ಕೂದಲೆಳೆಯಷ್ಟೂ Edit ಮಾಡದ, ನಿಮ್ಮ ಮೆದುಳಿಗೆ ಹುಚ್ಚು ಹಿಡಿಸುವ ಫುಲ್ ಕನ್ಫ್ಯೂಸ್ ಮಾಡುವ 10 ಫೋಟೋಗಳು!
ಎದುರಿಗೆ ಕಾಣುವ ಕೆಲವು ದೃಶ್ಯಗಳು ಅಥವಾ ಫೋಟೋಗಳೆಲ್ಲವೂ ಸರಿಯಾಗಿಯೇ ಇದ್ದರೂ ನೋಡುಗರಿಗೆ ಕೆಲವೊಮ್ಮೆ ತುಂಬಾ ಗಳಿಬಿಲಿಗೊಳಿಸುತ್ತವೆ. ಇದೇನಿದೆ ಎಂಬುದನ್ನು ನಿರ್ಧಿಷ್ಟವಾಗಿ ತಿಳಿದುಕೊಳ್ಳಲು ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳಬೇಕಾಗುತ್ತದೆ. ಅಂದಾಗ ಮಾತ್ರ ಕಣ್ಣಿಗೆ ಕಾಣುವ ಚಿತ್ರ ಅಥವಾ ದೃಶ್ಯ ಸ್ಪಷ್ಟವಾಗುತ್ತದೆ. ಆದರೆ ಅದನ್ನು ತಿಳಿದುಕೊಳ್ಳುವವರೆಗೂ ನೋಡುಗನ ತಲೆ ಮೊಸರು ಗಡಿಗೆಯೇ ಆಗಿರುತ್ತದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿಯ 10 ಫುಲ್ ಕನ್ಫ್ಯೂಸ್ ಮಾಡುವ ಅದ್ಭುತ ಫೋಟೋಗಳನ್ನು ನಿಮಗಾಗಿ ತಂದಿದ್ದೇವೆ. ಈ ಫೋಟೋಗಳು ತುಂಬಾ ಗೊಂದಲಮಯವಾಗಿದೆ. ಪ್ರತಿಯೊಂದು ಫೋಟೋ ತಿಳಿದುಕೊಳ್ಳಲು ನಿಮಗೆ ಸಾಕಷ್ಟು ಸಮಯ ಬೇಕಾಗುವುದು.
ನೋಡಿ ಸಖತ್ ಕನ್ಫ್ಯೂಸ್ ಮಾಡುವ ಈ 10 ಫೋಟೋಗಳು…
1. ಮುಖದ ಮೇಲೆ ಭಲ್ಲೆಯ ನೆರಳು ಬಿದ್ದಿದೆ.

2. ಮಹಿಳೆಯ ಸೊಂಟದ ಕೆಳಗೆ ಎರಡು ಬಾಂಡ್ಲೆ ತಲೆಗಳು ಬೇರೆಯೇ ಚಿತ್ರ ಸೃಷ್ಟಿ ಮಾಡಿವೆ.

3. ಹುಡುಗಿಯು ಕೈಯಲ್ಲಿ ಪಾಪ್ಕಾರ್ನ್ ತುಂಬಿದ ಪಾಲಿಥಿನ್ ಬ್ಯಾಗ್ ಹಿಡಿದಿದ್ದಾಳೆ.

4. ಆಕಾಶದಲ್ಲಿ ಅಲ್ಲ ಬದಿಗಿರುವ ಸಮುದ್ರದಲ್ಲಿ ಬೋಟ್ ಗಳು ನಿಂತಿವೆ.

5. ವ್ಯಕ್ತಿ ತೊಟ್ಟುಕೊಂಡ ಸಾಕ್ಸ್ ಡಿಸೈನ್ ಮತ್ತು ಫ್ಲೋರ್ ಮ್ಯಾಟ್ ಡಿಸೈನ್ ಒಂದೇ ಆಗಿದೆ.

6. ಸರೋವರದಲ್ಲಿ ನಿಂತ ನೀರಿನಲ್ಲಿ ಆಕಾಶದ ಪ್ರತಿಬಿಂಬ ಕಾಣುತ್ತಿದೆ.

7. ಡಸ್ಟ್ ಬಿನ್ ನೆಲದ ಮೇಲೆಯೇ ಇದೆ. ಅದರ ಬದಿಗಿರುವ ಕಲೆಯಿಂದಾಗಿ ಅದು ಯಾವುದೇ ಆಧಾರವಿಲ್ಲದೆ ಅವಕಾಶದಲ್ಲಿಯೇ ನಿಂತ ಹಾಗೆ ಕಾಣುತ್ತದೆ.

8. ಕಾರು ಸಹ ನೆಲದ ಮೇಲೆಯೇ ಪಾರ್ಕ್ ಮಾಡಲಾಗಿದೆ. ಅದರ ಬದಿಗೆ ಬಿದ್ದ ನೆರಳಿನಿಂದಾಗಿ ಕಾರು ನೆಲಕ್ಕೆ ಟಚ್ ಆಗದೆ ಮೇಲೆಯೇ ನಿಂತಿದೆ ಎಂಬಂತೆ ಭಾಸವಾಗುತ್ತಿದೆ.

9. ದೊಡ್ಡದಾದ ಪಿಲ್ಲರ್ ಹಿಂದೆ ಎರಡು ಹಸುಗಳು ನಿಂತಿವೆ. ಆದರಿಲ್ಲಿ ಉದ್ದನೆಯ ಒಂದೇ ಒಂದು ಹಸು ನಿಂತಂತೆ ಕಾಣುತ್ತಿದೆ.

10. ಈ ಚಿತ್ರ ಸರಿಯಾಗಿ ಗಮನಿಸಿ. ಮಕ್ಕಳ ತಾಯಿ ಅಲ್ಲಿಯೇ ವಾಲಿದ್ದಾಳೆ. ತಂದೆ ಮತ್ತು ತಾಯಿಯ ಡ್ರೆಸ್ ಒಂದೇ ಬಣ್ಣದ್ದಾಗಿದ್ದರಿಂದ ಹೀಗೆ ಕಾಣುತ್ತಿದೆ.
