“ಕುಗ್ಗಬೇಡ ತೋಟವನ್ನಷ್ಟೇ ಮಾರಿದ್ದೇನೆ, ಕಿಡ್ನಿ ಇನ್ನೂ ಬಾಕಿ ಇದೆ” ಎಂದು ತಂದೆ ಹೇಳಿದಾಗ ಎರಡನೇ ಪ್ರಯತ್ನದಲ್ಲೇ IPS ಪಾಸ್ ಮಾಡಿದ ಮಗ!

ಬಡತನದಿಂದ ಸಂಘರ್ಷ ಮಾಡಿ ದೇಶದಲ್ಲಿಯೇ ತುಂಬಾ ಕಠಿಣ ಮತ್ತು ದೊಡ್ಡ ಪರೀಕ್ಷೆ IPS & IAS ಪಾಸಾಗಿ ಅಧಿಕಾರಿಗಳಾದ ವ್ಯಕ್ತಿಗಳ ಕಥೆ ಯಾವತ್ತೂ ಇತರರಿಗೆ ಪ್ರೇರಣೆಯಾಗುತ್ತದೆ. ಯಾವ ಊರಲ್ಲಿ ಅಥವಾ ಪ್ರದೇಶದಲ್ಲಿ ಕಳೆದ ಐದು ದಶಕಗಳಲ್ಲಿ ಯಾರೂ IPS ಆಗಿಲ್ಲವೋ ಆ ಭಾಗದಲ್ಲಿ ಯಾವುದೇ ಸೌಲಭ್ಯಗಳು ಇಲ್ಲದೆ ಬರೀ ಕಷ್ಟ ಮತ್ತು ಜಿದ್ದಿನ ಬಲದಿಂದ ಇಂದ್ರಜಿತ್ ಮಹತಾ lPS ಪಾಸಾದರು.

ಸಾಮಾನ್ಯ ರೈತನ ಕುಟುಂಬದಲ್ಲಿ ಜನಿಸಿದವರು ಇಂದ್ರಜಿತ್. ಇವರ ತಂದೆ ಮಗನ ಶಿಕ್ಷಣಕ್ಕಾಗಿ ಮನೆಯ ಉದರ ನಿರ್ವಾಹದ ಮುಖ್ಯ ಸೆಲೆಯಾದ ತೋಟವನ್ನೇ ಮಾರಿ ಬಿಟ್ಟರು. ತಂದೆ ಇಷ್ಟೆಲ್ಲ ಮಾಡುತ್ತಿರುವಾಗ ಮಗನಿಗೆ ಶಿಕ್ಷಣದಲ್ಲಿ ಯಾವುದು ಕಡಿಮೆ ಬೀಳದಂತೆ ಮಾಡಿದರು. ಮಗನಿಗಾಗಿ ಏನು ಬೇಕು ಅದನ್ನೆಲ್ಲವನ್ನು ಪೂರೈಸಿದರು. ತಂದೆಯ ತ್ಯಾಗ ಮತ್ತು ಕಷ್ಟವನ್ನು ಅರಿತ ಮಗ ಅದರ ಬೆಲೆಯನ್ನು ತಿಳಿದು ಎರಡನೆಯ ಪ್ರಯತ್ನದಲ್ಲಿಯೇ 2008 ರಲ್ಲಿ IPS ಪಾಸಾದರು.

IPS ಇಂದ್ರಜಿತ್ ಮಹತಾ ಝಾರಖಂಡ್ ದಲ್ಲಿಯ ಬೊಕಾರೋ ಜಿಲ್ಲೆಯ ಸಾಬರಾ ಹೆಸರಿನ ಚಿಕ್ಕ ಹಳ್ಳಿಯವರು. ಮಣ್ಣಿನಿಂದ ತಯಾರಿಸಿದ ಕಚ್ಚಾ ಇಟ್ಟಿಗೆಗಳ ಹಂಚಿನ ಮನೆಯಲ್ಲಿರುತ್ತಿದ್ದರು. ಮನೆ ಜೀರ್ಣವಾಗಿ ಬೀಳುವ ಅವಸ್ಥೆಯಲ್ಲಿದ್ದಾಗ ತಾಯಿ ಮತ್ತು ಇಬ್ಬರು ತಂಗಿಯರು ಸೋದರ ಮಾವನ ಮನೆಗೆ ವಾಸಕ್ಕೆ ಹೋದರು. ಶಿಕ್ಷಣಕ್ಕಾಗಿ ಇಂದ್ರಜಿತ್ ತನ್ನ ಮನೆಯನ್ನು ಎಂದಿಗೂ ಬಿಟ್ಟಿಲ್ಲ. ಅದೇ ಸಮಯದಲ್ಲಿ ತಂದೆ ಮಗನೊಂದಿಗೆ ಮನೆಯ ಅಲ್ಪ ಸ್ವಲ್ಪ ರಿಪೇರಿಯನ್ನು ಮಾಡಿದರು.

ತಮ್ಮ ಪರಿಸ್ಥಿತಿಯ ಬಗ್ಗೆ ಹೇಳುವಾಗ ಇಂದ್ರಜಿತ್, ಶಾಲೆಯ ಜೀವನದಲ್ಲಿ ಹೊಸ ಎಡಿಷನ್ ದ ಪುಸ್ತಕಗಳನ್ನು ಖರೀದಿಸಲು ಹಣವಿರುತ್ತಿರಲಿಲ್ಲ. ಹಳೆಯ ಪುಸ್ತಕಗಳನ್ನು ಗುಜರಿಯಿಂದ ಖರೀದಿಸಿ ಪರೀಕ್ಷೆಯ ತಯಾರಿ ಮಾಡಿದೆನು. ಪದವಿ ಪೂರ್ಣವಾದನಂತರ ದೆಹಲಿಗೆ ಬಂದು IPS ತಯಾರಿ ಮಾಡಿದೆನು. ಇಲ್ಲಿಯ ಖರ್ಚು ಸರಿದೂಗಿಸಲು ತಂದೆ 80 ಪ್ರತಿಶತ ಹೊಲವನ್ನು ಮಾರಿದರು. ಹೀಗಾಗಿ ಈ ಎಲ್ಲ ಕಷ್ಟವನ್ನು ನೋಡಿ ಯಶಸ್ಸಿನ ಕಡೆಗೆ ಹೋಗುವ ಜಿದ್ದು ದ್ವಿಗುಣಿತವಾಗಿ ಗುರಿ ತಲುಪಲು ಸಹಾಯವಾಯಿತು.

ಮೊದಲ ಬಾರಿಗೆ ವಿಫಲರಾದಾಗ ತಂದೆ ಸಾಂತ್ವನಪರ ಮಾತುಗಳನ್ನು ಈ ರೀತಿಯಾಗಿ ಹೇಳಿದರು. ಈಗ ಬರೀ ಹೊಲವನ್ನಷ್ಟೇ ಮಾರಿದ್ದೇನೆ, ನಿನ್ನನ್ನು ಕಲಿಸುವದಕ್ಕಾಗಿ ನಾನು ನನ್ನ ಕಿಡ್ನಿಯನ್ನು ಸಹಿತ ಮಾರಲಿಕ್ಕೆ ತಯಾರಾಗಿದ್ದೇನೆ. ನೀನು ಹಣದ ವಿಚಾರ ಮಾಡಬೇಡ. ನಿನ್ನ ಆಸೆ ಇದ್ದಷ್ಟು ಓದಿಕೊ. ತಂದೆಯ ಬಾಯಿಯಿಂದ ಈ ಶಬ್ದಗಳನ್ನು ಕೇಳಿದ ಮೇಲೆ ನತಮಸ್ತಕನಾದ ಇಂದ್ರಜಿತ್ ಮತ್ತೆ ಏಕಾಗ್ರತೆಯಿಂದ ಅಭ್ಯಾಸವನ್ನು ಮಾಡಿ ಎರಡನೆಯ ಬಾರಿಗೆ ಪಾಸಾಗಿ ಯಶಸ್ಸಿನ ಶಿಖರವನ್ನು ಮುಟ್ಟಿ IPS ಆದರು.