ಕೊರೋನ ಸಂಕಟದಲ್ಲಿ ಲಕ್ಷಾವಧಿ ಜನರಿಗೆ ಸಹಾಯ ಮಾಡಿದ ಸೋನು ಸೂದ್ ಅವರು, ಕಣ್ಣೆದುರು ನಡೆದ ಅಪಘಾತದಲ್ಲಿ ಗಾಯಾಳುಗಳ ಜೊತೆಗೆ ಸ್ಪಂದಿಸಿದ ಬಗೆ ನೋಡಿ..!
ಸೋನು ಸೂದ್ ಹೆಸರು ಕೇಳಿದ ತಕ್ಷಣ ಕೊರೋನ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ರಾತ್ರಿ ಹಗಲು ಮಾಡಿದ ಸಹಾಯ, ಸಹಯೋಗ ನೆನಪಿಗೆ ಬರುತ್ತದೆ. ಅನೇಕರು ಅನೇಕ ರೀತಿಯ ಸಹಾಯ ಬೇಕೆಂದು ಕೇಳಿ ಬಂದವರಿಗೆ ನಟ ಸೋನು ಸೂದ್ ಅವರು ಬರಿಗೈಯಿಂದ ಕಳಿಸಲಿಲ್ಲ. ಆ ಸಮಯದಲ್ಲಿ ಸೋನು ಅವರು ಸಮಾಜಕ್ಕೆ ಮತ್ತು ಸಮಾಜದ ಭಾಗವಾದ ಜನರಿಗೆ ಕೈತುಂಬ ಸಹಾಯವನ್ನು ಮಾಡಿದರು. ಅನೇಕ ಕುಟುಂಬಗಳಿಗೆ ಸೋನು ಅವರು ದೇವರಾಗಿ ಬಿಟ್ಟರು.
ಈಗ ಇದೇ ನಟರಾದ ಸೋನು ಸೂದ್ ಅವರ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ತುಂಬಾ ಚರ್ಚೆಯಲ್ಲಿದೆ. ಒಂದೇ ಒಂದು ವಾರದ ಹಿಂದೆ ಯುಟ್ಯೂಬ್ ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಸೋನು ಅವರು ಪಂಜಾಬ್ ನಲ್ಲಿ ಬೈ ರೋಡ್ ಸಂಚರಿಸುತ್ತಿರುವ ಸಮಯ ಇವರ ಕಣ್ಣು ಮುಂದೆಯೇ ಒಂದು ಭೀಕರ ಅಪಘಾತ ಸಂಭವಿಸಿದೆ. ಸೋನು ಅವರು ಸ್ವಲ್ಪವೂ ಸಮಯವನ್ನು ಹಾಳು ಮಾಡದೆ ತಕ್ಷಣ ತಮ್ಮ ಕಾರಿನಿಂದ ಇಳಿದು ಅಪಘಾತಕ್ಕೆ ಈಡಾದ ಕಾರಿನೆಡೆಗೆ ಹೋಗಿದ್ದಾರೆ. ಕಾರು ನಡೆಸುವ ವ್ಯಕ್ತಿ ಗಾಯದಿಂದ ಮೂರ್ಚಿತನಾಗಿರುವದನ್ನು ನೋಡಿದ ಸೋನು ಸೂದ್ ಅವರು ಆತನನ್ನು ಸ್ವತಃ ತಾವೇ ಮುಂದಾಗಿ ಎತ್ತಿಕೊಂಡು ಬಂದು ತಮ್ಮ ಕಾರಿನಲ್ಲಿ ಮಲಗಿಸಿ ನಂತರ ಆಸ್ಪತ್ರೆಗೆ ಸೇರಿಸಿದ್ದಾರೆ.
ನೋಡಿ ಈ ವಿಡಿಯೋ…
ಕಷ್ಟದಲ್ಲಿರುವವರಿಗೆ ಸೋನು ಸೂದ್ ಅವರು ತೋರಿಸಿದ ಈ ಕಾಳಜಿ, ಸ್ಪಂದನೆ ಮತ್ತು ಸಮಯಪ್ರಜ್ಞೆ ನೇಟಿಜನ್ಸ್ ಗಳ ಮನಸ್ಸು ಅಕ್ಷರಶಃ ಸೋರೆಗೊಂಡಿದೆ. ಯುಟ್ಯೂಬ್ ನಲ್ಲಿಯ ಈ ವಿಡಿಯೋವನ್ನು ಇಲ್ಲಿಯವರೆಗೆ 2.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ.