ಕೊರೊನಾದಿಂದ ಮುಕ್ತನಾದ ತಬ್ಲಿಗಿ ಅರ್ಷದನು ಡಾಕ್ಟರ್ ಮತ್ತು ಸಿಬ್ಬಂದಿ ವರ್ಗದ ಬಗ್ಗೆ ಹೇಳಿದ ಮಾತುಗಳೇನು ನೀವೇ ಓದಿ!
ಅಮರಾವತಿ: ಕೆಲವು ದಿನಗಳ ಹಿಂದೆ ಕೊರೊನಾ ಸಂಕ್ರಮಣಕ್ಕೆ ಕಾರಣರಾದ ತಬ್ಲಗಿ ಜಮಾತದ ಒಂದು ಸಕಾರಾತ್ಮಕ ವಿಚಾರ ಹೊಂದಿದ ಯುವಕ ಮುಂದೆ ಬಂದಿದ್ದಾನೆ. ಕೊರೊನಾ ರೋಗದಿಂದ ಗುಣಮುಖನಾಗಿ ಹೊರಗೆ ಬಂದ ಅರ್ಷದ ಅಹಮದ್ ನ ವಿಡಿಯೋ ಒಂದು ವೈರಲ್ ಆಗಿದೆ. ಈತ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ತಬ್ಲಿಗಿ ಸದಸ್ಯನಾಗಿದ್ದಾನೆ.
ದೆಹಲಿಯ ಮರಕಜ್ ನಿಂದ ಮರಳಿದ ನಂತರ ಅರ್ಷದನಿಗೆ ಕೊರೊನಾ ಸೋಂಕು ತಗುಲಿತ್ತು. ಆಮೇಲೆ ಆತನಿಗೆ ಝಜ್ಜರ್ ದ ಏಮ್ಸ್ ನಲ್ಲಿ ಭರ್ತಿ ಮಾಡಿ ಉಪಚಾರ ಕೊಡಲಾಯಿತು. ಉಪಚಾರದಿಂದ ಪರಿಪೂರ್ಣ ಆರೋಗ್ಯವಂತನಾಗಿದ್ದಾನೆ. ಅಷ್ಟೇ ಅಲ್ಲ ಇಲ್ಲಿಯವರೆಗೆ ಎರಡು ಸಲ ಪ್ಲಾಜ್ಮಾ ದಾನ ಮಾಡಿದ್ದಾನೆ. ನನಗೆ ಡಾಕ್ಟರ್ಸ್ ಗಳು 10 ಸಲ ಪ್ಲಾಜ್ಮಾ ಕೊಡಲಿಕ್ಕೆ ಹೇಳಿದರೆ ನಾನು ಯಾವತ್ತೂ ತಯಾರಾಗಿದ್ದೇನೆ ಎಂಬ ಮಾತು ANI ವೃತ್ತ ಸಂಸ್ಥೆಯ ಸಂದರ್ಶನದಲ್ಲಿ ಹೇಳಿದ್ದಾನೆ.
ಇದೆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿಯ ತನಗಾದ ಅನುಭವವನ್ನು ಹಂಚಿಕೊಂಡಿದ್ದಾನೆ. ಉಪಚಾರದ ಸಂದರ್ಭದಲ್ಲಿ ಡಾಕ್ಟರ್ಸ್ ಗಳು ನಮಗೆ ದಿನದಲ್ಲಿ ಮೂರು ಸಲ ಚೆಕ್ ಮಾಡ್ತಾ ಇದ್ದರು. ಜೊತೆಗೆ ಸಿಬ್ಬಂದಿ ವರ್ಗವೂ ತುಂಬಾ ಮುತುವರ್ಜಿ ವಹಿಸಿ ಕಾಳಜಿ ತೆಗೆದುಕೊಳ್ಳುತ್ತಿದ್ದರು. ನಮಗೆ ಮನೆಯಲ್ಲೇ ಇದ್ದಂತೆ ಅನಿಸುತ್ತಿತ್ತು.

ದೇಶದಲ್ಲಿಯ ಇತರ ಮುಸ್ಲಿಮ್ ಬಾಂಧವರೂ ಸಹಿತ ಸರಕಾರದ ನಿಯಮ ನಿರ್ದೇಶಗಳನ್ನು ಪಾಲಿಸಬೇಕು ಎಂಬ ಮಾತು ಹೇಳಿದನು. ರಮ್ಜಾನ್ ತಿಂಗಳು ಇರುವದರಿಂದ ನಮಾಜ್ ಪಠಣ ಮಾಡಲು ಮಸೀದಿಗೆ ಹೋಗದೆ ದಯವಿಟ್ಟು ಮನೆಯಲ್ಲೇ ಮಾಡಿರಿ ಅನ್ನುವಂಥ ಸಂದೇಶವನ್ನು ಕೊಡಲು ಮರೆಯಲಿಲ್ಲ.