ಕೆಸರಿನ ಹೊಂಡದಲ್ಲಿ ಕ್ಯಾಟ್ ಫಿಶ್ ಹಿಡಿಯುವುದನ್ನು ಕಲಿತ ಚಿರತೆ: 2 ಕೋಟಿ 70 ಲಕ್ಷ ಜನರು ನೋಡಿದ ವೈರಲ್ ವಿಡಿಯೋ

ನಾವು ವನ್ಯ ಜೀವಿಗಳ ಜೀವನದ ಕುರಿತಾಗಿ ಇರುವ ಬೇಕಾದಷ್ಟು ವೀಡಿಯೋಗಳನ್ನು ನೋಡಿದ್ದೇವೆ. ಸಾಮಾನ್ಯವಾಗಿ ಈ ವೀಡಿಯೋಗಳಲ್ಲಿ ಪ್ರಾಣಿಗಳು ಬೇ ಟೆ ಯಾಡುವ, ಅವು ಏನಾದರೂ ವಿಶೇಷ ಎನಿಸುವ ಚಟುವಟಿಕೆಗಳನ್ನು ಮಾಡಿರುವಂತಹ ವಿಶೇಷವಾದುದೇನಾದರೂ ಇರುವ ವೀಡಿಯೋಗಳಾಗಿರುತ್ತವೆ. ಆದರೆ ಇವೆಲ್ಲವುಗಳ ನಡುವೆಯೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವೀಡಿಯೋ ನೋಡಿದರೆ ನಿಜಕ್ಕೂ ವನ್ಯ ಜೀವಿಗಳ ಜೀವನ ಹೇಗೆ ಒಂದರ ಜೊತೆಗೆ ಇನ್ನೊಂದು ಬೆಸೆದಿದೆ, ಕೇವಲ ಆಹಾರಕ್ಕಾಗಿ ಬೇ ಟೆ ಯಾಡುವುದು ಮಾತ್ರವೇ ಅಲ್ಲದೇ ಅವು ತಮ್ಮ ಜೀವನದ ಮೂಲಕ ಇತರೆ ಜೀವಿಗಳಿಗೆ ಜೀವನ ಪಾಠವನ್ನು ಕೂಡಾ ಹೇಳಿ ಕೊಡುತ್ತವೆ ಎನ್ನುವುದನ್ನು ತೋರಿಸುತ್ತಿದೆ ಈ ವೀಡಿಯೋ.

ಎರಡು ಕೋಟಿಗಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿರುವ ಈ ವೀಡಿಯೋದಲ್ಲಿ ವಿಶೇಷತೆ ಏನೆಂದರೆ ಕ ಠಿ ಣ ಪರಿಸರದಲ್ಲಿ, ಕೆಸರಿನಂತಹ ಮಣ್ಣಿನಲ್ಲಿ ಅಡಗಿರುವ ತನ್ನ ಬೇ ಟೆಯನ್ನು ಹಿಡಿಯುವುದನ್ನು ಚಿರತೆ ಹೇಗೆ ಕಲಿಯುತ್ತದೆ ಹಾಗೂ ಚಿರತೆಗೆ ಅದನ್ನು ಕಲಿಸಿದವರಾರು ಎನ್ನುವುದೇ ಈ ಸುಂದರವಾದ ವೀಡಿಯೋದ ಸಾರವಾಗಿದೆ‌. ತನ್ನೆರಡು ಮರಿಗಳೊಂದಿಗೆ ನೀರಿನ ತೊರೆಯ ಬಳಿ ಬಂದ ಚಿರತೆಯು ಹೇಗೆ ಮೀನನ್ನು ಹಿಡಿಯುವ ಪ್ರಯತ್ನ ಮಾಡಿತು ಎನ್ನುವುದು ಕ್ಷಣಕ್ಷಣಕ್ಕೂ ಒಂದು ರೋಚಕತೆ ಹಾಗೂ ಆಸಕ್ತಿಯನ್ನು ನಮ್ಮಲ್ಲಿ ಕೆರಳಿಸುತ್ತದೆ. ಅಲ್ಲದೇ ಪ್ರಕೃತಿಯು ಕಲಿಸುವ ಅಂದವಾದ ಪಾಠದ ಬಗ್ಗೆ ಕೂಡಾ ತಿಳಿಯುತ್ತದೆ.

ವೈರಲ್ ವೀಡಿಯೋದಲ್ಲಿ ಒಂದು ನೀರಿನ ತೊರೆಯನ್ನು ನೋಡಬಹುದು. ಕಾಡು ಹಂದಿಯೊಂದು ಕೆಸರಿನಂತಹ ನೀರಿನಿಂದ ಹೊರ ಬರುತ್ತಿದೆ, ತೊರೆಯ ಬಳಿ ಕೊಕ್ಕರೆಗಳ ಒಂದು ದಂಡು ಮೀನಿನ ಬೇ ಟೆಯನ್ನಾಡಲು ಸಜ್ಜಾಗಿವೆ‌. ಕೆಸರಿನ ಆ ನೀರಿನೊಳಗೆ ಅಡಗಿರುವ ಕ್ಯಾಟ್ ಫಿಶ್ ಗಳ ಹೊರಳಾಟ, ಅವು ಉಸಿರಾಡಿದಾಗ ನೀರಿನ ಮೇಲೆ ನೀರ್ಗುಳ್ಳೆಗಳು ಏಳುತ್ತಿವೆ. ಆಗ ಅಲ್ಲಿಗೆ ಚಿರತೆಯೊಂದು ಬಂದು ತೊರೆಯ ದಡದಲ್ಲಿ ನಡೆಯುತ್ತಾ ನೀರಿನೊಳಗಿರುವ ಮೀನುಗಳನ್ನು ಹಿಡಿಯುವ ಆಲೋಚನೆಯೊಂದಿಗೆ, ನೀರಿನ ಮೇಲೆ ಬಿದ್ದ ಒಂದು ಮರದ ಕೊಂಬೆಯ ಮೇಲೆ ಕುಳಿತು ಮೀನುಗಳನ್ನು ನೋಡುತ್ತದೆ.

ಆದರೆ ಕ್ಯಾಟ್ ಫಿಶ್ ಅನ್ನು ಸರಿಯಾಗಿ ನೋಡದ ಕಾರಣವೋ, ಅದೇನೋ ಬೇರೆ ಜೀವಿಯೋ ಏನೋ ಎನ್ನುವಂತೆ ಸ್ವಲ್ಪ ಹೊತ್ತು ಕಾದ ಚಿರತೆ ಮೀನು ಹಿಡಿಯದೆ , ಭ ಯದಿಂದ ಅಲ್ಲಿಂದ ಎದ್ದು ಹೋಗುವಾಗಲೇ ಅಲ್ಲಿಗೆ ಬಂದ ಆನೆಯೊಂದು ಸೊಂಡಿಲಿನಿಂದ ಅಲ್ಲಿದ್ದ ನೀರನ್ನು ಸೊಂಡಿಲಿನಿಂದ ಎತ್ತಿಕೊಂಡು ಗಾಳಿಯಲ್ಲಿ ಹಾರಿಸುತ್ತದೆ. ಆಗ ಅಲ್ಲಿರುವ ಮೀನುಗಳು ಚಿರತೆಗೆ ಸರಿಯಾಗಿ ಕಾಣುತ್ತದೆ. ಚಿರತೆಗೆ ತನ್ನ ಅನುಮಾನಕ್ಕೆ ಉತ್ತರ ಸಿಕ್ಕಂತಾಗಿ, ಆನೆಯು ಅಲ್ಲಿಂದ ಹೋದ ಕೂಡಲೇ ಚಿರತೆ ಮತ್ತೆ ಆ ನೀರಿನ ಹೊಂಡದ ಬಳಿ ಬಂದು, ಹೊಂಚು ಹಾಕಿ ಮೀನನ್ನು ಹಿಡಿಯುತ್ತದೆ. ಆದರೆ ಕೆಸರಿನಲ್ಲಿದ್ದ ಕಾರಣ ಮೀನು ಜಾರಿ ಹೋಗುವುದರಿಂದ, ಸ್ವಲ್ಪ ಕಷ್ಟವಾಗುತ್ತದೆ. ಅನಂತರ ಹಲ್ಲಿನಿಂದ ಗಟ್ಟಿಯಾಗಿ ಕಚ್ಚಿಕೊಂಡು, ಗುರಿ ಸಾಧಿಸಿದ ಗತ್ತಿನಿಂದ ಹೋಗುತ್ತದೆ.

ವಿಡಿಯೋ ನೋಡಿ

ಈ ವೀಡಿಯೋಗೆ ವೈವಿದ್ಯಮಯವಾದ ಸಾವಿರಾರು ಪ್ರತಿಕ್ರಿಯೆಗಳು ಹರಿದು ಬಂದಿವೆ. ಅನೇಕ ಮಂದಿ ಚಿರತೆಯ ಮೀನು ಹಿಡಿಯುವ ವೀಡಿಯೋ ಅದ್ಭುತ ಎನಿಸಿದೆ. ಕೆಲವರು ಹಾಸ್ಯ ಮಾಡುತ್ತಾ ಚಿರತೆಯ ಕಾಲುಗಳನ್ನು ತೊಳೆಯಬೇಕು ಕೆಸರಿನಲ್ಲಿ ಕಾಲಿಟ್ಟು ಗಲೀಜಾಗಿದೆ ಎಂದರೆ, ಕೆಲವರು ಕೆಸರಿನ ನೀರಿನ ಸೊಂಡಲಿನಲ್ಲಿ ಊದಿದ ಆನೆಗೆ ಮೊದಲು ಹಲ್ಲುಜ್ಜಿಸಿ ಬಾಯಿ ತೊಳೆಸಬೇಕು ಎಂದು ಕೂಡಾ ಕಾಮೆಂಟ್ ಮಾಡಿದ್ದಾರೆ. ಕೆಲವರು ಚಿರತೆಗೆ ಆನೆ ಮಾಡಿದ ಸಹಾಯವನ್ನು ಹೊಗಳಿದರೆ, ಕೆಲವರು ಕೊಕ್ಕರೆಗಳ ಮುಖ ಮಂಕಾಯಿತು ಪಾಪ ಎಂದು ಕನಿಕರ ತೋರಿದ್ದಾರೆ.