ಕಿಂಗ್ ಕೋಬ್ರಾ ಕೋತಿಯನ್ನು ಕಚ್ಚಲು ಪ್ರಯತ್ನಿಸುತ್ತಿತ್ತು, ಆದರೆ ಕೋತಿ ಕೊಟ್ಟಿತು ಸಖತ್ ಫೈಟ್! ವೀಡಿಯೊದಲ್ಲಿ ನೋಡಿ ಮುಂದೇನಾಯಿತು!
ಕಿಂಗ್ ಕೋಬ್ರಾ ಮಂಗಣ್ಣನಿಗೆ ಕಚ್ಚುವ ಪ್ರಯತ್ನವಾಯಿತು ವಿಫಲ! ಕಿಂಗ್ ಕೋಬ್ರಾಗೆ ಮಂಗ ಕೊಟ್ಟ ಸಖತ್ ಉತ್ತರ, ವಿಡಿಯೋ ನೋಡಿ…
ಹಾವು ಮುಂಗುಸಿಯ ಜಗಳದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ, ಅಷ್ಟೇ ಏಕೆ ಅವುಗಳ ಜಗಳ ಪ್ರತ್ಯಕ್ಷವಾಗಿ ಅಥವಾ ವಿಡಿಯೋ ಮುಖಾಂತರ ನೋಡಿರಲೇಬೇಕು. ಆದರೆ ಸದ್ಯಕ್ಕೆ ಮಂಗ ಮತ್ತು ನಾಗರ ಹಾವಿನ ಜಗಳದ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿ ಇದಕ್ಕೆ ಜನರು ಸಹ ಹೆಚ್ಚಿಗೆ ವೀಕ್ಷಿಸುತ್ತಿದ್ದಾರೆ. ಈ ಮಂಗ ಮತ್ತು ಹಾವಿನ ಜಗಳದ ವಿಡಿಯೋ ನಿಮಗೂ ಅಚ್ಚರಿ ಉಂಟು ಮಾಡದೆ ಇರಲಾರದು.
ವಿಡಿಯೋದಲ್ಲಿ ನಾಗರಹಾವಿನ ಮುಂದೆ ಒಂದು ಮಂಗ ಕುಳಿತಿದೆ, ಹಾವು ಮೇಲಿಂದ ಮೇಲೆ ತನ್ನ ಹೆಡೆಯನ್ನು ತೆಗೆದು ಮಂಗಕ್ಕೆ ಕಚ್ಚಬೇಕೆಂದು ಪ್ರಯತ್ನಿಸುತ್ತಿದೆ ಆದರೆ ಅದರ ಪ್ರಯತ್ನ ವಿಫಲವಾಗುತ್ತಿದೆ. ಮಂಗ ಕುಪ್ಪಳಿಸಿ ದೂರ ಹಾರಿ ತಪ್ಪಿಸಿಕೊಳ್ಳುತ್ತಿದೆ.
ಸುಮಾರು ಎರಡು ನಿಮಿಷದ ಈ ವಿಡಿಯೋದಲ್ಲಿ ನಾಗ ಸಿಟ್ಟಿನಿಂದ ಮಂಗನನ್ನು ಕಚ್ಚಿ ಸಾಯಿಸಬೇಕೆನ್ನುವ ಛಲದಿಂದ ಪ್ರಯತ್ನ ಮಾಡಿಯೇ ಮಾಡುತ್ತಿದೆ. ಆದರೆ ಮಂಗ ಮಾತ್ರ ತನ್ನ ಚಾಕಚಕ್ಯತೆಯಿಂದ ಪ್ರತಿ ಸಲ ಅದರಿಂದ ತಪ್ಪಿಸಿಕೊಂಡು ಅದನ್ನು ಪೀಡಿಸುತ್ತಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಅಧಿಕಾರಿ ಸುಶಾಂತ್ ನಂದಾ (IFS Officer Susanta Nanda) ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.
Monkey fighting a king Cobra & coming out triumphant.
— Susanta Nanda IFS (@susantananda3) June 3, 2020
One of its kind🙏
( Free wild from chains & cages. Forest is their rightful place) pic.twitter.com/OiNoAJEnrQ
ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ಜೂನ್ 3 ರಂದು ಶೇರ್ ಮಾಡಿದ್ದಾರೆ. ಇಲ್ಲಿಯವರೆಗೆ ಇಪ್ಪತ್ತು ಸಾವಿರದ ವರೆಗೆ ವ್ಯೂವ್ಜ್ ಮತ್ತು ಸಾವಿರ ಮೇಲ್ಪಟ್ಟು ಲೈಕ್ಸ್ ದೊರಕಿವೆ. ಹಾಗೆಯೇ ಮೂರುನೂರರ ವರೆಗೆ ರೀಟ್ವೀಟ್ ಆಗಿವೆ. ಯುಜರ್ಸ್ ಗಳು ಈ ವಿಡಿಯೋವನ್ನು ನೋಡಿ ತರತರವಾದ ರೀಎಕ್ಷನ್ ಗಳನ್ನು ನೀಡುತ್ತಿದ್ದಾರೆ.
ಮಂಗನ ಮುಂದೆ ಕೋಬ್ರಾದ ಈ ಸೋಲು ಸೋಶಿಯಲ್ ಮಿಡಿಯಾದಲ್ಲಿ ಜನರಿಗೆ ಚಿಂತೆಗೀಡು ಮಾಡಿದೆ. ಯೂಜರ್ಸ್ ಗಳು ಈ ವಿಡಿಯೋವನ್ನು ನೋಡಿ ಬೇರೆ ಬೇರೆ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ಶೇರ್ ಮಾಡುತ್ತಾ ಹೀಗೆ ಬರೆದಿದ್ದಾರೆ. ‘ಮಂಗ, ಕಿಂಗ್ ಕೋಬ್ರಾ ಜೊತೆಗೆ ಹೋರಾಡುತ್ತಿದೆ ಮತ್ತು ಗೆಲ್ಲುತ್ತಿದೆ, ಸರಪಳಿ ಮತ್ತು ಪಂಜರಗಳಿಂದ ಮುಕ್ತ ಮಾಡಿ, ಕಾಡೇ ಇವುಗಳ ಸರಿಯಾದ ಸ್ಥಳವಿದೆ’.