ಕಿಂಗ್ ಕೋಬ್ರಾ (YOGA) ಪ್ರಾಣಾಯಾಮ ಮಾಡುತ್ತಿರುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆ; ವಿಡಿಯೋ ವೈರಲ್…

ಸಾಕುಪ್ರಾಣಿಗಳು ಎಕ್ಸರ್ಸೈಜ್ ಮಾಡುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ಅನೇಕ ವಿಡಿಯೋಗಳಲ್ಲಿ ನೋಡಿರಬಹುದು. ಆದರೀಗ ಕಾಳಿಂಗ ಸರ್ಪ ಅಥವಾ ಕಿಂಗ್ ಕೋಬ್ರಾ ಪ್ರಾಣಾಯಾಮ ಮಾಡುತ್ತಿರುವಂತಹ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅದ್ಭುತ ಮತ್ತು ಅಪರೂಪದ ದೃಶ್ಯವನ್ನು ಎಕ್ಸ್ಪರ್ಟ್ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿರತಕ್ಕಂತ ಡಾಕ್ಟರ್ ಎಸ್ ವರಪ್ರಸಾದ್ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಯಾರೇ ಆಗಲಿ ಎಕ್ಸರ್ಸೈಜ್ ಮಾಡುವುದೆಂದರೆ ತುಂಬಾ ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲಿ ಕಿಂಗ್ ಕೋಬ್ರಾ ಯೋಗ ಮಾಡುತ್ತಿರುವಂತಹ ದೃಶ್ಯ ಅದು ವಿಶೇಷವಾಗಿ ಪ್ರಾಣಾಯಾಮ ಮಾಡುತ್ತಿರುವ ಹಾಗೆ ಕಂಡುಬರುತ್ತಿದೆ.

ಇದು ಯೋಗ ಮಾಡುತ್ತಿರುವುದಾಗಿ ಯಾವುದೇ ನ್ಯೂಸ್ ಚಾನೆಲ್ ಗಳು ಹೇಳುತ್ತಿಲ್ಲ, ಈ ದೃಶ್ಯವನ್ನು ನೋಡಿದ ನೇಟಿಜನ್ಸ್ ಗಳೇ ಹೇಳುತ್ತಿದ್ದಾರೆ. ಹೀಗಾಗಿ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದ್ದರಿಂದ ತುಂಬಾ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ಕೋಬ್ರಾ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳುತ್ತದೆ, ತದನಂತರ ಮತ್ತೆ ನಿಧಾನವಾಗಿ ಉಸಿರನ್ನು ಹೊರಗೆ ಬಿಡುತ್ತಿದೆ. ಕೋಬ್ರಾ ಮಾಡುತ್ತಿರುವ ಯೋಗದ ಈ ದೃಶ್ಯವನ್ನು ನೋಡಿದವರು ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ. ಈ 37 ಸೆಕೆಂಡುಗಳ ವಿಡಿಯೋವನ್ನು @megirish2001 ಹೆಸರಿನ ಅಕೌಂಟ್ ನಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ.

ವಿಡಿಯೋ ನೋಡಿ

ನೇಟಿಜನ್ಸ್ ಗಳು ಮಾತ್ರ ಈ ದೃಶ್ಯವನ್ನು ನೋಡಿದ ನಂತರ ಪ್ರಾಣಾಯಾಮ ಮಾಡುತ್ತಿರುವ ಕೋಬ್ರಾ ಎಂದು ಪ್ರತಿಕ್ರಿಯೆ ನೀಡುತ್ತಿದ್ದರೆ ಇನ್ನೂ ಕೆಲವರು ಕೋಬ್ರಾ ಯೋಗ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಮತ್ತೊಬ್ಬ ಯೂಸರ್ ಅದು ಫಿಟ್ ಆಂಡ್ ಫೈನ್ ಇರುವ ಸಲುವಾಗಿ ಯೋಗ ಮಾಡುತ್ತಿರಬಹುದೆಂಬ ಸಂಶಯ ವ್ಯಕ್ತ ಮಾಡಿದ್ದಾನೆ.