ಕೈರನ್ ಪೊಲಾರ್ಡ್ ಮನೆಗೆ ಹೋಗಿ ಫ್ಯಾಮಿಲಿ ಪಿಕ್ ನಲ್ಲಿ ಶಾಮಿಲಾದರು ಹಾರ್ದಿಕ! ಒಂದೇ ಕುಟುಂಬದವರಂತೆ ಕಾಣುತ್ತಿದ್ದಾರೆಂದರು ನೇಟಿಜನ್ಸ್…

ಹಾರ್ದಿಕ್ ಪಾಂಡ್ಯ ಮತ್ತು ಕೈರನ್ ಪೊಲಾರ್ಡ್ ಇಬ್ಬರ ಗಾಢವಾದ ಗೆಳೆತನ ಎಲ್ಲರಿಗೂ ಗೊತ್ತೇ ಇದೆ. ಇವರಿಬ್ಬರೂ ಒಬ್ಬರಿಗೊಬ್ಬರು ಸಹೋದರರೆಂದು ತಿಳಿದುಕೊಳ್ಳುತ್ತಾರೆ. ಇದೇ ಕಾರಣದಿಂದ ಹಾರ್ದಿಕ್ ಪಾಂಡ್ಯ ಅವರು ಕೈರನ್ ಪೋಲಾರ್ಡ್ ಅವರ ಜೊತೆ ಮನೆಗೆ ಹೋಗಿದ್ದರು. ಹಾರ್ದಿಕ್ ಪಾಂಡ್ಯ ಅವರು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಇವುಗಳನ್ನು ನೋಡಿದ ತಕ್ಷಣ ಫ್ಯಾನ್ಸ್ ವರ್ಗ ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ತಮ್ಮ ಫೋಟೋಗಳನ್ನು ಶೇರ್ ಮಾಡಿ ಹಾರ್ದಿಕ್ ಪಾಂಡ್ಯ ಅವರು ಕ್ಯಾಪ್ಷನ್ ನಲ್ಲಿ, ಕೆರೆಬಿಯನ್ ನ ಯಾವುದೇ ಪ್ರವಾಸ ಕಿಂಗ್ ನ ಮನೆಗೆ ಹೋಗದೆ ಪೂರ್ಣವಾಗುವುದಿಲ್ಲ, ಪಾಲಿ ನನ್ನ ಸಹೋದರ ನಿನ್ನ ಕುಟುಂಬದವರು ಔತಣ ಕೂಟ ಏರ್ಪಡಿಸಿದ್ದಕ್ಕೆ ಧನ್ಯವಾದಗಳು, ಎಂದಿದ್ದಾರೆ.

ಹಾರ್ದಿಕ್ ಪಾಂಡ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಅಪ್ಲೋಡ್ ಮಾಡುತ್ತಲೇ ವೈರಲ್ ಆಗಲು ಶುರುವಾದವು. ಫೋಟೋಗಳನ್ನು ನೋಡಿದ ನಂತರ ಕ್ರಿಕೆಟ್ ಅಭಿಮಾನಿಗಳು ತರತರದ ಕಮೆಂಟ್ಗಳನ್ನು ಮಾಡಲು ಶುರು ಮಾಡಿದ್ದಾರೆ. ಅದರಲ್ಲಿ ಒಬ್ಬನು ‘BY the way’ ಇದು ನಿಮ್ಮ ಅಸಲಿ ಕುಟುಂಬದಂತೆ ಕಾಣುತ್ತಿದೆ ಎಂದಿದ್ದಾನೆ. ಇನ್ನೊಬ್ಬ ಯೂಸರ್ ನೀವು ಅವರ ಕುಟುಂಬದ ಸದಸ್ಯರಂತೆಯೇ ಕಾಣುತ್ತಿದ್ದೀರಿ ಎಂದಿದ್ದಾನೆ.

ಸದ್ಯ ಭಾರತ ವೆಸ್ಟ್ ಇಂಡೀಸ್ ನಲ್ಲಿ ಹೋಗಿ ಟಿ 20 ಹಾಗೂ ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಪ್ರಸ್ತುತ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.