ಕುರಿಯ ಮೇಲೆ ಕುಳಿತು ಕಿಂಡಲ್ ಮಾಡ್ತಿದ್ದ, ತಕ್ಕ ಸೇಡು ತೀರಿಸಿಕೊಂಡ ಕುರಿ! ನೋಡಿ ಈ ವೈರಲ್ ವಿಡಿಯೋ!

ಮನುಷ್ಯನು ಬುದ್ಧಿ ಇದೆ ಎಂದ ಮಾತ್ರಕ್ಕೆ ನಾನೇ ಶ್ರೇಷ್ಠ, ನಾನೇ ಶಕ್ತಿಶಾಲಿ ಎಂದು ಬೀಗಿದರೆ ನಡೆಯಲ್ಲ. ಭೂಮಿಯ ಮೇಲೆ ಎಲ್ಲ ಪ್ರಾಣಿಗಳಿಗೂ ಜೀವಿಸಲು ಸಮಾನವಾದ ಹಕ್ಕಿದೆ. ಮತ್ತು ಎಲ್ಲ ಪ್ರಾಣಿಗಳು ಪರಸ್ಪರ ಸಾಮರಸ್ಯದಿಂದ ಬದುಕಬೇಕಾದದ್ದು ನಿಸರ್ಗದ ಅಲಿಖಿತ ನಿಯಮವಾಗಿದೆ.

ಭಾವನೆಗಳು ಪ್ರತಿಯೊಂದು ಪ್ರಾಣಿಗಳಲ್ಲೂ ಕಂಡು ಬರುತ್ತವೆ. ಮನುಷ್ಯರು ನಡೆದುಕೊಳ್ಳುವ ರೀತಿಯ ಮೇಲಿಂದ ಪ್ರಾಣಿಗಳು ನಿಶ್ಚಯ ಮಾಡುತ್ತವೆ ಈ ವ್ಯಕ್ತಿಯ ಜೊತೆಗೆ ನಾನು ಹೇಗೆ ನಡೆದುಕೊಳ್ಳಬೇಕು ಎಂದು.

ಇಂಡಿಯನ್ ಫಾರೆಸ್ಟ್ ಆಫೀಸರ್ ಸುಶಾಂತ್ ನಂದಾ ಅವರು ಜುಲೈ 17 ರಂದು ಪ್ರಾಣಿಗಳ ಭಾವನೆಗೆ ಸಂಬಂಧಿಸಿದ ವಿಡಿಯೋ ಒಂದನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೊವನ್ನು ಇಲ್ಲಿಯವರೆಗೆ 2 ಲಕ್ಷ 26 ಸಾವಿರ ಮೇಲ್ಪಟ್ಟು ನೆಟ್ಟಿಗರು ವೀಕ್ಷಿಸಿದ್ದಾರೆ. ಅಂಥದ್ದೇನು ಇರಬಹುದು ಈ ವಿಡಿಯೋದಲ್ಲಿ ಅಂತೀರಾ?

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಾನೇ ಜಾಣ, ತಾನೇ ಶಕ್ತಿಶಾಲಿ ಎಂದು ತೋರಿಸುತ್ತ ಮಿತ್ರರ ಮುಂದೆ ಕುರಿಯೊಂದನ್ನು ಹಿಡಿದು ಅದಕ್ಕೆ ಒಂದೇ ಸಮನೆ ತೊಂದರೆ ಕೊಡುತ್ತ ಅದರ ಮೇಲೆ ಕುಳಿತು ಸವಾರಿ ಮಾಡಿ ದೊಡ್ಡ ಬೆಟ್ಟವನ್ನೇ ಎತ್ತಿದಂಥ ಸಾಹಸ ಮಾಡಿ ತೋರಿಸುತ್ತಿದ್ದನು. ಕುರಿಯು ಈತನು ಮಾಡಿದ ಚೇಷ್ಟೆ ಸಹಿಸಿಕೊಂಡು ಆಗಲೇ ಕೆಲವೇ ಕ್ಷಣಗಳಲ್ಲಿ ಆತನಿಗೆ ತಕ್ಕ ಪಾಠ ಕಲಿಸಿದೆ. ವ್ಯಕ್ತಿಯು ಕುರಿಯ ಮೇಲೆ ಸವಾರಿ ಮಾಡಿ ಇಳಿದ ನಂತರ ಆತನ ಮೇಲೆ ಸರಿಯಾಗಿ ಕಣ್ಣಿಟ್ಟು ವಾಚ್ ಮಾಡಿ, ಅವನು ತನ್ನ ಕಡೆಗೆ ಬೆನ್ನು ಮಾಡಿ ಮುಂದೆ ಹೊರಟಾಗ ಆತನ ಮೇಲೆ ಹಿಂದಿನಿಂದ ಹಠಾತ್ ಎರಗಿ ತಲೆಯಿಂದ ದಾಳಿ ಮಾಡಿ ಕೆಳಗೆ ಮುಗ್ಗರಿಸಿ ಕೆಡವಿದೆ. ನಿಜಕ್ಕೂ ಪ್ರಾಣಿಯ ರಿಯಾಕ್ಷನ್ ನೋಡುವ ಹಾಗಿದೆ.

ವಿಡಿಯೋ ನೋಡಿ….

ಸೂಪರ ಅಲ್ವಾ ವೀಡಿಯೊ. ತನಗೆ ತೊಂದರೆ ಕೊಟ್ಟ ವ್ಯಕ್ತಿಯಿಂದ ಕುರಿ ಸರಿಯಾಗಿ ತನ್ನ ಸೇಡನ್ನು ತೀರಿಸಿಕೊಂಡಿದೆ. ಶೇರ್ ಮಾಡಿದ ಸುಶಾಂತ್ ಸರ್ ಅವರು ಈ ವೀಡಿಯೋಗೆ ಕ್ಯಾಪ್ಶನ್ ಸಹಿತ ತುಂಬಾ ಚೆನ್ನಾಗಿ ಕೊಟ್ಟಿದ್ದಾರೆ, ‘ರೀಟರ್ನ್ ಗಿಫ್ಟ್’ ಅಂತ.

ಯೂಸರ್ ಗಳಿಗೂ ಈ ವಿಡಿಯೋ ತುಂಬಾ ಹಿಡಿಸಿದೆ. ನೋಡಿ ಕೆಲವರು ಹೇಗೆ ರಿಯಾಕ್ಟ್ ಮಾಡಿದ್ದಾರೆ!