ಕೊರೊನಾ ವ್ಯಾಕ್ಸಿನ್ ಹೇಗೆ ನೀಡುವರು? ವ್ಯಾಕ್ಸಿನ್ ಪಡೆದ ನಂತರ ಆಗುವ ಅನುಭವವೇನು? ವ್ಯಾಕ್ಸಿನ ಪಡೆದ ವ್ಯಕ್ತಿಯ ಮಾತುಗಳಲ್ಲೇ ಕೇಳಿ
ಕೊರೊನಾ ವ್ಯಾಕ್ಸಿನ್ ನ ನಿರೀಕ್ಷೆ ಎಲ್ಲರಿಗೂ ಕೂಡಾ ಇದ್ದು, ಪ್ರತಿಯೊಬ್ಬರೂ ಕೂಡಾ ಮೊದಲು ವ್ಯಾಕ್ಸಿನ್ ಪಡೆಯುವ ನಿರೀಕ್ಷೆಯನ್ನು ಹೊಂದಿದ್ದಾರೆ. ವ್ಯಾಕ್ಸಿನ್ ನ ಅಪ್ರೂವಲ್ ಗೆ ಮೊದಲು ಅದರ ಟ್ರಯಲ್ ರನ್ ಕೂಡಾ ಅತಿ ಮುಖ್ಯವಾಗಿದೆ. ಇದರಲ್ಲಿ ವ್ಯಾಕ್ಸಿನ್ ಪ್ರಯೋಗದ ನಂತರ ಅದರಿಂದ ಸೈಡ್ ಎಫೆಕ್ಟ್ ಏನಾದರೂ ಸಂಭವಿಸುವುದೇ ಎಂಬುದನ್ನು ಗಮನಿಸಲಾಗುತ್ತದೆ. ಆದರೆ ಹೀಗೆ ರಿಸ್ಕ್ ತೆಗೆದುಕೊಂಡು ಟ್ರಯಲ್ ನಲ್ಲಿ ಭಾಗವಹಿಸುವವರ ಸಂಖ್ಯೆ ಮಾತ್ರ ಬಹಳ ಕಡಿಮೆ ಇದೆ. ಯಾರು ರಿಸ್ಕ್ ಮಾಡಿ ಈ ಟ್ರಯಲ್ ನಲ್ಲಿ ಭಾಗವಹಿಸುವರೋ ಅವರು ದೇಶದ ಕೋಟ್ಯಂತರ ಪ್ರಜೆಗಳ ಹಿತಕ್ಕಾಗಿ ಮುಂದೆ ಬಂದವರು ಎಂಬುದನ್ನು ನಾವು ಮರೆಯಬಾರದು. ಕೇವಲ ರಾಜಕೀಯ ನಾಯಕರು ಮಾತ್ರವೇ ಅಲ್ಲದೇ ನಿಸ್ವಾರ್ಥ ಭಾವನೆಯಿಂದ ಅನೇಕರು ಈ ಟ್ರಯಲ್ ಗೆ ತಮ್ಮ ಸಹಕಾರವನ್ನು ನೀಡಲು ಮುಂದಾಗಿದ್ದಾರೆ.
ಹೀಗೆ ದೇಶವಾಸಿಗಳ ಹಿತಕ್ಕಾಗಿ ವ್ಯಾಕ್ಸಿನ್ ಟ್ರಯಲ್ ನಲ್ಲಿ ಭಾಗವಹಿಸಿವರಯ ರಾಜಸ್ಥಾನದ ಒಂದು ಸಣ್ಣ ಪಟ್ಟಣವಾದ ಭನ್ಸ್ವಾಡದ ನಿವಾಸಿಯಾದ ಪ್ರಸಂಗ್ ಸರಾಫ್ ಅವರು. ವ್ಯಾಕ್ಸಿನ್ ಟ್ರಯಲ್ ನಲ್ಲಿ ಭಾಗಿಯಾಗಲು ಅವರು ನೂರಾರು ಕಿಲೋಮೀಟರ್ ಗಳು ಪ್ರಯಾಣಮಾಡಿದ ಪ್ರಸಂಗ್ ಅವರು ವ್ಯಾಕ್ಸಿನ್ ನ ಟ್ರಯಲ್ ನಲ್ಲಿ ಭಾಗಿಯಾಗಿ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟ್ರಯಲ್ ನಲ್ಲಿ ತಾನು ಭಾಗವಹಿಸಿದ ಹಿಂದಿನ ಕಾರಣವೇನು ಹಾಗೂ ವ್ಯಾಕ್ಸಿನ್ ಪಡೆದನಂತರ ಆದಂತಹ ಅನುಭವಗಳ ಬಗ್ಗೆ ಅವರು ಮಾಧ್ಯಮವೊಂದರ ಮುಂದೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವಾಸ್ತವವಾಗಿ ವ್ಯಾಕ್ಸಿನ್ ಸಿದ್ಧವಾಗಿದೆ ಎಂದ ಮೇಲೆ ಟ್ರಯಲ್ ನಲ್ಲಿ ಭಾಗವಹಿಸಿ ರಿಸ್ಕ್ ತೆಗೆದುಕೊಳ್ಳುವುದು ಏಕೆ ಎಂದು ಅನೇಕರು ಭಾವಿಸಿದ್ದರು. ಅದೇ ಸಮಯದಲ್ಲಿ ನ್ಯೂಸ್ ಪೇಪರ್ ನಲ್ಲಿ ಕೂಡ ವ್ಯಾಕ್ಸಿನ್ ಟ್ರಯಲ್ ರನ್ ನಡೆಸಲು ಸ್ವಯಂಸೇವಕರು ಸಿಗುತ್ತಿಲ್ಲ ಎನ್ನುವ ಸುದ್ದಿಯೊಂದನ್ನು ನೋಡಿದ್ದಾರೆ ಪ್ರಸಂಗ್ ಅವರು. ಆಗ ಅವರು ಎಲ್ಲರೂ ಹೀಗೆ ಆಲೋಚನೆ ಮಾಡಿದರೆ ವ್ಯಾಕ್ಸಿನ್ ಸಿದ್ಧ ಆಗುವುದಾದರೂ ಹೇಗೆ? ಎಂದು ತಾನು ಸ್ವಯಂಸೇವಕನಾಗಿ ಹೋಗಲು ನಿರ್ಧರಿಸಿದರು. ಕೂಡಲೇ ಅವರು ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ಟ್ರಯಲ್ ನಲ್ಲಿ ಹಾಜರಾಗುವ ಕುರಿತಾಗಿ ಮಾಹಿತಿಯನ್ನು ಪಡೆದು ಕುಟುಂಬದ ಸದಸ್ಯರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಮನೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗದೇ ಇದ್ದಾಗ ಪ್ರಸಂಗ್ ಬಹಳ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿ ವ್ಯಾಕ್ಸಿನ್ ಟ್ರಯಲ್ ಗೆ ಆಗಮಿಸಿದ್ದಾರೆ.
ವ್ಯಾಕ್ಸಿನ್ ಟ್ರಯಲ್ ಜೈಪುರದಲ್ಲಿ ನಡೆಯುತ್ತಿದ್ದರಿಂದ ಪ್ರಸಂಗ್ ತಮ್ಮ ಊರಿನಿಂದ ಜಯಪುರಕ್ಕೆ ಆಗಮಿಸಿ ಇಲ್ಲಿ ಟ್ರಯಲ್ ನಡೆಯುತ್ತಿರುವ ಮಹಾರಾಜ ಅಗ್ರ ಸೇನಾ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಟ್ರಯಲ್ ಗೆ ಒಳಗಾಗಿದ್ದಾರೆ. ವ್ಯಾಕ್ಸಿನ್ ಪಡೆಯುವ ಮೊದಲು ವೈದ್ಯರ ತಂಡದೊಂದಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿ ಅವರಿಂದ ಸಮರ್ಪಕವಾದ ಉತ್ತರಗಳು ಬಂದಿತು, ಅವರು ಮೊದಲು ನನ್ನ ಆರೋಗ್ಯ ತಪಾಸಣೆ ಮಾಡಿದರು. ಅನಂತರ ನನ್ನ ಮೇಲೆ ವ್ಯಾಕ್ಸಿನ್ ಪ್ರಯೋಗ ನಡೆಯಿತು ಎಂದಿದ್ದಾರೆ ಪ್ರಸಂಗ್. ವ್ಯಾಕ್ಸಿನ್ ಪಡೆದನಂತರ ಒಂದು ಗಂಟೆಯ ಕಾಲದವರೆಗೆ ವೈದ್ಯರು ತನ್ನನ್ನು ಅವರ ಪರಿವೀಕ್ಷಣೆಯಲ್ಲಿ ಇರಿಸಿದ್ದರು. ಅನಂತರ ನನಗೆ ನಾರ್ಮಲ್ ಆಗಿರಲು ಸೂಚಿಸಿದರು ಎಂದು ತಿಳಿಸಿದ ಪ್ರಸಂಗ್ ಇನ್ನೂ ಒಂದು ವರ್ಷ ಕಾಲ ತನ್ನ ಬಗ್ಗೆ ಅವರು ಕಾಳಜಿವಹಿಸುತ್ತಾರೆ, ಅಲ್ಲದೆ ಒಂದು ಡೈರಿಯನ್ನು ಕೂಡ ನಿರ್ವಹಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ವ್ಯಾಕ್ಸಿನ್ ಪಡೆದ ನಂತರ ತನಗೆ ಯಾವುದೇ ರೀತಿಯ ವಿಚಿತ್ರವಾದ ಅನುಭವವಾಗಲಿ ಅಥವಾ ಸೈಡ್ ಎಫೆಕ್ಟ್ ಆಗಲಿ ಆಗಿಲ್ಲ ಎನ್ನುವ ಪ್ರಸಂಗ್ ತನ್ನ ಜೀವನ ಮೊದಲಿನ ಹಾಗೇ ನಡೆಯುತ್ತಿದೆ. ಆರೋಗ್ಯದಲ್ಲಿ ಕೂಡಾ ಯಾವುದೇ ವ್ಯತ್ಯಾಸಗಳು ಆಗಿಲ್ಲ. ವ್ಯಾಕ್ಸಿನ್ ಪಡೆದ ನಂತರ ನಾರ್ಮಲ್ ಆಗಿ ಜ್ವರ ಬರುತ್ತದೆ ಎಂದಿದ್ದರು. ಆದರೆ ನನಗೆ ಅದು ಕೂಡಾ ಬಂದಿಲ್ಲ ಎಂದಿರುವ ಪ್ರಸಂಗ್ ಪ್ರತಿದಿನ ವೈದ್ಯರು ಕರೆ ಮಾಡಿ ನನ್ನ ಯೋಗ ಕ್ಷೇಮ ವಿಚಾರಿಸುವ ಜೊತೆಗೆ ಬಹಳಷ್ಟು ಜನ ವೈದ್ಯರು ಕರೆ ಮಾಡಿ ನಾನು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದೆಲ್ಲಾ ನೋಡಿದಾಗ ದೇಶವಾಸಿಗಳಿಗಾಗಿ ವ್ಯಾಕ್ಸಿನ್ ಟ್ರಯಲ್ ನಲ್ಲಿ ಭಾಗವಹಿಸಿದ್ದು ನನಗೆ ಸಂತೋಷ ನೀಡಿದೆ ಎಂದು ಅವರು ಹೇಳಿದ್ದಾರೆ.