ಕಿಡ್ನಿ ಸ್ಟೋನ್ ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ: ಆತಂಕಕ್ಕೆ ಈಡಾದ ಜನರು!
ವೈದ್ಯರನ್ನು ಭೂಮಿಯ ಮೇಲಿರುವ ದೇವರುಗಳೆಂದೇ ಜನರು ಕರೆದು ಗೌರವಿಸುತ್ತಾರೆ. ಏಕೆಂದರೆ ಅನೇಕ ಜನರನ್ನು ಆರೋಗ್ಯ ಸಮಸ್ಯೆಗಳಿಂದ ಕಾಪಾಡುವ ಶಕ್ತಿ ವೈದ್ಯರಲ್ಲಿ ಇದೆ. ಆದರೆ ಇಂತಹ ಒಬ್ಬ ವೈದ್ಯ ಬಿಹಾರದ ರಾಜಧಾನಿ ಪಾಟ್ನಾ ದಲ್ಲಿ ಮಾಡಿದ ಒಂದು ಕೆಲಸ ಇದೀಗ ದೇಶ ವ್ಯಾಪಿಯಾಗಿ ಜನರನ್ನು ಬೆ ಚ್ಚಿ ಬೀಳುವಂತೆ ಮಾಡಿರುವುದು ಮಾತ್ರವೇ ಅಲ್ಲದೇ ವೈದ್ಯರ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಕೂಡಾ ವ್ಯಾಪಕವಾಗಿ ಖಂ ಡ ನೆ ಮಾಡುತ್ತಿದ್ದಾರೆ. ಈ ವೈದ್ಯರು ಚಿಕಿತ್ಸೆಯನ್ನು ಪಡೆಯಲು ಬಂದ ವ್ಯಕ್ತಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ಮಾಡಿರುವ ಆ ಘಾ ತಕಾರಿ ಕಾರ್ಯವು ಎಲ್ಲರೂ ಕೂಡಾ ಅವರನ್ನು ಟೀ ಕೆ ಮಾಡುವಂತೆ ಆಗಿದೆ.
ಸ್ಟೋನ್ ಚಿಕಿತ್ಸೆಗಾಗಿ ಬಂದ ವ್ಯಕ್ತಿಯ ಕಿಡ್ನಿಯನ್ನೇ ವೈದ್ಯರು ತೆಗೆದಿದ್ದು ಈ ಘಟನೆ ಪಾಟ್ನಾದ ಕಂಕಡ್ ಭಾಗ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು,ಇಲ್ಲಿನ ರೋಡ್ ನಂಬರ್ 11 ರಲ್ಲಿ ಇರುವ ಒಂದು ಖಾಸಗಿ ಆಸ್ಪತ್ರೆಯಲ್ಲಿ ಯುವಕನೊಬ್ಬ ಕಿಡ್ನಿ ಸ್ಟೀನ್ ಚಿಕಿತ್ಸೆಗಾಗಿ ಬಂದು ದಾಖಲಾಗಿದ್ದ ಎನ್ನಲಾಗಿದೆ. ಆದರೆ ವೈದ್ಯರು ಸ್ಟೋನ್ ಆಪರೇಷನ್ ಮಾಡುವ ಹೆಸರಿನಲ್ಲಿ ಯುವಕನ ಕಿಡ್ನಿಯನ್ನೇ ತೆಗೆದುಹಾಕಿದ್ದಾರೆ. ಅನಂತರ ಯುವಕನಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಆತನ ಕುಟುಂಬದವರಿಗೆ ಅನುಮಾನ ಬಂದಿದ್ದು ಅನಂತರ ನಡೆದಿರುವ ಘಟನೆಯ ಬಗ್ಗೆ ತಿಳಿದು ಬಂದಿದೆ.
ಮೊದಲು ವೈದ್ಯರು ಈ ವಿಷಯನ್ನು ನಿರ್ಲಕ್ಷ್ಯ ಮಾಡಿದ್ದು, ಯಾವಾಗ ಯುವಕನ ಕುಟುಂಬದ ಸದಸ್ಯರು ಸ್ವಲ್ಪ ಜೋರು ಮಾಡಿದ್ದಾರೋ ಆಗ ಆಪ್ ಮಾಡಿದ ವೈದ್ಯ ಕ್ಷಮಾಪಣೆ ಕೇಳಲು ಮುಂದಾಗಿದ್ದಾನೆ ಎನ್ನಲಾಗಿದೆ. ಅಲ್ಲದೇ ಯುವಕನ ಕುಟುಂಬದವರಿಗೆ ಒಂದಷ್ಟು ಹಣ ನೀಡಿ ವಿಷಯವನ್ನು ಅಲ್ಲೇ ಮುಚ್ಚಿ ಹಾಕುವ ಪ್ರಯತ್ನವನ್ನು ಕೂಡಾ ಮಾಡಿದ್ದಾರೆ. ಆದರೆ ಕೆಲವೇ ನಿಮಿಷ ಗಳಲ್ಲಿ ವಿಷಯವು ಬೆಂಕಿಯಂತೆ ಎಲ್ಲಾ ಕಡೆ ಹರಡಿದ್ದು ಸುತ್ತ ಮುತ್ತಲಿದ್ದ ಜನರೆಲ್ಲಾ ಅಲ್ಲಿಗೆ ಸೇರಿ, ಗ ಲಾ ಟೆಯನ್ನು ಮಾಡಲು ಆರಂಭಿಸಿದ್ದು ಯುವಕನ ಕುಟುಂಬದವರು ಪೋಲಿಸರಿಗೆ ದೂರನ್ನು ನೀಡಿದ್ದಾರೆ.
ಯುವಕನ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಸ್ಥಳಕ್ಕೆ ಆಗಮಿಸಿದ ಪೋಲಿಸರು ನಡೆಯುತ್ತಿದ್ದ ಗ ಲ ಭೆಯನ್ನು ನಿಯಂತ್ರಣ ಮಾಡಿದ್ದಾರೆ. ಆಪರೇಷನ್ ಮಾಡಿದ ವೈದ್ಯರು ಯುವಕನ ಬಲಭಾಗದಲ್ಲಿ ಕೂಡಾ ಸ್ಟೋನ್ ಇತ್ತು. ಆಪರೇಷನ್ ಮಾಡುವಾಗ ತೀವ್ರ ರ ಕ್ತ ಸ್ರಾ ವ ಆಗಿದ್ದರಿಂದ ಕಿಡ್ನಿಯನ್ನು ತೆಗೆಯಬೇಕಾಯಿತು. ಈ ವಿಚಾರವನ್ನು ಅವರ ಕುಟುಂಬದ ಸದಸ್ಯರಿಗೆ ತಿಳಿಸಲಾಗಿದೆ. ಇದಕ್ಕೆ ಮೀರಿ ಯುವಕನಿಗೆ ಏನೇ ಸಮಸ್ಯೆ ಆದರೂ ಜೀವನ ಪರ್ಯಂತ ಆತನಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ.
ಆದರೆ ಯುವಕನ ಕುಟುಂಬಸ್ಥರು ಯುವಕನ ಕಿಡ್ನಿ ಯಲ್ಲಿ ಏನೂ ಸಮಸ್ಯೆಯಿಲ್ಲದಿದ್ದರೂ ಕಿಡ್ನಿ ತೆಗೆದದ್ದು ಯಾಕೆ ಎಂದಿದ್ದು, ಈ ವಿಚಾರವನ್ನು ಮೊದಲೇ ನಮಗೆ ತಿಳಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ. ಬಲಗಡೆ ಸ್ಟೋನ್ ಇರುವ ವಿಚಾರವನ್ನು ತಿಳಿಸಲೇ ಇರಲಿಲ್ಲ ಅಲ್ಲದೇ ಆಪರೇಷನ್ ನಂತರ ಹೊಟ್ಟೆ ನೋವು ಆರಂಭವಾದಾಗಲೇ ವೈದ್ಯರು ಕಿಡ್ನಿ ತೆಗೆದಿರುವ ವಿಚಾರವನ್ನು ಹೇಳಿದ್ದು , ಅಲ್ಲಿಯವರೆಗೆ ಅವರು ಈ ವಿಚಾರವನ್ನು ತಿಳಿಸಿರಲಿಲ್ಲ ಎಂದಿದ್ದಾರೆ. ಪ್ರಸ್ತುತ ಪೋಲಿಸರು ಈ ವಿಚಾರವಾಗಿ ಯುವಕನ ಕುಟುಂಬ ಹಾಗೂ ವೈದ್ಯರ ವಿಚಾರಣೆ ನಡೆಸುತ್ತಿದ್ದಾರೆ.