ಕೊರೊನದಿಂದ ತಂದೆಯ ಮರಣ; ಮಗನ ಕೈಗೆ 16 ಲಕ್ಷ ರೂಪಾಯಿ ಬಿಲ್ ಕೊಟ್ಟ ಆಸ್ಪತ್ರೆ!

ದೇಶದಲ್ಲಿ ಕೊರೊನಾ ರೋಗಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅತ್ತ ಮುಂಬಯಿಯಲ್ಲಿ ಮಾತ್ರ ಆಸ್ಪತ್ರೆಯೊಂದರಲ್ಲಿ ವಿಚಿತ್ರ ಕೇಸ್ ದಾಖಲಾಗಿದೆ. ಇಲ್ಲಿ ಪ್ರೈವೇಟ್ ಆಸ್ಪತ್ರೆಯೊಂದರಲ್ಲಿ ಕೊರೊನಾ ಕಾರಣದಿಂದ ತೀರಿಕೊಂಡ ರೋಗಿಯ ಮಗನಿಗೆ 16 ಲಕ್ಷ ರೂಪಾಯಿಗಳ ಬಿಲ್ ಕೈಗೆ ಕೊಟ್ಟಿದ್ದಾರೆ. ಘಟನೆ ಮುಂಬಯಿಯ ಉಪನಗರ ಸಾಂತಾಕ್ರೂಜ್ ನಲ್ಲಿ ನಡೆದಿದೆ. ಅಲ್ಲಿ 74 ವರ್ಷದ ವ್ಯಕ್ತಿಯ ಮರಣ ಕೊರೊನಾದ ಕಾರಣದಿಂದ ಆಗಿದೆ. 15 ದಿನಗಳಲ್ಲಿ 16 ಲಕ್ಷಗಳ ಬೀಲ್ ಪಾವತಿ ಮಾಡಲು ಹೇಳಿದ್ದಾರೆ.

ಮಗ ಹೇಳುವ ಪ್ರಕಾರ 8.6 ಲಕ್ಷ ರೂಪಾಯಿ ಆಸ್ಪತ್ರೆ ಔಷಧಿ ಸಲುವಾಗಿ ಮತ್ತು 2.8 ಲಕ್ಷ ರೂಪಾಯಿ ಕೊರೊನಾ ಚಾರ್ಜ್ ಮಾಡಲಾಗಿದೆ. ಯಾವ ಸಂದರ್ಭದಲ್ಲಿ ತಂದೆ ಆಸ್ಪತ್ರೆಯಲ್ಲಿ ಇದ್ದರು, ಆಗ ನಾವೆಲ್ಲರು ಕ್ವಾರಂಟೈನ್ ನಲ್ಲಿ ಇದ್ದುದರಿಂದ ಈ ರೀತಿ ಮಾಡಲಾಗಿದೆ ಎಂದು ಹೇಳುತ್ತಾರೆ.

ನಾನಾವತಿ ಆಸ್ಪತ್ರೆಯ ನಿರ್ದೇಶಕರಾದ ಮನಪ್ರೀತ್ ಸೋಹಲ್ ಹೇಳುವ ಪ್ರಕಾರ ರೋಗಿ ಆಸ್ಪತ್ರೆಗೆ ಮಾರ್ಚ್ 31 ರಂದು ತುಂಬಾ ಗಂಭೀರ ಸ್ಥಿತಿಯಲ್ಲಿ ಬಂದಿದ್ದರು. ಅವರ ಶರೀರದ ಅನೇಕ ಅಂಗಗಳು ಕಾರ್ಯ ನಿರ್ವಹಿಸುವದನ್ನು ನಿಲ್ಲಿಸಿಬಿಟ್ಟಿದ್ದವು. ಆಗ ಒಳ್ಳೆಯ ಟ್ರೀಟ್ ಮೆಂಟ್ ಕೊಡುವಾಗ ಇಷ್ಟೊಂದು ಖರ್ಚಾಗುವದು ಸ್ವಾಭಾವಿಕ.     

ಮಗನ ಮಾತಿನ ಪ್ರಕಾರ ಆಸ್ಪತ್ರೆ ವರ್ಗದ ಹಣ ಕೀಳುವ ಪದ್ಧತಿ ಇಷ್ಟಕ್ಕೆ ನಿಲ್ಲದೆ ಆಸ್ಪತ್ರೆಯಿಂದ ಸ್ಮಶಾನ ಭೂಮಿಯವರೆಗಿನ ಬಾಡಿಗೆ 8000 ಸಾವಿರ ರೂಪಾಯಿಗಳನ್ನು ಕೂಡಿಸಲಾಗಿದೆ.