ಕುಣಿಯುತ್ತ ವಿಚಿತ್ರವಾಗಿ ಸಪ್ತಪದಿ ತುಳಿದ ನವ ದಂಪತಿ; “ಇದೇನು ಮದುವೆಯೋ ಸಂಸ್ಕಾರದ ಆಹುತಿಯೊ” ಎಂದ ಜನ! ನೋಡಿ ಈ Video

ದಿನ ದಿನಕ್ಕೆ ಆಚಾರ ವಿಚಾರಗಳು ಬದಲಾಗುತ್ತಿವೆ. ಮದುವೆಯಲ್ಲಿ ನಡೆಯುವ ಸನ್ನಿವೇಶಗಳ ಅನೇಕ ವಿಚಿತ್ರ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮಾಡುತ್ತಿರುತ್ತವೆ. ಮೊದಲು ಮದುವೆಯಲ್ಲಿ ವಧು-ವರರ ಸಂಬಂಧಿಕರು ಮತ್ತು ಗೆಳೆಯ ಗೆಳತಿಯರು ಡ್ಯಾನ್ಸ್ ಮಾಡುತ್ತಿದ್ದರು. ನಂತರ ಸ್ವತಃ ಮದುವೆಯಾಗುವ ಜೋಡಿಗಳೇ ತಮ್ಮ ಮದುವೆಯಲ್ಲಿ ತಾವೇ ಡ್ಯಾನ್ಸ್ ಮಾಡುವ ಎಷ್ಟೋ ವಿಡಿಯೋಗಳು ಮೀಡಿಯಾದಲ್ಲಿ ಕಂಡಿದ್ದೇವೆ. ಈಗ ಒಂದು ಕಪಲ್ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಅಗ್ನಿಸಾಕ್ಷಿಯಾಗಿ ಮದುವೆಯಾಗುವಾಗ ಅಗ್ನಿಯ ಸುತ್ತ ಸಪ್ತಪದಿ ತುಳಿಯುವಾಗ ಡ್ಯಾನ್ಸ್ ಮಾಡಿ ತಮ್ಮ ಹೆಚ್ಚುವರಿ ಬುದ್ಧಿಯನ್ನು ತೋರಿಸಿದ್ದಾರೆ. ಇದು ಭಾರತದ ದೊಡ್ಡ ಉದ್ಯೋಗಪತಿಯಾದ ಬಿರ್ಲಾ ಪ್ರೆಸಿಜನ್ ಟೆಕ್ನಾಲಜಿ ಚೇರ್ಮನ್ ಮತ್ತು ಎಂ. ಡಿ. ಆದ ವೇದಾಂತ ಬಿರ್ಲಾ ಅವರಿಗೆ ಹಿಡಿಸಿಲ್ಲ. ಅದಕ್ಕಾಗಿ ಈ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿ ಇದು ತುಂಬಾ ಅಪಮಾನಜನಕವಾಗಿದೆ ಎಂದು ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.

ಪವಿತ್ರ ಅಗ್ನಿಯ ಸುತ್ತಮುತ್ತಲಿನ ವಾತಾವರಣ ಸಮಾರಂಭ ಹಿಂದೂ ಧರ್ಮದ ಮಹತ್ವದ ವೈಶಿಷ್ಟ್ಯವಾಗಿದೆ. ಮದುವೆಯಾಗುವಾಗ ವಧು-ವರ 7 ಬಾರಿ ಅಗ್ನಿಯ ಸುತ್ತನ್ನು ಹಾಕುತ್ತಾರೆ. ಆ ಸಂದರ್ಭದಲ್ಲಿ ಪ್ರಾರ್ಥನೆಯನ್ನು ಸಹ ಮಾಡುತ್ತಾರೆ. ಆದರೆ ಇಲ್ಲಿ ಎನನ್ನು ನೋಡುತ್ತಿದ್ದೇವೆ? ಸಪ್ತಪದಿ ತುಳಿಯುವ ಸಂದರ್ಭದಲ್ಲಿ ಡ್ಯಾನ್ಸ್? ಇದನ್ನು ನೋಡಿ ಸಂಬಂಧಿಕರು ಸಹಿತ ನಗುತ್ತಿದ್ದಾರೆ.

ವಿಡಿಯೋ ನೋಡಿ

ವೇದಾಂತ ಬಿರ್ಲಾ ಅವರು ಈ ಸಂಬಂಧದ ವಿಡಿಯೋ ಪೋಸ್ಟ್ ಮಾಡುವಾಗ ಅದರ ಜೊತೆಗೆ ಮಾರ್ಮಿಕವಾಗಿ ಕ್ಯಾಪ್ಶನ್ ನೀಡಿದ್ದಾರೆ. ಇದು ಮದುವೆ ನಡೆದಿದೆಯೋ ಇಲ್ಲ ಸಂಸ್ಕಾರಗಳ ಆಹುತಿ? ಇದನ್ನು ಎಂದಿಗೂ ಮರೆಯಬೇಡಿ. ನಾವು ಜಗತ್ತಿನಲ್ಲಿ ಪೂಜ್ಯರಾಗಿದ್ದೇವೆ ಎಂದರೆ ಅದು ಕೇವಲ ನಮ್ಮ ಸಂಸ್ಕಾರ ಮತ್ತು ಆದರ್ಶಗಳಿಂದ ಮಾತ್ರ. ಇಲ್ಲಿಯವರೆಗೆ 5 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 25 ಸಾವಿರದವರೆಗೆ ಲೈಕ್ಸ್ ಗಳು ಬಂದಿವೆ. ಜೊತೆಗೆ ಅನೇಕರು ಈ ವಿಡಿಯೋ ಬಗ್ಗೆ ತಮ್ಮ ಬೇಸರ ಮತ್ತು ಕೋಪವನ್ನು ಹೊರ ಹಾಕಿದ್ದಾರೆ.