ಕೋಚಿಂಗ್ ಕ್ಲಾಸಿಗೆ ಹೋಗುತ್ತೇನೆಂದು ಹೇಳಿ ಪ್ರಿಯಕರನ ಜೊತೆಗೆ ಲಾಜಿಗೆ ಹೋದಳು; ಅಲ್ಲಿ ಆದದ್ದೇ ಬೇರೆ..
ಸುಳ್ಳು ಕೆಲವೊಮ್ಮೆ ಭಾರಿ ಹಾನಿಯುಂಟುಮಾಡುತ್ತವೆ. ಅದರಲ್ಲಿ ಯುವಕ-ಯುವತಿಯರು ತಮ್ಮ ಪೋಷಕರಿಗೆ ಪ್ರೇಮ ಪ್ರೀತಿ ಸಂದರ್ಭದಲ್ಲಿ ಅನೇಕ ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ಆದರೆ ಈ ರೀತಿಯ ಸುಳ್ಳುಗಳು ಕೆಲವೊಂದು ಸಲ ಆರ್ಥಿಕವಾಗಿ ಅಷ್ಟೇ ಅಲ್ಲ, ಜೀವಕ್ಕೂ ಸಹಿತ ಕುತ್ತುಗಳನ್ನು ತರುತ್ತವೆ.
ಮನೆಯಲ್ಲಿ ತನ್ನ ಪೋಷಕರಿಗೆ ಹುಡುಗಿ ಕೋಚಿಂಗ್ ಕ್ಲಾಸ್ ಗೆ ಹೋಗುತ್ತೇನೆಂದು ಹೇಳಿ ಹುಡುಗನ ಜೊತೆ ಹೋಟೆಲಿಗೆ ಹೋಗಿದ್ದಾಳೆ. ಈ ಹುಡುಗಿಯ ಹೆಸರು ತನು ಪರಿಹಾರ ಇದ್ದು ಹೊಟೇಲಿನಲ್ಲಿ ಆಕೆಯ ಹತ್ಯೆಯಾಗಿದೆ. ಪ್ರಸ್ತುತ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ.

ಹಿಂದಿ ನ್ಯೂಸ್ ಚಾನೆಲ್ ಆಜ್ ತಕ್ ನೀಡಿದ ವರದಿಯ ಪ್ರಕಾರ, ಉಜ್ಜೈನ್ ದಲ್ಲಿಯ ನಾನಾಕೇಡ ಪರಿಸರದಲ್ಲಿಯ ನಟರಾಜ್ ಹೊಟೇಲಿನಲ್ಲಿ ಈ ಘಟನೆಯಾಗಿದೆ. ತನು ತನ್ನ ಪೋಷಕರಿಗೆ ಕೋಚಿಂಗ್ ಕ್ಲಾಸ್ ಅಟೆಂಡ್ ಮಾಡಲು ಹೋಗುತ್ತೇನೆಂದು ಹೇಳಿ ಪ್ರಿಯಕರನಾದ ಸುಭಾಷ್ ಪೋರವಾಲ ಹೆಸರಿನ ತರುಣನ ಜೊತೆಗೆ ಹೋಟೆಲಿಗೆ ಬಂದು ಸಾಯಂಕಾಲದವರೆಗೆ 1 ರೂಮ್ ಬುಕ್ ಮಾಡಿದ್ದಾರೆ. ಮಧ್ಯಾಹ್ನದ ಸುಮಾರಿಗೆ ಸುಭಾಷ್ ಮಾರ್ಕೆಟಿನಿಂದ ಕೆಲವು ಸಾಮಾನುಗಳನ್ನು ತರುತ್ತೇನೆಂದು ನೆಪ ಹೇಳಿ ಹೊಟೇಲಿನಿಂದ ಹೊರಗೆ ಬಿದ್ದವನು ಸಾಯಂಕಾಲದವರೆಗೆ ಬರದೇ ಇದ್ದಾಗ ಹೋಟೆಲ್ ಮ್ಯಾನೇಜರ್ ರೂಮಿಗೆ ಹೋಗಿ ಬಾಗಿಲು ಪಡೆದಿದ್ದಾನೆ. ಒಳಗಿನಿಂದ ಯಾವುದೇ ರೀತಿಯ ರೆಸ್ಪಾನ್ಸ್ ಬರದೇ ಇದ್ದಾಗ ಬಾಗಿಲನ್ನು ಒಡೆದು ತೆಗೆದಾಗ ಹಾಸಿಗೆಯ ಮೇಲೆ ತನು ಹೆಣವಾಗಿ ಬಿದ್ದಿದ್ದಳು.
ರೂಮ್ ಪೂರ್ತಿ ರಕ್ತದ ಮಡುವಿನಲ್ಲಿತ್ತು. ಕುತ್ತಿಗೆಯನ್ನು ಸೀಳಿ ಆಕೆಯ ಕೊಲೆಗೈಯಲಾಗಿತ್ತು. ಪೊಲೀಸರು ಮೃತ ದೇಹವನ್ನು ತೆಗೆದುಕೊಂಡು ಪೋಸ್ಟ್ ಮಾರ್ಟಂ ಗಾಗಿ ಕಳುಹಿಸಿದ್ದಾರೆ. ಪೊಲೀಸರು ಆರೋಪಿ ಸುಭಾಷ್ ನನ್ನು ಶೋಧಿಸುತ್ತಿದ್ದಾರೆ.