ಕೊರೊನ ಸಂಕಟದಲ್ಲೇ ಇನ್ನೊಂದು ವಿಷಾಣುವಿನಿಂದ ಮಾನವನಿಗೆ ಅಪಾಯ, ಅಲರ್ಟ್ ಮಾಡಿದ ಚೀನಾ!
ನವ ದೆಹಲಿ: ಚೀನಾದಿಂದ ಎಲ್ಲೆಡೆಗೆ ಹರಡಿರುವ ಕೋರೊನಾ ವೈರಸ್ ಇಡೀ ಜಗತ್ತಿನಾದ್ಯಂತ ಭ’ಯದ ವಾತಾವರಣ ನಿರ್ಮಾಣ ಮಾಡಿದೆ. ಇಂಥ ಸಂಕಟದ ಸಮಯದಲ್ಲಿ ಚೀನಾದಿಂದ ಮತ್ತೊಂದು ವೈರಸ್ ಹರಡುವ ಅ’ಪಾಯ ನಿರ್ಮಾಣವಾಗಿದೆ. ಉತ್ತರ ಚೀನಾದ ಒಂದು ಆಸ್ಪತ್ರೆಯಲ್ಲಿ ರವಿವಾರದಂದು ಬ್ಯುಬಾನಿಕ್ ಪ್ಲೇಗ್’ದ ಒಬ್ಬ ಶಂಕಿತ ರೋಗಿಯು ಸಿಕ್ಕಿದ್ದರಿಂದ ಅಲ್ಲಿಯ ಪ್ರಶಾಸನವು ಎಚ್ಚರಿಕೆ ನೀಡಿದೆ. ಸರಕಾರಿ ಪಿಪುಲ್ಸ್ ಡೇಲಿ ಆನ್ಲೈನ್ ವೃತ್ತದ ಅನುಸಾರ ಬಯೋನೂರ್, ಮಂಗೋಲಿಯಾದಲ್ಲಿ ಪ್ಲೇಗ್ ಹರಡುವುದನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಮೂರನೇ ಹಂತದ ಎಚ್ಚರಿಕೆ ನೀಡಲಾಗಿದೆ.
ಬ್ಯುಬಾನಿಕ್ ಪ್ಲೇಗ್’ದ ಒಬ್ಬ ಶಂಕಿತ ರೋಗಿಯು ಬಯನ್ನೂರ್ ನ ಒಂದು ಆಸ್ಪತ್ರೆಯಲ್ಲಿ ಶನಿವಾರದಂದು ದಾಖಲೆಯಾಗಿದೆ. ಸ್ಥಾನಿಕ ಆರೋಗ್ಯ ವಿಭಾಗವು ಈ ಅಲರ್ಟ್ 2020 ರ ಕೊನೆಯ ತಿಂಗಳಿನ ವರೆಗೆ ಜಾರಿಗೊಳಿಸಿದೆ. ಸ್ಥಾನಿಕ ಆರೋಗ್ಯ ಅಧಿಕಾರಿಗಳು ಹೇಳಿದ ಪ್ರಕಾರ, “ಈ ಬಾರಿ ಪಟ್ಟಣಗಳಲ್ಲಿ ಪ್ಲೇಗ್ ದಂತಹ ಮ’ಹಾಮಾರಿ ಮನುಷ್ಯರಲ್ಲಿ ಹರಡುವ ಅಪಾಯವಿದೆ. ಜನರು ತಮ್ಮ ಸುರಕ್ಷಿತತೆಯ ಸಲುವಾಗಿ ಜಾಗೃತಿ ಮತ್ತು ಕ್ಷಮತೆ ಹೆಚ್ಚಿಸುವ ಅವಶ್ಯಕತೆಯಿದೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಉಂಟಾದರೆ ತಕ್ಷಣವೇ ಅದರ ಮಾಹಿತಿ ಸ್ಥಾನಿಕ ಆರೋಗ್ಯ ವ್ಯವಸ್ಥೆಗೆ ತಿಳಿಸಬೇಕು”. ಎಂದು ಹೇಳಿದ್ದಾರೆ

ಬ್ಯುಬಾನಿಕ್ ಪ್ಲೇಗ್ ಏನಿದೆ? ಅದು ಹೇಗೆ ಹರಡುವದು? ಬ್ಯುಬಾನಿಕ್ ಪ್ಲೇಗ್’ಗೆ ಗಿಲ್ಟಿವ್ ಗ್ರಂಥಿ ಪ್ಲೇಗ್ ಎಂದು ಸಹ ಕರೆಯಬಹುದು. ಈ ಪ್ಲೇಗ್ ನಿಂದಾಗಿ ಶರೀರದಲ್ಲಿ ಅಸಹನೀಯ ನೋವು, ತೀವ್ರ ಫೀವರ್, ನರಗಳಲ್ಲಿಯ ಒತ್ತಡ ಹೆಚ್ಚಾಗುವದು ಈ ಪ್ರಕಾರದ ತೊಂದರೆಗಳು ನಿರ್ಮಾಣ ವಾಗುತ್ತವೆ. ಪ್ಲೇಗ್ ರೋಗ ಎಲ್ಲಕ್ಕಿಂತ ಮುಂಚೆ ಇಲಿಗೆ ತಗಲುತ್ತದೆ ತದನಂತರ ಇಲಿ ರೋಗದಿಂದ ಸ’ತ್ತ ಮೇಲೆ ಅದರ ಶರೀರದಲ್ಲಿಂದ ಪ್ಲೇಗ್’ದ ಜೀವಂತ ವಿಷಾಣು ಹೊರಗಡೆ ಬೀಳುತ್ತವೆ ಹಾಗೆ ಅವು ಮನುಷ್ಯನ ಶರೀರದಲ್ಲಿ ಪ್ರವೇಶ ಮಾಡುತ್ತವೆ. ಪ್ಲೇಗ್ ರೋಗದ ಪ್ರಸಾರ ಮುಖ್ಯವಾಗಿ ಇಲಿಗಳು ಮತ್ತು ಅವುಗಳ ಮೇಲಿನ ಕ್ರಿಮಿನಾಶಕಗಳು. ಅವುಗಳ ಮೇಲಿನ ಕ್ರಿಮಿಗಳು ಯಾವಾಗ ಮನುಷ್ಯರನ್ನು ಕಡೆಯುತ್ತವೆಯೋ ಅವಾಗ ಅವುಗಳ ಶರೀರದಲ್ಲಿಯ ಸಂಕ್ರಮಿತ ದ್ರವ್ಯ ಮನುಷ್ಯನ ಶರೀರ ಪ್ರವೇಶ ಮಾಡಿ ಅವರನ್ನು ಸಂಕ್ರಮಿತ ಮಾಡುತ್ತವೆ. ಇಲಿಗಳು ಸತ್ತ ನಂತರ ಎರಡು ಮೂರು ವಾರಗಳಲ್ಲಿ ಮನುಷ್ಯರಲ್ಲಿ ಪ್ಲೇಗ್ ಹರಡುತ್ತದೆ. ಎರಡನೆಯ ವರದಿಯ ಪ್ರಕಾರ ಸಂಕ್ರಮಿತ ಪ್ರಾಣಿಗಳ ಬೇ’ಟೆ ಮತ್ತು ಅವುಗಳನ್ನು ತಿನ್ನುವುದರ ಮೇಲೆ ಬಂ’ಧನ ಹಾಕಿದ್ದಾರೆ. ಪ್ಲೇಗ್ ನಂತಹ ಲಕ್ಷಣ ಕಂಡು ಬಂದರೆ ಹಾಗೂ ಯಾವುದೇ ಕಾರಣ ವಿಲ್ಲದೆ ಜ್ವರ ಬಂದರೆ ಅವರ ಮಾಹಿತಿ ನೋಂದಾಯಿಸಲು ಜನರಿಗೆ ತಿಳಿಸಿದ್ದಾರೆ.
ಬ್ಯುಬೋನಿಕ್ ಪ್ಲೇಗ್ ಒಂದು ಬ್ಯಾಕ್ಟೀರಿಯಾ ರೋಗವಾಗಿದೆ. ಮಾರ್ಮೊಟ್ಸ್ ಗಳಂತಹ ಕಾಡು ಇಲಿಗಳಿಗೆ ಈ ರೋಗ ಸಂಭವಿಸುತ್ತದೆ. WHO ದ ಪ್ರಕಾರ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಪ್ಲೇಗ್ ರೋಗಿ ಕೇವಲ 24 ಗಂಟೆಗಳಲ್ಲಿ ಜೀವ ಕಳೆದುಕೊಳ್ಳುತ್ತಾನೆ. ಒಂದು ವೇಳೆ ಬ್ಯುಬೋನಿಕ್ ಪ್ಲೇಗ್ ದ ತೊಂದರೆ ಆಗಿದ್ದರೆ ಅಥವಾ ಬ್ಯಾಕ್ಟೀರಿಯಾ ಸಂಪರ್ಕದ ನಂತರ ಒಂದರಿಂದ ಏಳು ದಿವಸಗಳ ಒಳಗಾಗಿ ಫ್ಲೂ ನಂತಹ ಲಕ್ಷಣಗಳು ಕಾಣಿಸುತ್ತವೆ. ಬ್ಯುಬೋನಿಕ್ ಪ್ಲೇಗ್ ದ ಲಕ್ಷಣಗಳಲ್ಲಿ ತಲೆ ನೋವು, ಜ್ವರ ಮತ್ತು ವಾಂತಿಯ ಸಮಾವೇಶವಿದೆ.