ಕೊರೊನ ದಿಂದ ಸತ್ತವರ ಶವಗಳನ್ನು ಗುಪ್ತವಾಗಿ ಸುಟ್ಟು ಹಾಕುತ್ತಿದೆ ಈ ರಾಜ್ಯ ಸರಕಾರ! ನಾಗರೀಕರಲ್ಲಿ ಆಕ್ರೋಶ!!
ಹೊಸ ದೆಹಲಿ:- ಪಶ್ಚಿಮ ಬಂಗಾಲದ ದಾರ್ಜಿಲಿಂಗ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿಯ ಸಂಸದರಾದ ರಾಜು ಬಿಷ್ಟ ಅವರು ಮಮತಾ ಬ್ಯಾನರ್ಜಿ ಸರಕಾರದ ಮೇಲೆ ಕೋವಿಡ್-19 ಸಾಂಕ್ರಾಮಿಕ ರೋಗಿಗಳ ಸಂಖ್ಯೆ ಮುಚ್ಚಿಟ್ಟದ್ದಾರೆ ಎಂದು ಅವರ ಮೇಲೆ ಆರೋಪ ಮಾಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಕೋವಿಡ್-19 ರೋಗಿಯ ನಿಧನದ ನಂತರ ಅಲ್ಲಿದ್ದ ಪೊಲೀಸರು ರಾತ್ರಿ 12 ಗಂಟೆಗೆ ಕದ್ದು ಮುಚ್ಚಿ ಆ ಶವಗಳನ್ನು ಸುಟ್ಟು ಹಾಕುತ್ತಿದ್ದಾರೆ ಎಂಬುದು ಅವರ ಆರೋಪ ವಾಗಿದೆ. ಇದರಿಂದ ರಾಜ್ಯದ ಜನತೆಯಲ್ಲಿ ಆಕ್ರೋಶ ನಿರ್ಮಾಣವಾಗಿದೆ.

ಭಾರತೀಯಜನತಾ ಪಾರ್ಟಿಯ 34 ವರ್ಷದ ಯುವ ಸಂಸದರ ಹೇಳಿದ್ದೇನೆಂದರೆ, ಕೆಲವು ದಿವಸಗಳ ಹಿಂದೆ ಅಲಿಪುರ್ ದ್ವಾರ ಜಿಲ್ಲೆಯಲ್ಲಿ ಕೋವಿಡ್-19 ಸಂಕ್ರಮಿತ ರೋಗಿಯ ನಿಧನದ ನಂತರ , ರೋಗಿಯ ಶವವನ್ನು ಪೊಲೀಸರು ರಾತ್ರಿಯ 12 ಗಂಟೆಯ ಸಮಯದಲ್ಲಿ ಸುಟ್ಟು ಹಾಕುತ್ತಿದ್ದರು. ಇದರಿಂದ ಆಕ್ರೋಶಗೊಂಡ ಜನರು ಪೊಲೀಸರೊಂದಿಗೆ ಜಗಳವಾಡುತ್ತ ಹೋದರು. ತದನಂತರ ರೊಚ್ಚಿಗೆದ್ದ ಜನರು ಪೊಲೀಸರ ವಾಹನಗಳನ್ನು ಸುಟ್ಟುಹಾಕಲು ಪ್ರಯತ್ನಿಸಿದರು ಇದರಿಂದ ಅನೇಕ ಪೊಲೀಸ ಕರ್ಮಚಾರಿಗಳು ಗಾಯಗೊಂಡರು.
ಬಿಜೆಪಿಯ ಸದಸ್ಯ ರಾಜು ಬಿಷ್ಟ ಅವರ ಹೇಳಿಕೆಯಪ್ರಕಾರ, ಕೋವಿಡ್-19 ನ ರೋಗಿಯ ಸಂಖ್ಯೆ ಬಚ್ಚಿಡುವ ಸಲುವಾಗಿ ಮಮತಾ ಬ್ಯಾನರ್ಜಿ ಅವರು ಕಲ್ಕತ್ತಾದಲ್ಲಿ 5 ಡಾಕ್ಟರ್ ಗಳ ಒಂದು ಟೀಮ್ ಮಾಡಿದ್ದಾರೆ.ಕೋರೊನಾ ವೈರಸ್ ದಿಂದ ಯಾರು ಮೃತ ಪಟ್ಟರು ಮತ್ತು ಯಾರು ಇಲ್ಲ ಎಂಬುದು ಈ ಟೀಮ್ ನಿಶ್ಚಿತ ಮಾಡುವದು. ವಿಚಾರ ಮಾಡುವ ವಿಷಯವೇನೆಂದರೆ 600 ಕಿಲೋಮೀಟರ್ ದೂರವಿರುವ ದಾರ್ಜಿಲಿಂಗ ನಲ್ಲಿ ಯಾವುದೇ ವ್ಯಕ್ತಿ ಕೋರೊನಾ ದಿಂದ ಮೃತಪಟ್ಟರೆ ಕೊಲ್ಕತ್ತಾ ದಲ್ಲಿ ಕುಳಿತುಕೊಂಡು ಯಾವುದೇ ಟೆಸ್ಟ್ ಮಾಡದೆ ರೋಗಿ ಯಾವ ಕಾರಣದಿಂದಾಗಿ ಮೃತಪಟ್ಟನು ಎಂಬುದ್ ನಿರ್ಧಾರ ಮಾಡುವದು ಈ ಡಾಕ್ಟರ್ ಗಳಿಗೆ ಸಾಧ್ಯ! ಎಂಬುದು ಅವರ ಆರೋಪ ವಾಗಿದೆ.

ಲಾಕ್ಡೌನ್ ಸಮಯದಲ್ಲಿ ಧರ್ಮ ವಿಶೇಷದ ಕೆಲವು ಕ್ಷೇತ್ರಗಳಲ್ಲಿ ಕಾರ್ಯಮಾಡಲು ಅನುಮತಿ ನೀಡಿದ್ದಾರೆ, ಅಲ್ಲದೆ ಲಾಕ್ಡೌನ್ ನ ನಿಯಮ ಉಲ್ಲಂಘನೆ ಮಾಡಿದ್ದರಿಂದಾಗಿ ಪರಸ್ಥಿತಿ ಇನ್ನಷ್ಟು ಗಂಭೀರವಾಗಿದೆ, ಅಲ್ಲದೆ, ನೈಜ ಸುದ್ಧಿಗಳನ್ನು ಬಹಿರಂಗ ಪಡೆಸುವ ಕೆಲವು ಮೀಡಿಯಾ ಸಂಸ್ಥಾನಗಳಿಗೆ ಸರ್ಕಾರದ ಜೊತೆಗೂಡಿದ ಕೆಲವು ವ್ಯಕ್ತಿಗಳು ಅವರನ್ನು ಬೆದರಿಕೆ ನೀಡುತ್ತಿದ್ದಾರೆ, ಎಂದು ಬಿಜೆಪಿಯ ಶಾಸಕರು ಮಮತಾ ಬ್ಯಾನರ್ಜಿ ಸರಕಾರದ ಮೇಲೆ ಆರೋಪ ಮಾಡಿದ್ದಾರೆ.