ಕುಚುಕು ದೋಸ್ತಿ! ಚಿಪ್ಸ್ ಕಳ್ಳತನ ಮಾಡಲು ಮಂಗನಿಗೆ ಸಹಾಯ ಮಾಡಿತು ನಾಯಿ! ನೋಡಿ ಈ ವೈರಲ್ ವಿಡಿಯೋ….
ನಾಯಿ ಮತ್ತು ಮಂಗಗಳಲ್ಲಿ ನಡೆಯುತ್ತಿರುವ ಜಗಳ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಜೋರು ಹಿಡಿದಿರುವ ಸಂದರ್ಭದಲ್ಲಿ ಮಂಗ ಮತ್ತು ನಾಯಿಯ ಮೈತ್ರಿಯ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿ ನಿಜಕ್ಕೂ ನಿಮಗೆ ತುಂಬಾ ತಮಾಷೆ ಎನಿಸುವುದು.
ಸ್ನೇಹವು ಯಾವುದೇ ಬಣ್ಣ, ರೂಪ ನೋಡುವುದಿಲ್ಲ. ಅದು ತನ್ನಷ್ಟಕ್ಕೆ ತಾನಾಗಿಯೇ ಬೆಳೆದಿರುತ್ತದೆ. ಇದೇ ಕಾರಣದಿಂದ ಈ ಸಂಬಂಧಕ್ಕೆ ತುಂಬಾ ಪವಿತ್ರವೆಂದು ತಿಳಿಯಲಾಗುತ್ತದೆ. ಪ್ರೀತಿ ಮತ್ತು ವಿಶ್ವಾಸದ ಮೇಲೆಯೇ ಈ ಸಂಬಂಧವು ನಡೆದುಕೊಂಡು ಬಂದಿರುತ್ತದೆ ಮತ್ತು ನಡೆದುಕೊಂಡು ಹೋಗುತ್ತದೆ. ಇಲ್ಲಿಯವರೆಗೆ ನೀವು ಸ್ನೇಹದ ಅನೇಕ ಕಥೆಗಳನ್ನು ಕೇಳಿರಬಹುದು. ಆದರೆ ಇಲ್ಲಿ ನೋಡುವ ವಿಡಿಯೋ ಮಂಗ ಮತ್ತು ನಾಯಿಯ ಮೈತ್ರಿಯದಿದೆ. ಇವೆರಡೂ ಕೂಡಿ ಒಂದು ಅಂಗಡಿಯಲ್ಲಿ ಚಿಪ್ಸ್ ಪ್ಯಾಕೆಟನ್ನು ಕಳ್ಳತನ ಮಾಡುತ್ತಿವೆ.
ಈ ವಿಡಿಯೋದಲ್ಲಿ ಮಂಗವು ನಾಯಿಯ ಬೆನ್ನ ಮೇಲೆ ಕುಳಿತು ಅಂಗಡಿಯಲ್ಲಿ ನೇತುಹಾಕಿರುವ ಚಿಪ್ಸ್ ಪ್ಯಾಕೆಟ್ ನ್ನು ಕದಿಯಲು ಯತ್ನಿಸುತ್ತಿದೆ. ಮಂಗವು ನಾಯಿಯ ಬೆನ್ನು ಮೇಲೆ ಕುಳಿತು ಚಿಪ್ಸಿನ ಪ್ಯಾಕೆಟ್ ಹರಿಯಲು ಯತ್ನಿಸುತ್ತಿದೆ. ಈ ಪ್ರಯತ್ನ ಮಾಡುವಾಗ ಮಂಗ ಒಮ್ಮೆ ಕೆಳಗೆ ಜಾರುತ್ತದೆ. ಮಂಗವು ಇಷ್ಟಾದ ಮೇಲೆಯೂ ಮತ್ತೆ ತನ್ನ ಪ್ರಯತ್ನ ಮುಂದುವರಿಸುತ್ತದೆ. ಅಲ್ಲಿಯ ವ್ಯಕ್ತಿಯೊಬ್ಬ ಈ ಘಟನೆಯ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.
ವಿಡಿಯೋ ನೋಡಿ
ಈ ತಮಾಷೆಯ ವಿಡಿಯೋ naughty.raa ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 10 ಲಕ್ಷಕ್ಕೂ ಮೀರಿ ಜನರು ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋವನ್ನು ಕುಚುಕು ಗೆಳೆಯರು ಅಂತ ಸಾಕಷ್ಟು ಶೇರ್ ಮಾಡಿದ್ದಾರೆ.