ಕೆಲಸ ಹೋದ್ರೂ ಹೆದರಬೇಡಿ! ಮೋದಿ ಸರಕಾರದ ಈ ಯೋಜನೆಯಿಂದ 2 ವರ್ಷಗಳ ವರೆಗೆ ಸಂಬಳ ಗ್ಯಾರಂಟಿ ಸಿಗುವುದು! ಹಾಗಾದರೆ ಏನಿದೆ ಈ ಸ್ಕೀಮ್ ತಿಳ್ಕೊಳ್ಳಿ
ನವದೆಹಲಿ: ಕೊರೊನ ಕಾರಣದಿಂದ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಕಾರಣವನ್ನು ಮುಂದಿಟ್ಟುಕೊಂಡು ಅನೇಕ ಕಂಪನಿಗಳು ತಮ್ಮ ಕಾರ್ಮಿಕರನ್ನು ವಜಾಗೊಳಿಸುತ್ತಿದೆ ಇಲ್ಲ ಕೊಡುವ ಸಂಬಳದಲ್ಲಿ ಕಡಿತಮಾಡುತ್ತಿದೆ. ಆದ್ದರಿಂದ ನಿಮ್ಮ ಮುಂದೆಯೂ ಇಂಥ ಸಮಸ್ಯೆಗಳು ಉದ್ಭವಿಸುತ್ತಿದ್ದರೆ ಈ ಸುದ್ದಿ ನಿಮಗಾಗಿಯೇ ಇದೆ. ಎರಡು ವರ್ಷಗಳ ವರೆಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ “ಅಟಲ್ ಬೀಮಿತ್ ಕಲ್ಯಾಣ ಯೋಜನೆ” ಯನ್ನು ಪ್ರಾರಂಭಿಸಿದೆ.
ಈ ಯೋಜನೆಯ ಅಡಿಯಲ್ಲಿ ನೌಕರಿ ಕಳೆದುಕೊಂಡನಂತರ ಸರಕಾರ ಸಂಬಂಧಿತ ವ್ಯಕ್ತಿಗೆ ಎರಡು ವರ್ಷಗಳವರೆಗೆ ಆರ್ಥಿಕ ಸಹಾಯ ಮಾಡುತ್ತದೆ. ಈ ಸಹಾಯ ಪ್ರತಿ ತಿಂಗಳು ಮಾಡಲಾಗುತ್ತದೆ. ನಿರುದ್ಯೋಗ ವ್ಯಕ್ತಿಗೆ ಈ ಲಾಭ ಆತನ ಹಿಂದಿನ 90 ದಿನಗಳ ಸರಾಸರಿ ಸಂಬಳದ 25 ಪ್ರತಿಶತದ ವರೆಗೆ ಕೊಡಲಾಗುವದು. ಈ ಲಾಭ ಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ದೊರೆಯುವದು, ಮಾತ್ರ ಅವರು ESIC ಇನ್ಸ್ಯೂರನ್ಸ್ ಹೊಂದಿದವರಾಗಿರಬೇಕು, ಜೊತೆಗೆ 24 ತಿಂಗಳು ಸೇವೆ ಸಲ್ಲಿಸಿದವರಾಗಿರಬೇಕು. ಇನ್ನು ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಜೋಡಣೆಯಾಗಿರಬೇಕು.

ಒಂದು ವೇಳೆ ನೀವೂ ಸಹ ಈ ಲಾಭ ಪಡೆದುಕೊಳ್ಳಬೇಕಾದರೆ ಮೊದಲು ESIC ವೆಬ್ ಸೈಟಿಗೆ ಹೋಗಿ ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆಯ ಸಲುವಾಗಿ ರಜಿಸ್ಟ್ರೇಷನ್ ಮಾಡಬೇಕಾಗುತ್ತದೆ.ಈ ಯೋಜನೆಯ ಬಗ್ಗೆ ವಿಸ್ತಾರವಾದ ಮಾಹಿತಿ ಈ ಕೆಳಗಿನ ಲಿಂಕ್ ನಲ್ಲಿ ದೊರೆಯುವದು;
https://www.esic.nic.in/attachments/circularfile/93e904d2e3084d65fdf7793e9098d125.
ಯಾರಿಗೆ ತಪ್ಪು ನಡುವಳಿಕೆಯ ಕಾರಣ, ಕಂಪನಿ ನೌಕರಿಯಿಂದ ತೆಗೆದು ಹಾಕಿದೆ ಅವರಿಗೆ ಮತ್ತು ಅಪರಾಧದ ಶಂಕೆಯಿಂದ ಕೋರ್ಟ್ ನಲ್ಲಿ ಕೇಸ್ ದಾಖಲಾಗಿದೆ ಹಾಗೂ ಯಾರು ಸ್ವಯಂ ನಿವೃತ್ತ (VRS)ಘೋಷಿಸಿದ್ದಾರೆ ಅವರಿಗೆ ಈ ಲಾಭ ದೊರೆಯುವದಿಲ್ಲ