ಕುದುರೆ ಮೇಲೆ ಕುಳಿತು ಭರ್ಜರಿ ಡಾನ್ಸ್ ಮಾಡಿದಳು ಮದುಮಗಳು..! ವೈರಲ್ ಆಯಿತು ವಿಡಿಯೋ.

 

ಮದುವೆಯ ಮನೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಕಾರಣ ನಮ್ಮ ಭಾರತದಲ್ಲಿ ಮದುವೆಗೆ ತುಂಬಾ ಮಹತ್ವದ ಸ್ಥಾನ ನೀಡಲಾಗಿದೆ. ಮದುವೆಯಿಂದಾಗಿ ಎರಡು ಜೀವಗಳು ಕೊನೆಯವರೆಗೂ ಒಂದಾಗಿ ಬಿಡುತ್ತವೆ. ಮತ್ತು ಸುಖ ದುಃಖಗಳಲ್ಲಿ ಜೀವನವಿಡೀ ಒಬ್ಬರಿಗೊಬ್ಬರು ಸಂಗಾತಿಯಾಗಿರುತ್ತಾರೆ. ಹೀಗಿದ್ದಾಗ ಅವರ ಮದುವೆಯ ಮೊದಲು ಮನೆಯಲ್ಲಿರುವ ಸದಸ್ಯರಿಗೆ ಮತ್ತು ಬಂಧು ಮಿತ್ರರಿಗೆ ಮನೆಯಲ್ಲಿ ಮದುವೆಯ ಸಂಭ್ರಮವನ್ನು ನಿರ್ಮಾಣ ಮಾಡುತ್ತದೆ. ಇತ್ತೀಚೆಗಂತೂ ಮದುವೆಯ ಕಾರ್ಯಕ್ರಮದಲ್ಲಿ ಎಲ್ಲರೂ ಡ್ಯಾನ್ಸ್ ಮಾಡುವದು ಒಂದು ಪ್ಯಾಶನ್, ವಾಡಿಕೆಯಾಗಿ ಬಿಟ್ಟಿದೆ. ಮೊದಮೊದಲಂತೂ ಮದುಮಕ್ಕಳಿಗೆ ಬಿಟ್ಟು ಎಲ್ಲರೂ ಕುಣಿಯುತ್ತಿದ್ದರು. ಆದರೆ ಈಗ ಹೊಸ ಟ್ರೆಂಡ್ ಪ್ರಕಾರ ಮದುಮಕ್ಕಳು ತಮ್ಮ ಮದುವೆಯಲ್ಲಿ ತಾವೇ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ.

ಸದ್ಯ ಇದೇ ರೀತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಈ ವಿಡಿಯೋದಲ್ಲಿ ಕಂಡುಬರುವ ಹಾಗೆ ಮದುಮಗಳು ಮದುವೆಯ ಶೃಂಗಾರ ಮಾಡಿಕೊಂಡು ಕುದುರೆಯ ಮೇಲೆ ಕುಳಿತಿದ್ದಾಳೆ. ಬ್ಯಾಂಡ್ ಶಬ್ದಕ್ಕೆ ಮದುಮಗಳು ಅಲ್ಲಿಯೇ ಕುಳಿತು ಮೂವ್ ಮೆಂಟ್ ಮಾಡುತ್ತಿದ್ದಾಳೆ. ಮದುಮಗಳು ಕುಳಿತ ಕುದುರೆಯು ತನ್ನ ಎರಡು ಕಾಲುಗಳನ್ನು ಎತ್ತರಿಸಿ ಪೋಸ್ ಕೊಡುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ತಕ್ಕಂತೆ ಮದುಮಗಳು ಸಹ ಮೂಗುದಾರವನ್ನ ಹಿಡಿದು ಬ್ಯಾಲೆನ್ಸ್ ಮಾಡಿಕೊಳ್ಳುತ್ತಿದ್ದಾಳೆ. ಹಾಗೆಯೇ ಕುದುರೆಯು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯಲು ಯತ್ನಿಸಿದೆ. ನಂತರ ಮಾತ್ರ ಮದುಮಗಳಿಗೆ ತನ್ನ ಮೇಲೆ ಕಂಟ್ರೋಲ್ ಮಾಡಲು ಸಾಧ್ಯವಾಗದೆ ಕೈ ಮೇಲೆತ್ತಿ ಕುಳಿತಲ್ಲಿಯೇ ಡಾನ್ಸ್ ಮಾಡಲು ಶುರುಮಾಡುತ್ತಾಳೆ. ಜೊತೆಗೆ ಎರಡು ಮೂರು ಸಲ ಕುದುರೆಯ ಎರಡು ಕಾಲುಗಳನ್ನು ಎತ್ತಿ ಹವೆಯಲ್ಲಿ ಜಂಪು ಮಾಡಿಸಲು ಸಹ ಪ್ರಯತ್ನಿಸುತ್ತಾಳೆ.

ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ವಿಶ್ವಾಸ್ ಪೇಟೆವಾಲೆ ಹೆಸರಿನ ಚಾನೆಲ್ ಮುಖಾಂತರ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 3.8 ಮಿಲಿಯನ್ ಜನರು ನೋಡಿದ್ದಲ್ಲದೆ ಸಾವಿರಾರು ಜನರು ಲೈಕ್ ಮಾಡಿದ್ದಾರೆ.

ನೋಡಿ ಈ ವಿಡಿಯೋ…