ಕುರಿಯರ್ ಮೂಲಕ ವಸ್ತುಗಳನ್ನು ತರಿಸಿಕೊಂಡ, ಬಾಕ್ಸ್ ತೆರಿಯುತ್ತಿದ್ದಂತೆಯೇ ಹೊರಗೆ ಬಂದದ್ದು ಕೋಬ್ರಾ ಹಾವು!
ನೀವು ಅನೇಕ ಸಲ ಟಿವಿಯಲ್ಲಿ ಅಥವಾ ನೈಜ ಜೀವನದಲ್ಲಿ ವಿ#ಷಕಾರಿ ಹಾವನ್ನು ನೋಡಿರಬಹುದು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವರದಿ ತುಂಬಾನೇ ವೈರಲ್ ಆಗುತ್ತಿದೆ. ಈ ವರದಿಯಲ್ಲಿ ಕುರಿಯರ್ ಮೂಲಕ ಒಂದು ಕೋಬ್ರಾ ಹಾವು ಬಂದಿದೆ. ನಾಗಪುರದ ಜ್ಞಾನೇಶ್ವರ ನಗರದಲ್ಲಿ ವಾಸಿಸುವ ಸುನಿಲ್ ಲಖತೆ ಎಂಬ ವ್ಯಕ್ತಿಯ ಜೊತೆಗೆ ಈ ಘಟನೆ ನಡೆದಿದೆ.
ಬೆಂಗಳೂರಿನಿಂದ ಮಗಳ ಲಗೇಜ್ ತರಿಸಿಕೊಂಡಿದ್ದರು.
ಸುನೀಲ್ ಅವರ ಮಗಳು ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದರು ಆದರೆ ಈಗ ಕೊರೊನಾದಿಂದಾಗಿ ಎಲ್ಲ ಆಫೀಸ್ ಗಳಲ್ಲಿ ವರ್ಕ್ ಫ್ರಾಮ್ ಹೋಮ್ ಗೆ ಅನುಮತಿ ನೀಡಲಾಗಿದೆ. ಈ ಕಾರಣದಿಂದ ಮಗಳು ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಪ್ರಾರಂಭಿಸಿದಳು. ಆದರೆ ಮಗಳ ಎಲ್ಲ ಉಪಯೋಗಿ ವಸ್ತು ಬೆಂಗಳೂರಿನಲ್ಲೇ ಇದ್ದಿದ್ದವು ಅವುಗಳನ್ನು ಒಂದು ಕಂಪನಿಯ ಕುರಿಯರ್ ಮೂಲಕ ತರಿಸಿಕೊಂಡರು. ಕುರಿಯರ್ ಆರ್ಡರ್ ಮಾಡಿದ ಕೂಡಲೇ ಒಂದು ಪ್ರಸಿದ್ಧ ಕಂಪನಿ ಅವರ ವಸ್ತುಗಳನ್ನು ಒಂದು ಬಾಕ್ಸ್ ನಲ್ಲಿ ತುಂಬಿಸಿ ಅದನ್ನು ನಾಗಪೂರಿಗೆ ಕಳುಹಿಸಿದರು. ಕಂಪೆನಿಯ ಕುರಿಯರ್ ಬಾಯ್ ಆ ಬಾಕ್ಸ್ ಲಖತೆಯವರ ಮನೆಗೆ ತಲುಪಿಸಿದನು. ಮನೆಯಲ್ಲಿದ್ದ ಎಲ್ಲರೂ ಸಹ ಬಾಕ್ಸ್ ನಲ್ಲಿ ಬಂದ ವಸ್ತುಗಳನ್ನು ನೋಡಲು ಬಾಕ್ಸ್ ಓಪನ್ ಮಾಡಿದರು. ಆದರೆ ಬಾಕ್ಸ್ ನಲ್ಲಿ ಕಂಡದ್ದು ಬೇರೆ ಇದನ್ನು ನೋಡಿ ಎಲ್ಲರೂ ಹೆ#ದರಿಕೊಂಡರು.
ಲಖತೆ ಅವರು ತಮ್ಮ ಮಗಳ ಎಲ್ಲ ವಸ್ತುಗಳು ವ್ಯವಸ್ಥಿತವಾಗಿ ಬಂದಿವೆ ಇಲ್ಲವೋ ಎಂಬುದನ್ನು ನೋಡುವ ಸಲುವಾಗಿ ಬಾಕ್ಸ್ ಓಪನ್ ಮಾಡಿದರು. ಓಪನ್ ಮಾಡುತ್ತಿದ್ದಂತೆಯೇ ಅದರೊಳಗಿಂದ ಒಂದು ನಾಗರ ಹಾವು ಹೊರಗಡೆ ಬಂದಿತು. ಇದನ್ನು ಕಂಡು ಕುಟುಂಬದವರು ಹೆದ#ರಿಕೊಂಡು ಹಾವು ಹಿಡಿಯಲು ಸರ್ಪಮಿತ್ರನಿಗೆ ಫೋನ್ ಮಾಡಿದರು . ಆದರೆ ಹಾವು ಹಿಡಿಯುವ ವ್ಯಕ್ತಿ ಬಂದು ಅದನ್ನು ಹಿಡಿಯಲು ಎಷ್ಟೋ ಪ್ರಯತ್ನಿದರು ಅತನಿಂದ ತಪ್ಪಿಸಿಕೊಂಡು ಮನೆಯ ಬದಿಯಲ್ಲಿದ್ದ ಚರಂಡಿಯ ಒಳಗೆ ಹೋಗಿತು. ದೊರೆತ ಮಾಹಿತಿಯ ಅನುಸಾರ, ಕುರಿಯರ್ ನಿಂದ ಬಂದ ಬಾಕ್ಸ್ ನ ಕೇಳಗಡೇ ಒಂದು ಸಣ್ಣ ರಂಧ್ರ ಇದ್ದೀದ್ದು ಕಂಡು ಬಂದಿದೆ ಆ ರಂಧ್ರದ ಮೂಲಕವೇ ಹಾವು ಒಳಗಡೆ ಹೋಗಿದೆ ಎಂದು ಹೇಳಲಾಗುತ್ತಿದೆ. ಹಾವು ಓಡಿ ಹೋದರು ಸಹ ಲಖತೆ ಕುಟುಂಬದವರಲ್ಲಿ ಭ#ಯದ ವಾತಾವರಣ ನಿರ್ಮಾಣ ವಾಗಿದೆ.