. ಅವರು ತಾವು ಹೇಗಾದರೂ ಮಾಡಿ ಸುರೇಂದ್ರ ಅವರಿಗೆ ಸಹಾಯವನ್ನು ಮಾಡಬೇಕೆಂದು ಅವರು ನಿರ್ಧಾರ ಮಾಡಿದರು. ಅದಕ್ಕಾಗಿ ಕಾಲೇಜಿನ ಪ್ರಸ್ತುತ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಕೂಡಾ ಕೈ ಜೋಡಿಸಿದರು.

ಹೀಗೆ ಎಲ್ಲಾ ವಿದ್ಯಾರ್ಥಿಗಳು ಸೇರಿ ಎರಡು ಗಂಟೆಗಳ ಅವಧಿಯಲ್ಲೇ ಸುಮಾರು 40 ಸಾವಿರ ರೂಪಾಯಿಗಳ ಹಣವನ್ನು ಸಂಗ್ರಹ ಮಾಡಿದರು. ಆ ಹಣದಿಂದ ಹೊಸ ಬೈಕ್ ಖರೀದಿ ಮಾಡಲು ಸಾಧ್ಯವಿತ್ತು ಕೂಡಾ.
ವಿಶ್ವ ವಿದ್ಯಾಲಯದ ಸ್ಟೂಡೆಂಟ್ಸ್ ಬಾ ರ್ ಕೌನ್ಸಿಲ್ ನ ಸದಸ್ಯರು ಹೇಳುವಂತೆ ಸುರೇಂದ್ರ ಅವರಿಗೆ ಸಹಾಯ ನೀಡಲು ವಿದ್ಯಾರ್ಥಿಗಳು ತುಂಬು ಮನಸ್ಸಿನಿಂದ ಮುಂದೆ ಬಂದರು. ಎಲ್ಲಾ ವಿದ್ಯಾರ್ಥಿಗಳು ಸೇರಿ ಸುರೇಂದ್ರ ಅವರಿಗೆ ನಿರಾಶರಾಗಬೇಡಿ ನಾವೆಲ್ಲಾ ಸೇರಿ ನಿಮಗೆ ಸಹಾಯವನ್ನು ಮಾಡುವುದಾಗಿ ಧೈರ್ಯವನ್ನು ಹೇಳಿದರಂತೆ. ಹೀಗೆ ವಿದ್ಯಾರ್ಥಿಗಳೆಲ್ಲಾ ಸೇರಿ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಯ ಕಷ್ಟದಲ್ಲಿ ಕೈ ಹಿಡಿದಿದ್ದಾರೆ.

ಈ ಘಟನೆಯ ನಂತರ ಸುರೇಂದ್ರ ಸಾಹು ತನಗೆ ನೆರವು ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಎರಡು ವರ್ಷ ಕೂಡಿಟ್ಟ ಹಣದಿಂದ ಕೊಂಡ ಬೈಕ್ ಸು ಟ್ಟು ಹೋದಾಗ ಬೇಸರ ವಾಗಿತ್ತು ಆದರೆ ಎಲ್ಲಾ ವಿದ್ಯಾರ್ಥಿಗಳ ನೆರವಿನಿಂದ ನಾನು ಆ ದುಃಖದಿಂದ ಹೊರಬರಲು ಸಾಧ್ಯವಾಯಿತು ಎಂದಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಸುರೇಂದ್ರ ಅವರಿಗೆ ಸಹಾಯ ನೀಡಲು ಸೋಶಿಯಲ್ ಮೀಡಿಯಾದ ನೆರವು ಕೂಡಾ ಪಡೆದಿದ್ದರು ಎನ್ನಲಾಗಿದೆ. ಒಟ್ಟಾರೆ ವಿದ್ಯಾರ್ಥಿಗಳು ಈ ಮೂಲಕ ಎಲ್ಲರೂ ಕೈ ಜೋಡಿಸಿದರೆ ಕಷ್ಟಗಳು ಕರಗುವುದು ಕಠಿಣವಲ್ಲ ಎಂಬುದನ್ನು ಸಾಬೀತು ಮಾಡಿದೆ.