ಕೊನೆಗೂ ರೈತರಿಗೆ ಶರಣಾದ ಸರಕಾರ, ಆ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ ಮೋದಿ ಸರಕಾರ! ವಿಡಿಯೋ ನೋಡಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಮಹತ್ವದ ಘೋಷಣೆ ಮಾಡಿದ್ದಾರೆ. ಗುರುನಾನಕ್ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದರು. ರೈತರು ವಿರೋಧಿಸುತ್ತಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಧರಣಿ ನಿಂತ ರೈತರು ಮನೆಗಳಿಗೆ ತೆರಳಿ, ಹೊಲಗದ್ದೆಗಳಿಗೆ ತೆರಳಿ ಕೆಲಸ ಆರಂಭಿಸಿ, ನಿಮ್ಮ ಕುಟುಂಬದವರೊಂದಿಗೆ ಬೆರೆತು ಒಂದು ಹೊಸ ಅಧ್ಯಾಯ ಆರಂಭಿಸುವಂತೆ ಮೋದಿಯವರು ಮನವಿ ಮಾಡಿದ್ದಾರೆ.
ರೈತರ ಹಿತದೃಷ್ಟಿಯಿಂದ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತರಲಾಯಿತು. ಅದಕ್ಕಾಗಿ ನಾವು ತಜ್ಞರೊಂದಿಗೆ ಚರ್ಚಿಸಿದ್ದೇವೆ. ಸಂಸತ್ತಿನಲ್ಲಿ ಚರ್ಚೆಯಾಗಿದೆ. ಆದರೆ, ಕೆಲವು ರೈತರ ಒಂದು ಗುಂಪು ಈ ಕಾನೂನನ್ನು ವಿ#ರೋಧಿಸಿತು. ನಾವು ಅವರೊಂದಿಗೆ ಈ ಕಾಯ್ದೆಯ ಕುರಿತು ವಿವಿಧ ಚರ್ಚೆ ಮಾಡಲಾಯಿತು, ಇದಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ಅವರಿಗೆ ತಿಳಿಸಲು ಪ್ರಯತ್ನ ಮಾಡಿದೆವು, ಅವರ ವಿರೋಧವನ್ನು ಅರ್ಥಮಾಡಿಕೊಂಡೆವು, ಅವರು ಬದಲಾವಣೆ ಮಾಡುವ ಇಚ್ಛೆಯನ್ನು ವ್ಯಕ್ತ ಪಡಿಸಿದರು. ಅಲ್ಲದೆ ಅವರು ಸುಮಾರು ಎರಡು ವರ್ಷಗಳ ಕಾಲ ಕಾನೂನನ್ನು ರದ್ದುಗೊಳಿಸಲು ಪ್ರಸ್ತಾಪಿಸಿದರು. ಆದರೆ, ಅವರ ವಿರೋ#ಧ ಮಾತ್ರ ಮುಂದುವರಿಯುತ್ತಲೇ ಇದೆ. ಇಂದು ಗುರುನಾನಕ್ ಅವರ ಜನ್ಮದಿನ. ಅದೊಂದು ಪವಿತ್ರ ದಿನ. ನಾನು ಯಾರನ್ನೂ ದೂ#ಷಿಸಲು ಬಯಸುವುದಿಲ್ಲ. ಬಹುಶಃ ನಮ್ಮ ತಪಸ್ಸಿನಲ್ಲಿ ಏನಾದರೂ ಕೊರತೆ ಆಗಿರಬಹುದು, ಅದಕ್ಕಾಗಿಯೇ ನಾವು ಆ ರೈತರನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿಯೇ ಇಂದು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೋದಿ ಹೇಳಿದರು.
Addressing the nation. https://t.co/daWYidw609
— Narendra Modi (@narendramodi) November 19, 2021
ರೈತರ ಸಬಲೀಕರಣಕ್ಕಾಗಿ ದೇಶದಲ್ಲಿ ಮೂರು ಕೃಷಿ ಕಾನೂನುಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಪರಿಚಯಿಸಿಲಾಯಿತು. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವುದು ಮತ್ತು ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳನ್ನು ನೀಡುವುದು ಇದರ ಉದ್ದೇಶವಾಗಿತ್ತು. ಹಲವಾರು ವರ್ಷಗಳಿಂದ ಈ ಕುರಿತು ಅನೇಕರು ಬೇಡಿಕೆ ನೀಡಿದ್ದರು. ಈ ಹಿಂದೆಯೂ ಸಹ ಸರ್ಕಾರ ಈ ವಿಷಯದ ಕುರಿತು ಹಲವಾರು ಬಾರಿ ವಿಚಾರ ಮಾಡಲಾಗಿತ್ತು. ಈ ಬಾರಿಯೂ ಸಹ ತುಂಬಾ ವಿಚಾರ ಮಾಡಿ ಈ ಕಾಯ್ದೆಗಳನ್ನು ಜಾರಿಯಲ್ಲಿ ತಂದಿತ್ತು. ಆದರೆ ದೇಶದಲ್ಲಿ ಅನೇಕ ರೈತರು ಈ ಕಾಯ್ದೆಯನ್ನು ಸ್ವಾಗತಿಸಿದರು. ಆ ರೈತರಿಗೆ ನಾನು ಧನ್ಯವಾದಗಳು ತಿಳಿಸುತ್ತೇನೆ. ರೈತರ ಕಲ್ಯಾಣಕ್ಕಾಗಿ ನಾವು ಈ ಮೂರು ಕಾಯ್ದೆಗಳನ್ನು ಜಾರಿಯಲ್ಲಿ ತಂದಿದ್ದೆವೆ. ಆದರೆ ಎಷ್ಟೋ ಪ್ರಯತ್ನಗಳ ನಂತರವೂ ಸಹ ಕೆಲವು ರೈತರಿಗೆ ಈ ಕುರಿತು ತಿಳಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ನಮ್ಮ ಪ್ರಯತ್ನದಲ್ಲಿ ಕೆಲವೊಂದು ಕೊರತೆಗಳು ಇರಬಹುದು, ಆದ್ದರಿಂದ ಈ ಮೂರು ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವ ನಿರ್ಧಾರ ತಗೆದುಕೊಂಡಿದ್ದೇವೆ” ಎಂದು ಮೋದಿಯವರು ಘೋಷಣೆ ಮಾಡಿದ್ದಾರೆ.