ಕೊರೊನಾ ಕಾರಣದಿಂದ ರಿಕ್ಷಾದ ಡಿಸೈನ್ ಬದಲಿಸಿದ್ದನ್ನು ನೋಡಿ ಚಾಲಕನಿಗೆ ಜಾಬ್ ಆಫರ್ ಕೊಟ್ಟ ಆನಂದ ಮಹಿಂದ್ರಾ

ನವ ದೆಹಲಿ:- ಕೋರೊನಾ ಸಂಕ್ರಮಣ ತಡೆಗಟ್ಟುವ ಸಲುವಾಗಿಇಡೀ ಜಗತ್ತಿನಾದ್ಯಂತ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರಕಾರದ ಪ್ರತಿಬಂಧಕ ಲಸಿಕೆ ಕಂಡು ಹಿಡಿದಿಲ್ಲ. ನಮ್ಮ ಭಾರತದಲ್ಲಿ ಸಹ ಹಲವಾರು ಉಪಕ್ರಮ ಹಬ್ಬಿಕೊಂಡು ಅದನ್ನು ತಡೆಯಲು ಪ್ರಯತ್ನ ಪಡುತ್ತಿದ್ದಾರೆ. ಅದರ ನಿಟ್ಟಿನಲ್ಲಿ ನಮ್ಮ ದೇಶದ ಪ್ರಧಾನಿಯವರು ಮೇ 3 ರ ವರೆಗೆ ಲಾಕ್ಡೌನ್ ಅಳವಿಡಿಸಿದ್ದಾರೆ ಅದಲ್ಲದೆ ಸಾಮಾಜಿಕ ಅಂತರವನ್ನು ಸಹ ಕಾಪಾಡಲು ನಮ್ಮ ಸರ್ಕಾರ ಎಚ್ಚರಿಸುತ್ತಿದೆ. ಈ ಸೋಶಿಯಲ ಡಿಸ್ಟೆನ್ಸಿಂಗ್ ಕಾಪಾಡಲು ನಮ್ಮ ದೇಶದ ಜನರು ಹಲವಾರು ಪ್ರಕಾರದ ಹೊಸ ಹೊಸ ಯೋಚನೆಗಳು ಜಾರಿಯಲ್ಲಿ ತಂದು ಅದನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಅದರಲ್ಲಿ ಒಂದಾದ ಒಬ್ಬ ರೀಕ್ಷಾ ಚಾಲಕನು ತನ್ನ ರೀಕ್ಷಾ ವನ್ನು ವಿಭಿನ್ನವಾಗಿ ಡಿಸೈನ್ ಮಾಡಿದ್ದಾನೆ ಅದರಲ್ಲಿ ಸೋಶಿಯಲ್ದಿಸ್ಟೆನ್ಸಿಂಗ್ ಎಲ್ಲ ನಿಯಮಗಳು ಎಲ್ಲ ಪಾಲನೆ ಮಾಡಿದ್ದಾನೆ ಅಂದರೆ ಸರಕಾರದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತನ್ನ ರೀಕ್ಷಾ ವನ್ನು ಮೋಡಿಫೈ ಮಾಡಿದ್ದಾನೆ. ಅದನ್ನು ಕಂಡು ಮಹಿಂದ್ರಾ ಕಂಪನಿಯ ಚೇರಮನ್ ರಾದ ಆನಂದ ಮಹಿಂದ್ರಾ ಅವರು ಆ ಡಿಸೈನ್ ಮಾಡಿದ ಚಾಲಕನನ್ನು ತಮ್ಮ ಕಂಪನಿಯಲ್ಲಿ ಜಾಬ್ ಆಫರ್ ನೀಡಿದ್ದಾರೆ.

ದಿಸೈನ್ ಮಾಡಿದ ರೀಕ್ಷಾದ ವಿಡಿಯೋ ವನ್ನು ಆನಂದ ಮಹಿಂದ್ರಾ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಈ ರೀಕ್ಷಾವನ್ನು ಈ ತರಹ ಡಿಸೈನ್ ಮಾಡಿದ್ದಾರೆ, ಇದರಲ್ಲಿ ಕುಳಿತುಕೊಂಡು ಪ್ರವಾಸ ಮಾಡುವ ಯಾತ್ರಿಕರು ಒಬ್ಬರಿಗೊಬ್ಬರು ಟಚ್ ಮಾಡುವದಿಲ್ಲ ಅಲ್ಲದೆ ಈ ರೀಕ್ಷಾ ದಲ್ಲಿ ಒಬ್ಬ ಡ್ರೈವರ್ ಬಿಟ್ಟು ನಾಲ್ಕು ಜನ ಪ್ರವಾಸ ಮಾಡಬಹುದು. ಪ್ರತಿಯೊಬ್ಬ ಪ್ರವಾಸಿಗನಿಗೆ ಬೇರೆ ಬೇರೆಯಾದ ಸೆಕ್ಷನ್ ಗಳಿವೆ. ಇದರಿಂದ ಕೋರೊನಾ ಸಂಕಟದೂರ ಮಾಡುವ ಸಲುವಾಗಿ ಸೋಶಿಯಲ್ ಡಿಸ್ಟೆನ್ಸಿಂಗ್ ನಿಯಮ ಸಂಪೂರ್ಣವಾಗಿ ಪಾಲಿಸಿದಂತಾಗುವದು. ಬೇಕಿದ್ರೆ ನೀವು ಸಹ ಈ ವಿಡಿಯೋ ನೋಡಿ….

ಆನಂದ ಮಹಿಂದ್ರಾ ಅವರು ಇದನ್ನು ನೋಡಿ, ತಮ್ಮಮಹಿಂದ್ರಾ ಕಂಪನಿಯಲ್ಲಿ ಜಾಬ್ ಆಫರ್ ನೀಡಿದ್ದಾರೆ. ನಿಜಕ್ಕೂ ಈ ಚಾಲಕನ ಚಾಣಕ್ಯತನಕ್ಕೆ ಇಂದು ಒಂದು ಬೆಲೆ ಸಿಕ್ಕಿದೆ.