ಕೆ ಎಲ್ ರಾಹುಲ್ ಅಫೇಯರ್ ಯಾರೊಂದಿಗೆ ಇದೆ ಗೊತ್ತಾ? ತಿಳಿದುಕೊಳ್ಳಿ!
ಕ್ರಿಕೆಟ್ ಜಗತ್ತಿನಲ್ಲಿಯ ಒಂದು ವಿಷಯ ನಮಗೆಲ್ಲ ಅನೇಕ ಸಲ ಗಮನಕ್ಕೆ ಬಂದಿದೆ. ಏನೆಂದರೆ ಕ್ರಿಕೆಟ್ ನ ಯಾವುದೇ ಆಟಗಾರ ಬಾಲಿವುಡ್ ಜೊತೆಗೆ ಸಂಬಂಧ ಹೊಂದಿರುವದು ತುಂಬಾ ಹಳೆಯ ಸಂಗತಿಯಾಗಿದೆ. ಈ ಸಂಪ್ರದಾಯದ ಪ್ರಕಾರ ಸದ್ಯಕ್ಕೆ ತುಂಬಾ ಹಿಟ್ ಬ್ಯಾಟ್ಸ್ಮನ್ ಎಂದು ಪ್ರಖ್ಯಾತ ಪಡೆದುಕೊಂಡಿರುವ ಕೆ ಎಲ್ ರಾಹುಲ್ ಅವರು ಸಹ ಬಾಲಿವುಡ್ ನ ಒಬ್ಬ ದಿಗ್ಗಜ ನಟನ ಮಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಹೌದು ಕೆ ಎಲ್ ರಾಹುಲ ಅವರು ಬಾಲಿವುಡ್ ನ ಪ್ರಖ್ಯಾತ ನಟ ಸುನಿಲ್ ಶೆಟ್ಟಿ ಯವರ ಮಗಳಾದ ಅಥಿಯಾ ಶೆಟ್ಟಿಯವರೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಇಬ್ಬರು ಸಹ ಒಬ್ಬರಿಗೊಬ್ಬರು ತುಂಬಾ ಪ್ರೀತಿಸುತ್ತಿದ್ದಾರೆ.
ಅಷ್ಟೇ ಅಲ್ಲ ಎಷ್ಟೋ ಸಲ ಇಬ್ಬರು ಡೇಟಿಂಗ್ ಮಾಡುವ ಸಮಯದಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಅನೇಕ ಸಲ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಇಬ್ಬರ ಫೋಟೋ ಸಹ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಪೋಟೋಗಳನ್ನು ನೋಡಿ ಕೆ ಎಲ್ ರಾಹುಲ್ ಅಭಿಮಾನಿಗಳು ಇವರ ನಡುವಿನ ಸಂಬಂಧದ ಕುರಿತು ಮಾತನಾಡುವದನ್ನು ಸಹ ಕಂಡು ಬಂದಿದೆ. ಆದರೆ ಇಬ್ಬರು ತಮ್ಮ ನಡುವೇ ಇರುವ ಸಂಬಂಧದ ಕುರಿತು ಸ್ಪಷ್ಟವಾಗಿ ಹೇಳಿಲ್ಲ.

ಆದರೆ ಈಗ ಸುನಿಲ್ ಶೆಟ್ಟಿ ಮಗಳಾದ ಅಥಿಯಾ ಶೆಟ್ಟಿ ಯವರು ತಮ್ಮ ನಡುವಿನ ಸಂಬಂಧದ ಕುರಿತು ಕೆಲವು ಬಹಿರಂಗ ಪಡಿಸಿ ನಾನು ಕೆಎಲ್ ರಾಹುಲ್ ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ. ಕೆಲವು ದಿವಸಗಳ ಹಿಂದೆ ಅಥಿಯಾ ಶೆಟ್ಟಿಯವರ ಜನ್ಮದಿನ ವಿತ್ತು ಈ ಕಾರಣಕ್ಕಾಗಿ ರಾಹಲ್ ಅವರು ಇನ್ಸ್ಟಾಗ್ರಾಮ್ ಮೂಲಕ ಶುಭಾಶಯಗಳು ಕೋರಿದ್ದಾರೆ. ಅಷ್ಟೇ ಅಲ್ಲ ಕೆ ಎಲ್ ರಾಹುಲ್ ಅವರು ಅಥಿಯಾ ಜನ್ಮದಿನದಂದು ಅಥಿಯಾ ಅವರ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಅಥಿಯಾ ಮತ್ತು ರಾಹುಲ್ ಸಂಬಂಧ ಸ್ಪಷ್ಟವಾಗಿ ಕಂಡು ಬರುತ್ತಿದೆ.
ಒಂದೆಡೆ ಫೋಟೋ ಶೇರ್ ಮಾಡಿದ್ದರಿಂದ ಇಬ್ಬರ ನಡುವಿನ ಸಂಬಂಧ ಎಲ್ಲರಿಗೂ ತಿಳಿಯುತ್ತಿದ್ದಂತೆ ಮತ್ತೊಂದೆಡೆ ಅಥಿಯಾ ಸ್ವತಃ ತಮ್ಮಿಬ್ಬರ ನಡುವೇ ಪ್ರೀತಿ ಇದೆ ಎಂದು ಎಲ್ಲರೆದುರಿಗೆ ಒಪ್ಪಿಕೊಂಡಿದ್ದಾರೆ. ಇದನ್ನು ಕಂಡು ಭಾರತದ ಎಷ್ಟೋ ಅಭಿಮಾನಿಗಳು ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಇಬ್ಬರಿಗೆ ಪ್ರೇಮದ ಮಳೆಯೇ ಸುರಿಸುತ್ತಿದ್ದಾರೆ. ಸದ್ಯಕ್ಕೆ ಅಥಿಯಾ ಅವರ ಜನ್ಮದಿನದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಮತ್ತು ಇಬ್ಬರಿಗೂ ಸಹ ಅಭಿಮಾನಿಗಳ ಕಡೆಯಿಂದ ಪ್ರೀತಿಯ ಹಾರೈಕೆಗಳು ಬರುತ್ತಿವೆ.
ಕೆಲವು ವರ್ಷಗಳ ಹಿಂದೆ ರಾಹುಲ್ ಮತ್ತು ಆಸಿಯಾ ಭೇಟಿಯಾಗಿದ್ದರು. ಮೊದಮೊದಲು ಒಬ್ಬರಿಗೊಬ್ಬರು ಅಷ್ಟಾಗಿ ಪರಿಚಯವಿಲ್ಲದಿದ್ದರೂ ನಂತರ ಒಳ್ಳೆಯ ಗೆಳೆಯರಾದರು. ತದನಂತರ ಈ ಸ್ನೇಹ ಪ್ರೀತಿಯಲ್ಲಿ ರೂಪಾಂತರಗೊಂಡಿತು. ಇದೀಗ ಎಲ್ಲರ ಮುಂದೆ ತಮ್ಮ ಪ್ರೀತಿಯನ್ನು ಸ್ಪಷ್ಟ ಪಡಿಸಿದ್ದಾರೆ.