ಕೋಟಿ ಗಳ ಮೊತ್ತದ ಈ ಕುದುರೆಯನ್ನು ಕೊಳ್ಳಲು ಬಯಸಿದ ಬಾಲಿವುಡ್ ನಟ ಸಲ್ಮಾನ್ ಖಾನ್: ಆದರೆ ಕುದುರೆ ಮಾಲಿಕ ಕೊಟ್ಟ ಉತ್ತರವೇನು?

ಪಂಜಾಬ್ ರಾಜ್ಯದ ಫರೀದಕೋಟ್ ನಲ್ಲಿ ನಡೆದಂತಹ ಕುದುರೆಗಳ ಮೇಳದಲ್ಲಿ ಸುಮಾರು 5 ಲಕ್ಷ ರೂಪಾಯಿಗಳಿಂದ ಹಿಡಿದು 5 ಕೋಟಿ ರೂಪಾಯಿಗಳವರೆಗಿನ ಕುದುರೆಗಳು ಮಾರಾಟಕ್ಕೆ ಬಂದಿದ್ದವು. ಈ ಕುದುರೆ ಮೇಳದಲ್ಲಿ ಕೆಲವು ವಿಶೇಷ ಕುದುರೆಗಳು ಪ್ರಮುಖ ಆಕರ್ಷಣೆಯಾಗಿದ್ದವು. ಇಂತಹ ವಿಶೇಷ ಕುದುರೆಗಳನ್ನು ನೋಡುವುದಕ್ಕಾಗಿ ಅಲ್ಲಿನ ಜನರು ಕೂಡಾ ಬಹಳ ಉತ್ಸಾಹವನ್ನು ತೋರಿಸುತ್ತಾ ದೂರ ದೂರದ ಪ್ರದೇಶಗಳಿಂದ ಕುದುರೆ ಮೇಳಕ್ಕೆ ಆಗಮಿಸಿದ್ದರು. ಕುದುರೆ ಮೇಳದಲ್ಲಿ ಭಾಗವಹಿಸಿದ್ದ ಕುದುರೆಗಳಲ್ಲಿ ದೇವ್ ಹೆಸರಿನ ಕುದುರೆಯೊಂದನ್ನು ಖರೀದಿ ಮಾಡಲು ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ಕೋಟಿಗಳ ಮೊತ್ತದಲ್ಲಿ ಆಫರ್ ಅನ್ನು ನೀಡಿದ್ದರೂ ಕೂಡಾ ಆ ಕುದುರೆಯ ಮಾಲಿಕ ಅದನ್ನು ತಿರಸ್ಕಾರ ಮಾಡಿ, ತನ್ನ‌ ಕುದುರೆಯನ್ನು ಮಾರಲು ಒಪ್ಪಿಲ್ಲ ಎನ್ನುವ ವಿಷಯವೊಂದು ತಿಳಿದು ಬಂದಿದೆ.

ಕುದುರೆಯ ಮೇಳದಲ್ಲಿ ಹಲವು ಪ್ರಭೇದದ ಕುದುರೆಗಳು ಭಾಗವಹಿಸಿದ್ದವು. ಆದರೂ ಕೂಡಾ ದೇವರಾಜ್ ಹೆಸರಿನ ಕುದುರೆಯ ಮೇಲೆ ಹೆಚ್ಚಿನ ಜನರ ದೃಷ್ಟಿ ಹರಿದಿತ್ತು. ಈ ಕುದುರೆಯ ಮಾಲೀಕರ ಹೆಸರು ಅಮ‌ನ್ ದೀಪ್ ಸನ್ನಿ ಗಿಲ್. ದೇವರಾಜ ಹೆಸರಿನ ಈ ಕುದುರೆಯ 5 ಸಂತಾನಗಳು ಕೂಡಾ ಈಗಾಗಲೇ ಭಾರತೀಯ ಚಾಂಪಿಯನ್ ಶಿಪ್ ನಲ್ಲಿ ವಿಜೇತ ವಾಗಿದೆ ಎನ್ನಲಾಗಿದೆ. ಈ ಕುದುರೆಯನ್ನು ಖರೀದಿಸುವ ಸಲುವಾಗಿ ಹಲವು ಕುದುರೆ ಪ್ರೇಮಿಗಳು ದೊಡ್ಡಮೊತ್ತದ ಬೆಲೆಯನ್ನು ಆಫರ್ ನೀಡಿದ್ದರೆಂದೂ, ಇನ್ನೂ ಕೆಲವರು ಬ್ಲಾಂಕ್ ಚೆಕ್ ಗಳನ್ನು ನೀಡುವ ಮೂಲಕ ಕುದುರೆಯನ್ನು ಖರೀದಿ ಮಾಡುವ ಆಸಕ್ತಿಯನ್ನು ತೋರಿಸಿದರು ಎನ್ನುತ್ತಾರೆ ಈ ಕುದುರೆಯ ಮಾಲಿಕ ಅಮನ್ ದೀಪ್. ಆದರೆ ತನ್ನ ಕುದುರೆಯನ್ನು ಸಾಕುವ ಹವ್ಯಾಸದಿಂದಾಗಿ ಈ ಕುದುರೆಯನ್ನು ಸಾಕಿದ್ದು ಅದನ್ನು ತಾನು ಮಾರಾಟ ಮಾಡುವುದಿಲ್ಲ ಎಂದಿದ್ದಾರೆ.

ಪಂಜಾಬ್ ನಲ್ಲಿ ನಡೆದಂತಹ ಈ ಕುದುರೆ ಮೇಳದಲ್ಲಿ ಒಟ್ಟು 300 ತಳಿಯ ವಿಶೇಷ ಕುದುರೆಗಳು ಭಾಗವಹಿಸಿದ್ದವು ಎನ್ನಲಾಗಿದ್ದು, ಕುದುರೆಗಳ ಬೆಲೆಯೂ ಆಶ್ಚರ್ಯವನ್ನು ಉಂಟು ಮಾಡಿತ್ತು. ಸುಮಾರು 5 ಲಕ್ಷದಿಂದ ಹಿಡಿದು 5 ಕೋಟಿ ಬೆಲೆ ಬಾಳುವ ಕುದುರೆಗಳು ಈ ಮೇಳದ ವಿಶೇಷ ಆಕರ್ಷಣೆಯಾಗಿದ್ದವು. ಈ ಮೇಳಕ್ಕೆ ಪಂಜಾಬ್ ಮಾತ್ರವೇ ಅಲ್ಲದೆ ರಾಜಸ್ಥಾನದ ಜೈಪುರ ಮತ್ತು ಅಜ್ಮೀರ್ ಗಳಿಂದಲೂ ಕೂಡಾ ಕುದುರೆಗಳನ್ನು ಅವುಗಳ ಮಾಲೀಕರು ಕರೆ ತಂದಿದ್ದರು. ಇಲ್ಲಿ ಚಾಂದಿ, ಮಾರ್ವಾಡಿ ಹಾಗೂ ತುಕ್ರ ತಳಿಯ ಕುದುರೆಗಳು ಈ ಮೇಳದಲ್ಲಿ ಜನರ ಗಮನವನ್ನು ಸೆಳೆದಿದ್ದವು.

ಪಂಜಾಬ್‌ ನ ಫರೀದಕೋಟ್ ನಲ್ಲಿ ಈ ಕುದುರೆಗಳ ಮೇಳವನ್ನು ಸರ್ಕಾರದ ಸಹಯೋಗದಲ್ಲಿ ಗೋವಿಂದ ಸಿಂಗ್ ಹಾರ್ಸ್ ಬ್ರೀಡ್ ಸೊಸೈಟಿ ಆಯೋಜಿಸಿ ಪ್ರದರ್ಶನಕ್ಕೆ ಅವಕಾಶವನ್ನು ಮಾಡಿಕೊಟ್ಟಿತ್ತು. ರಾಜ್ಯ ಸರ್ಕಾರದ ಅನುಮತಿಯೊಂದಿಗೆ ನಡೆದ ಈ ಕುದುರೆಗಳ ಮೇಳದ ಪ್ರಮುಖ ಉದ್ದೇಶವು ಜಾನುವಾರಗಳ ಸಾಕಣೆಗೆ ಉತ್ತೇಜನವನ್ನು ನೀಡುವುದು ಹಾಗೂ ಪ್ರಾಣಿಗಳ ತಳಿಯನ್ನು ಸುಧಾರಿಸುವುದು ಎನ್ನಲಾಗಿದೆ. ಪಂಜಾಬ್ ಸರ್ಕಾರದ ರಾಜಕೀಯ ಸಲಹೆಗಾರ ಹಾಗೂ ಫರೀದ್ ಕೋಟ್ ನ ಶಾಸಕರೂ ಆಗಿರುವ ಕೌಶಲ್ ದೀಪ್ ಸಿಂಗ್ ಧಿಲ್ಲೋನ್ ಅವರು ಈ ಕುದುರೆಗಳ ಮೇಳವನ್ನು ಆಯೋಜನೆ ಮಾಡಿದ್ದರು.

ಈ ಮೇಳದಲ್ಲಿ ಚಾಂದಿ, ಮಾರ್ವಾಡಿ ಹಾಗೂ ನುಕ್ರಾ ತಳಿಯ ಕುದುರೆಗಳು ಜನರ ಪ್ರಮುಖ ಆಕರ್ಷಣೆಯಾಗಿದ್ದವಾದರೂ, ಎಲ್ಲಾ ಕುದುರೆಗಳಲ್ಲಿ ದೇವ್ ಮತ್ತು ಪರಮ್ ವೀರ್ ಎನ್ನುವ ಎರಡು ಕುದುರೆಗಳು ಮಾತ್ರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದವು. ದೇವ್ ನ ಮಾಲಿಕರು ಮಾತನಾಡುತ್ತಾ ಈ ಕುದುರೆಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೋಟಿಗಳ ಮೊತ್ತದಲ್ಲಿ ಹಣ ನೀಡಿ ಕೊಳ್ಳು ಸಿದ್ಧರಿದ್ದರು, ಆದರೆ ತಾನು ಮಾರಾಟ ಮಾಡುವುದಿಲ್ಲ ಎಂದಿದ್ದಾರೆ. ಇನ್ನು ಕುದುರೆ ಮೇಳದಲ್ಲಿ ಕೂಡಾ ಸುಮಾರು ಐದು ಕೋಟಿ ರೂಪಾಯಿಯವರೆಗೂ ಈ ಕುದುರೆಯನ್ನು ಕೊಳ್ಳುವುದಕ್ಕೆ ಕುದುರೆ ಪ್ರಿಯರು ಆಸಕ್ತಿಯನ್ನು ತೋರಿಸಿದರು ಆದರೆ ಅಮನ್ ದೀಪ್ ಕುದುರೆಯನ್ನು ಮಾರಾಟ ಮಾಡಿಲ್ಲ.