ಕೊರೊನದಿಂದ ‘ಪುರುಷತ್ವ’ ಅಪಾಯದಲ್ಲಿ; ಸಂಶೋಧಕರ ಹೊಸ ಅಧ್ಯಯನದಲ್ಲಿ ಕಂಡು ಬಂದ ಆಘಾತಕಾರಿ ವಿಷಯ!
ಕರೋನಾ ವೈರಸ್ ಪ್ರಕರಣಗಳು ವಿಶ್ವಾದಾದ್ಯಂತ ವೇಗವಾಗಿ ಹೆಚ್ಚುತ್ತಿವೆ. ಈ ವೈರಸ್ ಜಗತ್ತನ್ನು 100 ವರ್ಷಗಳ ಕಾಲ ಹಿಂದಕ್ಕೆ ತಳ್ಳಿದೆ ಎಂದು ಹೇಳಲಾಗುತ್ತಿದೆ. ಜನರು ತಮ್ಮ ಮನೆಯ ಹೊರಗಡೆ ಹೋಗಲು ಹೆದರುವ ಪರಿಸ್ಥಿತಿ ಇಂದು ಉದ್ಭವಿಸಿದೆ.
ಚೀನಾದ ವುಹಾನ್ನಲ್ಲಿ ಹುಟ್ಟಿದ ಈ ವೈರಸ್ ವಿಶ್ವದಾದ್ಯಂತ ಭಯದ ವಾತಾವರಣವನ್ನು ಸೃಷ್ಟಿಸಿದೆ. ಇಂದಿಗೂ ಚೀನಾ ಈ ವೈರಸ್ ಬಗ್ಗೆ ಅನೇಕ ವಿಷಯಗಳನ್ನು ಮರೆಮಾಡಿದೆ. ವೈರಸ್ ಮನುಷ್ಯರಿಂದಲೇ ಹರಡಬಹುದು ಎಂಬ ವಿಚಾರವನ್ನು ಆರಂಭದಲ್ಲಿ ಮರೆಮಾಡಲಾಗಿತ್ತು. ವೈರಸ್ ಕುರಿತ ಸಂಶೋಧನೆಯು ಅನೇಕ ಹೊಸ ಆವಿಷ್ಕಾರಗಳಿಗೆ ಕಾರಣವಾಗಿದೆ. ಕೆಲವೇ ದಿವಸಗಳ ಹಿಂದಿನ ಒಂದು ಸಂಶೋಧನೆಯ ಪ್ರಕಾರ ಕರೋನಾ ವೈರಸ್ ಪುರುಷರ ಲೈಂಗಿಕ ಸಾಮರ್ಥ್ಯವನ್ನು ದುರ್ಬಲಗೊಳಿಸಿ ಪುರುಷರನ್ನು ನಪುಂಸಕನನ್ನಾಗಿ ಮಾಡುವದು ಎಂದು ತಿಳಿದುಬಂದಿದೆ.

ಚೀನಾದ ಟುಫಟ್ಸ ವಿಶ್ವವಿದ್ಯಾಲ ಮತ್ತು ಗಾಂಗಿ ವೈದ್ಯಕೀಯ ಕಾಲೇಜು ಕೂಡಿಕೊಂಡು 12 ಕರೋನಾ ಪಾಸಿಟಿವ್ ರೋಗಿಗಳ ಪುರುಷತ್ವದ ಕುರಿತು ಸಂಶೋಧನೆ ನಡೆಸಿತು. ವೈರಸ್ ಪುರುಷರ ವೃಷಣಗಳ ಮೇಲೆ ಪರಿಣಾಮ ಬೀರುತ್ತದೆ ಅಲ್ಲದೆ ಕರೋನಾ ವೈರಸ್ ಪುರುಷ ದೇಹದಲ್ಲಿ ಉತ್ಪತ್ತಿಯಾಗುವ ವೀರ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಈ ಸಂಶೋಧನೆಯಿಂದ ತಿಳಿದುಬಂದಿದೆ. ಇದು ಮಕ್ಕಳನ್ನು ಹೊಂದುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಪುರುಷರು ಈ ವೈರಸ್ ನಿಂದ ಚೇತರಿಸಿಕೊಂಡ ನಂತರವೂ ವೀರ್ಯವನ್ನು ಉತ್ಪಾದಿಸುವ ಪುರುಷರ ಸಾಮರ್ಥ್ಯ ಹೆಚ್ಚಾಗುವುದಿಲ್ಲ ಎಂದು ಯುರೋಪಿಯನ್ ಮೂತ್ರಶಾಸ್ತ್ರದಲ್ಲಿ ಪ್ರಕಟವಾದ ಲೇಖನವೊಂದು ಹೇಳಿದೆ. ಸೀನುವಿಕೆ ಮತ್ತು ಕೆಮ್ಮಿನಿಂದ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವೈರಸ್ ಹರಡುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೆ ಕೆಲವು ದಿನಗಳ ಹಿಂದೆ ಲೈಂಗಿಕ ಸಂಬಂಧದಿಂದಲೂ ವೈರಸ್ ಹರಡಿರುವುದು ಪ್ರಕರಣ ಕಂಡುಬಂದಿದೆ. ಆದರೆ ಇದು ಇನ್ನೂ ಸಂಪೂರ್ಣವಾಗಿ ಸಾಬೀತಾಗಿಲ್ಲ. ಕೆಲವು ಪುರುಷರ ವೀರ್ಯಗಳ ತಪಾಸಣೆ ಮಾಡಿದಾಗ ಅವರ ವೀರ್ಯದಲ್ಲಿ ಸಹ ಕರೋನಾ ವೈರಸ್ ಕಂಡುಬಂದಿದೆ. ಆದರೆ ಅನೇಕ ಸಂಶೋಧಕರು ಇದನ್ನು ನಿರಾಕರಿಸಿದ್ದಾರೆ. ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ.

ಏತನ್ಮಧ್ಯೆ, ಇದು ಖಚಿತವಾಗುವವರೆಗೆ ವೀರ್ಯವನ್ನು ದಾನ ಮಾಡದಂತೆ ವೈದ್ಯರು ಪುರುಷರಿಗೆ ಮನವಿ ಮಾಡಿದ್ದಾರೆ. ಕರೋನಾವನ್ನು ಸಂಗ್ರಹಿಸಲು ವೃಷಣಗಳು ಉತ್ತಮ ಸ್ಥಳವೆಂದು ಕೆಲವು ಸಂಶೋಧಕರು ಹೇಳುತ್ತಾರೆ. ಚೀನಾದ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ 12 ಕರೋನಾ-ಪಾಸಿಟಿವ್ ಪುರುಷರನ್ನು ಪರೀಕ್ಷಿಸಿದ್ದಾರೆ. ಅಲ್ಲದೆ ಸಾವನ್ನಪ್ಪಿದ ಇಬ್ಬರು ರೋಗಿಗಳ ವೃಷಣಗಳಲ್ಲಿ ಕರೋನಾ ವೈರಸ್ ಇರುವುದು ಕಂಡುಬಂದಿದೆ. ಕರೋನಾ ಪುರುಷ ವೀರ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಇದು ಮಕ್ಕಳನ್ನು ಹೊಂದುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.