ಕುದುರೆಯ ಜೊತೆಗೂಡಿ ಮಾಡಬೇಕೆಂದಿದ್ದಳು ಯುವತಿ ಸಖತ್ ಡಾನ್ಸ್! ಅದೃಷ್ಟ ತುಂಬಾನೇ ಚೆನ್ನಾಗಿತ್ತು; ವೈರಲ್ ಆಯ್ತು ವಿಡಿಯೋ.
ಯುವತಿಯರಿಗೆ ಕುಣಿಯುವುದೆಂದರೆ ತುಂಬಾ ಇಷ್ಟ. ಹೀಗೆ ಕುಣಿಯುವಾಗ ಕೆಲವೊಂದು ಸಲ ಬೇರೆ ಬೇರೆ ಪ್ರಾಣಿಗಳೊಂದಿಗೆ ಹೊಸ ಹೊಸ ಎಕ್ಸ್ಪರಿಮೆಂಟ್ ಮಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಹಠಾತ್ ನಡೆದ ವಿಚಿತ್ರ ಘಟನೆಗಳು ಕ್ಯಾಮೆರಾದಲ್ಲಿ ಸೆರೆಯಾಗಿಬಿಡುತ್ತವೆ. ನಂತರ ಇಂಟರ್ನೆಟ್ ನಲ್ಲಿ ವೈರಲ್ ಆಗಿಬಿಡುತ್ತವೆ. ನಾಯಿ, ಬೆಕ್ಕುಗಳಂತಹ ಚಿಕ್ಕ ಪ್ರಾಣಿಗಳಾದರೆ ಸರಿ, ಈ ಯುವತಿ ಕುಣಿಯುವ ಜೋಷ್ ನಲ್ಲಿ ಕುದುರೆ ಹತ್ತಿರ ಹೋಗಿದ್ದಾಳೆ. ಮುಂದೇನಾಗಿದೆ ನೋಡಿ.
ಡಾನ್ಸ್ ಮಾಡುತ್ತಾ ಮಾಡುತ್ತಾ ಈ ಯುವತಿ ಕುದುರೆಯ ಸಮೀಪ ಹೋಗಿ ಅದರ ಬೆನ್ನ ಮೇಲೆ ಕೈ ಇಟ್ಟಿದ್ದಾಳೆ. ಮೊದಲು ತನ್ನಷ್ಟಕ್ಕೆ ತಾನು ಹುಲ್ಲು ಮೇಯುತ್ತಿರುವ ಕುದುರೆ, ಯುವತಿಯ ಸ್ಪರ್ಶದ ನಂತರ ಅದಕ್ಕೆ ಡಿಸ್ಟರ್ಬ್ ಆಗಿದೆ. ಮೊದಲು ಬಾಯಿಯಿಂದ ಯುವತಿಯ ಮುಖಕ್ಕೆ ಕಚ್ಚಲು ಮುಂದಾಗಿದೆ. ನಂತರ ಕುದುರೆ ಈ ಯುವತಿಗೆ ಸರಿಯಾಗಿಯೇ ಪಾಠ ಕಲಿಸಲು ಮುಂದಾಗಿ ಬ್ಯಾಕ್ ಕಿಕ್ ಕೊಡುವ ಸಲುವಾಗಿ ಪೊಜಿಶನ್ ತೆಗೆದುಕೊಂಡಿದೆ. ಅಷ್ಟರಲ್ಲಿ ಯುವತಿ ಕುಣಿಯುವುದನ್ನು ಬಿಟ್ಟು, ಕ್ಷಣಾರ್ಧದಲ್ಲಿ ಅಲ್ಲಿಂದ ಓಡಿ ಹೋಗಲು ಯಶಸ್ವಿಯಾಗಿದ್ದಾಳೆ. ಈ ದೃಶ್ಯ ನೋಡಿದ ನಂತರ ನಗು ತಡೆಯುವುದಾಗುವುದಿಲ್ಲ.
ವಿಡಿಯೋ ನೋಡಿ
View this post on Instagram
ಈ ತಮಾಷೆಯ ವಿಡಿಯೋ ಸೋಶಿಯಲ್ ಮೀಡಿಯಾದ ಬೇರೆ ಬೇರೆ ಪ್ಲಾಟ್ ಫಾರ್ಮ್ ಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋ ಇಲ್ಲಿ ಇನ್ಸ್ಟಾಗ್ರಾಮ್ ನ bhutni_ke_memes ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಒಟ್ಟಿನಲ್ಲಿ ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ.