ಕೊನೆಗೂ ಸೊಕ್ಕು ಇಳಿಯಿತು. ಪಾಕಿಸ್ತಾನದ ವರ್ಲ್ಡ್ ಕಪ್ ಜರ್ಸಿ ಮೇಲೆ ಈಗ ಸನ್ಮಾನದಿಂದ ಮೆರೆಯುತ್ತಿದೆ ‘ಇಂಡಿಯಾ’

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಂಬರುವ ಐಸಿಸಿ t20 ವರ್ಲ್ಡ್ ಕಪ್ 2021 ಸ್ಪರ್ಧೆಯ ಸಲುವಾಗಿ ನೂತನ ಜರ್ಸಿಯ ಅನಾವರಣ ಮಾಡಿತು. ಈ ಜರ್ಸಿಯು ಗಿಳಿ ಹಸಿರು ಮತ್ತು ಗಾಢ ಹಸಿರು ಬಣ್ಣ ಮಿಶ್ರವಾಗಿದೆ.

ಅವರ ದೇಶದ ಹೆಸರು ಜರ್ಸಿ ಮಧ್ಯಭಾಗದಲ್ಲಿ ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಸದ್ಯ ಇದೇ ಜರ್ಸಿ ಎಲ್ಲರ ಗಮನವನ್ನು ತನ್ನ ಕಡೆಗೆ ಸೆಳೆಯುತ್ತಿದೆ. ಪ್ರಸ್ತುತ ಎಲ್ಲ ತಂಡಗಳು ಜರ್ಸಿಯ ಮೇಲೆ ಭಾರತದ ಹೆಸರು ಬರೆದಿರುವಾಗ ಬರೀ ಪಾಕಿಸ್ತಾನ ಮಾತ್ರ ಭಾರತದ ಮೇಲಿನ ದ್ವೇಷಕ್ಕಾಗಿ ಜರ್ಸಿಯ ಮೇಲೆ ಯುಎಇ ಎಂದು ಬರೆದಿತ್ತು. ಯುಎಇ ಬರೆದಿರುವ ಜರ್ಸಿಯನ್ನು ಪಾಕಿಸ್ತಾನವು ಮೀಡಿಯಾದಲ್ಲಿ ನಾಯಕ ಬಾಬರ್ ಆಜಮ್ ಅವರ ಫೋಟೋ ಜೊತೆಗೆ ಪೋಸ್ಟ್ ಮಾಡಿತ್ತು.

ಕಳೆದ ಬುಧವಾರ ಭಾರತವು ಸಹ ವರ್ಲ್ಡ್ ಕಪ್ ಗಾಗಿ ತಮ್ಮ ಜರ್ಸಿ ಯನ್ನು ಅನಾವರಣ ಮಾಡಿತು.

ಕೆಲವು ದಿವಸಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪಾಕಿಸ್ತಾನದ ಜರ್ಸಿ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಇದುವರೆಗೂ ಅಧಿಕೃತವಾಗಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಅದೇ ರೀತಿಯ ಜರ್ಸಿ ಪಾಕಿಸ್ತಾನವು ಉಪಯೋಗಿಸುವುದಾದರೆ ಅದರ ಮೇಲೆ ಐಸಿಸಿ ಮತ್ತು ಬಿಸಿಸಿಐ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆಗಳಿದ್ದವು.

ಪಾಕಿಸ್ತಾನವು ಜರ್ಸಿಯ ಮೇಲೆ ಭಾರತದ ಹೆಸರು ಬರೆಯದೆ ಯುಎಇ ಎಂದು ಬರೆದಿತ್ತು. ಆದರೆ ಈಗ ಮಾತ್ರ ಜರ್ಸಿಯ ಮೇಲೆ ಭಾರತದ ಹೆಸರೇ ಬರೆದಿದೆ. ಹೀಗಾಗಿ ಅದರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ.

ವರ್ಲ್ಡ್ ಕಪ್ ನಲ್ಲಿ 24 ಅಕ್ಟೋಬರ್ ದಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.